ಇಂದು ಸೊನೆಟ್ ಬರೆಯುವ ವಿಶೇಷ ಕಮ್ಮಟ
Team Udayavani, Apr 28, 2021, 1:13 PM IST
ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯದ ವತಿ ಯಿಂದ ಎ. 28ರಂದು ಮಧ್ಯಾಹ್ನ 12ರಿಂದ ಸೊನೆಟ್ (ಸುನೀತ) ಬರೆಯುವ ಕ್ರಮದ ಕುರಿತು ವಿಶೇಷ ಕಮ್ಮಟವು ಹಿರಿಯ ಸಾಹಿತಿಗಳು, ವಿದ್ವಾಂಸ ಡಾ| ಜೀವಿ ಕುಲಕರ್ಣಿ ಅವರ ನಿರ್ದೇಶನದಲ್ಲಿ ಆನ್‌ಲೈನ್ ಮೂಲಕ ನಡೆಯಲಿದೆ.
ಕನ್ನಡ ವಿಭಾಗ ಮುಂ ಬಯಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕುವೆಂಪು,
ಕಣವಿ, ಸನದಿ ಅವರ ಸುನೀತಗಳನ್ನು ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್, ಅಮೃತಾ ಶೆಟ್ಟಿ ಹಾಗೂ ಕಲಾ ಭಾಗ್ವತ್ ಅವರು ವಾಚನ ಮಾಡಲಿದ್ದಾರೆ.
ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಸಂಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಝೂಮ್ ಮೂಲಕ ಪಾಲ್ಗೊಳ್ಳಬಹುದು ಅಥವಾ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲ ಯದ ಫೇಸ್‌ಬುಕ್ ಪೇಜ್ ಮೂಲಕ ನೇರಪ್ರಸಾರ ವೀಕ್ಷಿಸಬಹುದು ಎಂದು ವಿಭಾಗದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ
ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ
ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್ ಜಾನ್ಸನ್