Udayavni Special

ಭಗವಂತನಿಗೆ ಪ್ರಿಯವಾದ ದ್ರವ್ಯ ತುಳಸಿ: ಸಚ್ಚಿದಾನಂದ ರಾವ್‌

Team Udayavani, Nov 24, 2020, 7:51 PM IST

ಭಗವಂತನಿಗೆ ಪ್ರಿಯವಾದ ದ್ರವ್ಯ ತುಳಸಿ: ಸಚ್ಚಿದಾನಂದ ರಾವ್‌

ಮುಂಬಯಿ, ನ. 23: ಮೀರಾರೋಡ್‌ ಪೂರ್ವದ ಗೀತಾ ನಗರದಲ್ಲಿರುವ ಪ್ರತಿಷ್ಠಿತ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಅವರಣದಲ್ಲಿ ತುಳಸಿ ಪೂಜೆಯು ದೀಪಾವಳಿ ಬಲಿಪಾಡ್ಯಮಿಯಂದು ಆರಂಭಗೊಂಡಿದ್ದು, ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ನೇತೃತ್ವದಲ್ಲಿ ನ. 27ರ ಉತ್ಥಾನ ದ್ವಾದಶಿವರೆಗೆ 12 ದಿನಗಳ ಕಾಲ ತುಳಸಿ ಸಂಕೀರ್ತನೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸಂಜೆಯಾಗುತ್ತಿದ್ದಂತೆ ಶ್ರೀ ಬಾಲಾಜಿ ಮಂದಿರದ ಸುತ್ತಮುತ್ತಲಿನ ಪ್ರಾಂಗಣದಲ್ಲಿ ಸಾಲು ಸಾಲಿನಲ್ಲಿ  ಪಜ್ವಲಿಸುವ ಸ್ವದೇಶಿ ನಿರ್ಮಿತ ಹಣತೆ ದೀಪಗಳ ಸೊಬಗು, ರಂಗು ರಂಗಿನ ಗೂಡುದೀಪ, ಸನ್ನಿಧಿಯಲ್ಲಿ ಮೊಳಗುವ ಶಂಖನಾದ, ಗಂಟೆಗಳ ಧ್ವನಿ ಆತ್ಮಸ್ಥೆರ್ಯವನ್ನು ಹೆಚ್ಚುಸುತ್ತಿದೆ. ಕಾರ್ತಿಕ ಮಾಸದಲ್ಲಿ ಆಚರಿಸುವಂತಹ ವಿಶೇಷ ಆಚರಣೆಯಲ್ಲಿ ತುಳಸಿ ಪೂಜೆಯು ಅತ್ಯಂತ ಪ್ರಧಾನವಾಗಿದ್ದು, ಮಠದ ಅವರಣದಲ್ಲಿರುವ ತುಳಸಿ ಕಟ್ಟೆಯನ್ನು ರಂಗೋಲಿಯಿಂದ ಶೃಂಗರಿಸಿ ಆರಾಧಿಸಲಾಗುತ್ತಿದೆ.

ಟ್ರಸ್ಟಿ ಸಚ್ಚಿದಾನಂದ ರಾವ್‌ ತುಳಸಿ ಮಹತ್ವವನ್ನು ವಿವರಿಸಿ, ಲಕ್ಷ್ಮೀ ದೇವಿಯ ಪ್ರತಿರೂಪಳಾದ ತುಳಸಿದೇವಿ ಮಾತೆಯನ್ನು ಸಂಕೀರ್ತನೆಯೊಂದಿಗೆ ಭಜಿಸಲಾಗುತ್ತಿದೆ. ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಗಾಗಿ ತುಳಸಿ ಗಿಡಕ್ಕೆ ಮುಂಜಾನೆ ನೀರೆರೆದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನ ಹೊಂದಿರುವ ತುಳಸಿ ಔಷಧೀಯ ಗುಣವನ್ನು ಹೊಂದಿದೆ. ತುಳಸಿ ದಳವನ್ನು ಬಳಸದೆ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ. ಒಂದು ಹನಿ ತುಳಸಿ ನೀರು ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ಭಗವಂತನಿಗೆ ಪ್ರೀಯವಾದ ದ್ರವ್ಯ ತುಳಸಿಯಾಗಿದೆ ಎಂದರು.

ಪಲಿಮಾರು ಮಠದ ಟ್ರಸ್ಟಿ ವಾಸುದೇವ ಎಸ್‌. ಉಪಾಧ್ಯಾಯ ಅವರ ಪೌರೋಹಿತ್ಯ ದಲ್ಲಿ ರಾತ್ರಿ ತುಳಸಿ ಪೂಜೆ, ತುಳಸಿ ಸಂಕೀರ್ತನೆ ನೆರವೇರಿತು. ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಇಚ್ಛೆ, ಸಂಕಲ್ಪ ಹಾಗೂ ಮಾರ್ಗದರ್ಶನದಂತೆ ರಾತ್ರಿ ತುಳಸಿ ಪೂಜೆ, ತುಳಸಿ ಸಂಕೀರ್ತನೆ ಕುಣಿತ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಇನ್ನಿತರ ಪೂಜಾಧಿಗಳು ನೆರವೇರಿದವು.

ಇದೇ ಸಂದರ್ಭದಲ್ಲಿ  ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ರಾಮರಾಜ್‌ ದ್ವಿವೇದಿ ಅವರಿಂದ ಪ್ರವಚನ ನಡೆಯಿತು. ಸಂಕೀರ್ತನೆಯಲ್ಲಿ ಕುಮಾರ್‌ ಸ್ವಾಮಿ ಭಟ್‌, ರಾಘವೇಂದ್ರ ಆಚಾರ್ಯ, ಪ್ರಶಾಂತ್‌ ಭಟ್‌, ಶ್ರೀಶ ಉಡುಪ, ಶಂಕರ್‌ ಗುರು ಭಟ್‌, ಗುರುಶಂಕರ್‌ ಭಟ್‌, ರಾಮ ರಾಜ್‌ ದ್ವಿವೇದಿ, ವೃಷಭ ಭಟ್‌, ಗೋಪಾಲ ಭಟ್‌, ಕೃಷ್ಣಮೂರ್ತಿ ಉಪಾಧ್ಯಾಯ ಹಾಗೂ ಶ್ರೀ ಬಾಲಾಜಿ ಭಜನ ಮಂಡಳಿಯ ಸದಸ್ಯರು, ಸದಸ್ಯೆಯರು, ತುಳು-ಕನ್ನಡಿಗರು, ಭಕ್ತರು ಪಾಲ್ಗೊಂಡಿದ್ದರು. ಸಾಮಾಜಿಕ ಅಂತರ ಹಾಗೂ ಸರಕಾರದ ಕೋವಿಡ್‌ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಭಕ್ತರು ದೇವರ ದರ್ಶನ ಪಡೆದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶೇ.7.3ರ ದರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ: ವಿಶ್ವಸಂಸ್ಥೆ

ಶೇ.7.3ರ ದರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ: ವಿಶ್ವಸಂಸ್ಥೆ

ರಫೇಲ್‌ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ

ರಫೇಲ್‌ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ

ರೈತರು, ಕಾರ್ಮಿಕರು, ಜನರ ಧ್ವನಿಯಾಗಿ ಕಾಂಗ್ರೇಸ್‌ ಕೆಲಸ ಮಾಡಲಿದೆ : ಡಿಕೆಶಿ

ರೈತರು, ಕಾರ್ಮಿಕರು, ಜನರ ಧ್ವನಿಯಾಗಿ ಕಾಂಗ್ರೇಸ್‌ ಕೆಲಸ ಮಾಡಲಿದೆ : ಡಿಕೆಶಿ

sudhakarb

ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ; ‘ಕಾಣದ ಕೈಗಳು’ ಅವರ ದಿಕ್ಕು ತಪ್ಪಿಸಿವೆ: ಸುಧಾಕರ್

“Most Unfortunate”: Shashi Tharoor On Farmers’ Flag Atop Red Fort

ರೈತರು ಕಾನೂನು ಬಾಹೀರವಾಗಿ ನಡೆದುಕೊಂಡಿರುವುದು “ಅತ್ಯಂತ ದುರದೃಷ್ಟಕರ”: ಶಶಿ ತರೂರ್

mangalore-2

ಮಂಗಳೂರು: ರೈತ ವಿರೋಧಿ ಕಾನೂನನ್ನು ಹಿಂಪಡೆಯಬೇಕೆಂದು ಆಗ್ರಹಿಸಿ SDPI‌ ನಿಂದ ಪ್ರತಿಭಟನೆ

car

ಚಿತ್ರದುರ್ಗ: ಕಾರುಗಳ‌ ನಡುವೆ ಢಿಕ್ಕಿ; ಇಬ್ಬರು ಸಾವು, ಹಲವರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನೂತನ ಕಿರು ಸಭಾಗೃಹ ಲೋಕಾರ್ಪಣೆ

ಬಂಟರ ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನೂತನ ಕಿರು ಸಭಾಗೃಹ ಲೋಕಾರ್ಪಣೆ

ನಲಸೋಪರ ಶ್ರೀ ಅಯ್ಯಪ ಭಕ್ತ ವೃಂದ : ವಾರ್ಷಿಕ ಮಹಾಪೂಜೆ, ಅರಸಿನ ಕುಂಕುಮ

ನಲಸೋಪರ ಶ್ರೀ ಅಯ್ಯಪ ಭಕ್ತ ವೃಂದ : ವಾರ್ಷಿಕ ಮಹಾಪೂಜೆ, ಅರಸಿನ ಕುಂಕುಮ

ವಾಲ್ಕೇಶ್ವರ ಕಾಶೀ ಮಠದಲ್ಲಿಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣತಿಥಿ ಆಚರಣೆ

ವಾಲ್ಕೇಶ್ವರ ಕಾಶೀ ಮಠದಲ್ಲಿಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆಚರಣೆ

Ghatkopar Shri Bhawani Saneeswara Temple

ಘಾಟ್‌ಕೋಪರ್‌ ಶ್ರೀ ಭವಾನಿ ಶನೀಶ್ವರ ದೇವಸ್ಥಾನ: ವಾರ್ಷಿಕ ಮಹಾಪೂಜೆ

Annual Founder’s Day

ಇಂದು 89ನೇ ವಾರ್ಷಿಕ ಸಂಸ್ಥಾಪನ ದಿನಾಚರಣೆ

MUST WATCH

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

udayavani youtube

ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

ಹೊಸ ಸೇರ್ಪಡೆ

ಶೇ.7.3ರ ದರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ: ವಿಶ್ವಸಂಸ್ಥೆ

ಶೇ.7.3ರ ದರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ: ವಿಶ್ವಸಂಸ್ಥೆ

ರಫೇಲ್‌ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ

ರಫೇಲ್‌ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ

ರೈತರು, ಕಾರ್ಮಿಕರು, ಜನರ ಧ್ವನಿಯಾಗಿ ಕಾಂಗ್ರೇಸ್‌ ಕೆಲಸ ಮಾಡಲಿದೆ : ಡಿಕೆಶಿ

ರೈತರು, ಕಾರ್ಮಿಕರು, ಜನರ ಧ್ವನಿಯಾಗಿ ಕಾಂಗ್ರೇಸ್‌ ಕೆಲಸ ಮಾಡಲಿದೆ : ಡಿಕೆಶಿ

sudhakarb

ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ; ‘ಕಾಣದ ಕೈಗಳು’ ಅವರ ದಿಕ್ಕು ತಪ್ಪಿಸಿವೆ: ಸುಧಾಕರ್

“Most Unfortunate”: Shashi Tharoor On Farmers’ Flag Atop Red Fort

ರೈತರು ಕಾನೂನು ಬಾಹೀರವಾಗಿ ನಡೆದುಕೊಂಡಿರುವುದು “ಅತ್ಯಂತ ದುರದೃಷ್ಟಕರ”: ಶಶಿ ತರೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.