Udayavni Special

ಕರ್ನಾಟಕ ಸಮಾಜ ಸೂರತ್‌ ವತಿಯಿಂದ ತುಳು ಪರ್ಬ ಆಚರಣೆ


Team Udayavani, Jul 5, 2019, 5:06 PM IST

0407MUM05

 

ಮುಂಬಯಿ: ಕರ್ನಾಟಕ ಸಮಾಜ ಸೂರತ್‌ ಸಂಸ್ಥೆಯ ವತಿಯಿಂದ ತುಳುಪರ್ಬ ಆಚರಣೆಯು ಜೂ. 30ರಂದು ಸೂರತ್‌ನ ಜೀವನ್‌ ಭಾರತಿ ಸಭಾಂಗಣದಲ್ಲಿ ತುಳು ಸಂಘ ಅಂಕಲೇಶ್ವರ ಇದರ ಗೌರವಾಧ್ಯಕ್ಷ ತೋನ್ಸೆ ರವಿನಾಥ್‌ ವಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗುಜರಾತ್‌ನಲ್ಲಿ ತುಳುವರು ತುಳು ಭಾಷೆಯ ಆರಾಧನೆಯನ್ನು ನಡೆಸುತ್ತಿರುವುದು ಅಭಿಮಾನದ ವಿಷಯವಾಗಿದೆ. ನಮ್ಮ ನಾಡಿನ ಆಚಾರ, ವಿಚಾರ ತುಳುಪರ್ಬದ ಮೂಲಕ ಆಚರಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ವಿದ್ಯಾಶ್ರೀ ಎಸ್‌. ಉಳ್ಳಾಲ್‌ ಅವರು, ತಮ್ಮ ಕವನದೊಂದಿಗೆ ಮಾತು ಆರಂಭಿಸಿ, ತುಳುನಾಡಿನ ಭಾಷೆ, ಆಚರಣೆ ಮತ್ತು ಸಂಸ್ಕೃತಿಯ ಬಗ್ಗೆ ನಾಗಾರಾಧನೆ ದೈವಾರಾಧನೆ ಬಗ್ಗೆ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಇಂದಿನ ಯುವಪೀಳಿಗೆಗೆ ತಿಳಿಯಪಡಿಸುವ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಭಾಗಿಯಾಗುವಂತೆ ಮಾಡುವುದು ಪಾಲಕರ ಕರ್ತವ್ಯವಾಗಿದೆ ಎಂದು ನುಡಿದು ಸಂಸ್ಥೆಗೆ ಶುಭ ಹಾರೈಸಿದರು.

ಕರ್ನಾಟಕ ಸಮಾಜ ಸೂರತ್‌ ಸಂಸ್ಥೆಯ ಅಧ್ಯಕ್ಷರಾದ ದಿನೇಶ್‌ ಶೆಟ್ಟಿಯವರು ಮಾತನಾಡಿ, ಸಂಘದ ಸದಸ್ಯರ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ತುಂಬು ಹೃದಯದಿಂದ ಸಹಕರಿಸುತ್ತಿರುವುದು ಅಭಿನಂದನೀಯ. ಸಂಘದ ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.

ಸಭಾ ಕಾರ್ಯಕ್ರಮವು ರವಿನಾಥ್‌ ವಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಕರ್ನಾಟಕ ಸಮಾಜ ಸೂರತ್‌ ಸಂಸ್ಥೆಯ ನಿಕಟ ಪೂರ್ವಾಧ್ಯಕ್ಷರಾದ ಮನೋಜ್‌ ಸಿ. ಪೂಜಾರಿ ಅವರು ಮಾತನಾಡಿ, ಸಂಘದ ಏಳ್ಗೆಗಾಗಿ ಎಲ್ಲರೂ ಒಮ್ಮತದಿಂದ ಶ್ರಮಿಸಬೇಕು. ನಾವೆಲ್ಲರೂ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ ಎಂದು ಕರೆ ನೀಡಿದರು.

ಬರೋಡ ತುಳು ಸಂಘದ ಅಧ್ಯಕ್ಷರಾದ ಶಶಿಧರ ಶೆಟ್ಟಿ ಅವರು ಸೂರತ್‌ ಕರ್ನಾಟಕ ಸಮಾಜವು ಸೂರತ್‌ನ ಅಕ್ಕ ಪಕ್ಕದ ಊರುಗಳಿಗೆ ಮಾದರಿಯಾಗಿದೆ ಎಂದರು. ರಂಜನಿ ಪಿ. ಶೆಟ್ಟಿ ಮತ್ತು ಪವಿತ್ರಾ ಬಿ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ತುಳು ಕವಿ ಕುಶಾಲಾಕ್ಷಿ ವಿ. ಕುಲಾಲ್‌ ಅವರು ಕಳುಹಿಸಿಕೊಟ್ಟ ಪನಿ ಮುತ್ತು ಮಾಲೆ ಕವನ ಸಂಕಲನದ ಹೊತ್ತಿಗೆಯನ್ನು ವೇದಿಕೆಯ ಗಣ್ಯರಿಗೆ ಹಸ್ತಾಂತರಿಸಲಾಯಿತು

ಕಾರ್ಯಕ್ರಮದಲ್ಲಿ ನವ ವಿವಾಹಿತ ದಂಪತಿಗಳನ್ನು ಸಮ್ಮಾನಿಸಲಾಯಿತು. ವಸಂತ್‌ ಶೆಟ್ಟಿ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಹಬ್ಬದ ಹಾಗೂ ರವಿನಾಥ್‌ ಶೆಟ್ಟಿ ದಂಪತಿ ಮತ್ತು ರಾಧಾಕೃಷ್ಣ ಮೂಲ್ಯ ದಂಪತಿಯ ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು ವೈಭವದಿಂದ ಆಚರಿಸಿ ಸಮ್ಮಾನಿಸಲಾಯಿತು. ಅಮಿತಾ ಯು. ಸಫಲಿಗ‌ ಪ್ರಾರ್ಥನೆಗೈದರು. ಚಂದ್ರಶೇಖರ್‌ ಎಸ್‌. ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಕಲೇಶ್ವರ ಸೂರತ್‌ ತುಳುವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ಒಯಕ್‌ಲಾ ದಿನ ಬರೊಡು ನಾಟಕ ಪ್ರದರ್ಶನಗೊಂಡಿತು. ಪ್ರಾಯೋಜಕರನ್ನು ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷ ದಿನೇಶ್‌ ಬಿ. ಶೆಟ್ಟಿ, ಗೌರವಾಧ್ಯಕ್ಷ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್‌ ಭಂಡಾರಿ ಬಾಡೋìಲಿ, ಉಮೇಶ್‌ ಸಫಲಿಗ, ಅಜಿತ್‌ ಅಂಕಲೇಶ್ವರ್‌, ಪ್ರಭಾಕರ ಶೆಟ್ಟಿ ಕೊಸಂಬಾ, ವನಿತಾ ಜೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕೆ., ಜತೆ ಕಾರ್ಯದರ್ಶಿ ಶಾಂತಿ ಡಿ. ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ್‌ ಬಿ. ಸಫಲಿಗ, ಜತೆ ಕೋಶಾಧಿಕಾರಿ ಪ್ರಶಾಂತ್‌ ಶೆಟ್ಟಿಗಾರ್‌, ಸಂಘಟನಾ ಕಾರ್ಯದರ್ಶಿ ಸಂತೋಷ್‌ ವಿ. ಶೆಟ್ಟಿ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಸದಸ್ಯರಾದ ಮನೋಜ್‌ ಸಿ. ಪೂಜಾರಿ, ವಿಶ್ವನಾಥ್‌ ಪೂಜಾರಿ, ರತ್ನಾಕರ್‌ ಕೋಟ್ಯಾನ್‌, ಸುನಿತಾ ಆರ್‌. ಶೆಟ್ಟಿ, ರಮೇಶ್‌ ರೈ, ಅಮಿತಾ ಯು. ಸಫಲಿಗ, ರಂಜನಿ ಪಿ. ಶೆಟ್ಟಿ, ಅಮಿತಾ ಜೆ. ಶೆಟ್ಟಿ, ಗಂಗಾಧರ ಶೆಟ್ಟಿಗಾರ್‌, ಸತೀಶ್‌ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

ನಾಯಕರಿಗೇಕೆ 2 ಕ್ಯಾಪ್‌?

ಐಪಿಎಲ್‌ 2020: ತಂಡದ ನಾಯಕರಿಗೇಕೆ 2 ಕ್ಯಾಪ್‌?

ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ; ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌!

ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ

IPLIPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

IPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mumbai-tdy-1

ಗ್ರಾಮದ ಒಳಿತಿಗೆ ಶ್ರಮಿಸೋಣ: ಸುರೇಶ್‌ ಕಾಂಚನ್‌

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

mumbai-tdy-1

ಕೋವಿಡ್‌ ಮಾರ್ಗಸೂಚಿ ಅನುಸರಿಸಿ ದೇವರ ದರ್ಶನ: ಸಚ್ಚಿದಾನಂದ

Mumbai-tdy-1

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: ನವರಾತ್ರಿ ಉತ್ಸವಕ್ಕೆ ಚಾಲನೆ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.