“ತುಳುಪರ್ಬ-ತುಳು ಪೊರ್ಲು ಲೇಸ್‌’ ಭರದ ಸಿದ್ಧತೆ

ಕಲಾಜಗತ್ತು ಮುಂಬಯಿ

Team Udayavani, Apr 5, 2019, 12:20 PM IST

ಮುಂಬಯಿ: ನಗರದ ಪ್ರತಿಷ್ಠಿತ ಕಲಾಸಂಸ್ಥೆ ಕಲಾಜಗತ್ತು ಮುಂಬಯಿ ಇದರ 40ನೇ ವಾರ್ಷಿಕೋತ್ಸವ ಸಮಾರಂಭವು ಎ. 7ರಂದು ಮಧ್ಯಾಹ್ನ 1.30 ರಿಂದ ರಾತ್ರಿ 9.30ರ ವರೆಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

1979ರಲ್ಲಿ ಸ್ಥಾಪನೆಗೊಂಡ ಕಲಾ ಜಗತ್ತು ಅನೇಕ ಕಲಾ ಕಾರ್ಯಕ್ರಮ ಗಳನ್ನು ನೀಡುತ್ತಾ ಬಂದಿದೆ. ಪ್ರಸ್ತತ ಲಿಮ್ಕಾಬುಕ್‌ ರಾಷ್ಟ್ರೀಯ ದಾಖಲೆಯ ಮಹಾನ್‌ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಲಾಜಗತ್ತು ಸಂಸ್ಥೆಯ ಸಂಸ್ಥಾಪಕ ಡಾ| ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರ ಪರಿಕಲ್ಪನೆ, ಆಯೋಜನೆಯಲ್ಲಿ ಗಣ್ಯಾಥಿ-ಗಣ್ಯರ ಉಪಸ್ಥಿತಿಯಲ್ಲಿ ತುಳುಪರ್ಬವನ್ನು ಆಯೋಜಿಸಲಾಗಿದ್ದು, ಅದಕ್ಕಾಗಿ ಭರದ ಸಿದ್ಧತೆಯು ನಡೆಯುತ್ತಿದೆ. ಕಲಾಜಗತ್ತು ಸಂಸ್ಥೆಯ ಪ್ರಾರಂಭದ “ವಸುಂಧರಾ’ ನಾಟಕದಿಂದ ಹಿಡಿದು ಪ್ರಸಿದ್ಧ ನಾಟಕಗಳಲ್ಲಿ ಅಂದಿನ ಕಾಲದಲ್ಲಿ ಕಲಾವಿದರಾಗಿ ನಟಿಸಿದ್ದ ಕಲಾವಿದರು ಮತ್ತೆ ಒಂದೇ ವೇದಿಕೆಯಲ್ಲಿ ಸಮಾವೇಷಗೊಳ್ಳುವ ಅಪರೂಪದ ಕ್ಷಣ ಇದಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಾಟಕೋತ್ಸವವು ಅಪರಾಹ್ನ 3.30ರಿಂದ ಪ್ರಾರಂಭಗೊಳ್ಳಲಿದೆ. ಕಲಾಜಗತ್ತು ಸಂಸ್ಥೆಯ ಪ್ರಸಿದ್ಧ ಹಿರಿ ಯ ಕಲಾವಿದರಿಂದ ಸಂಸ್ಥೆಯಿಂದ ಯಶಸ್ವಿ ಪ್ರದರ್ಶನಗೊಂಡ ಪ್ರಸಿದ್ಧ ನಾಟಕಗಳ ತುಣುಕುಗಳು ಇದೇ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿವೆ. “ವಸುಂಧರಾ’ ನಾಟಕವು ಲಕ್ಷ್ಮಣ್‌ ಕಾಂಚನ್‌ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದ್ದು, ಕಲಾವಿದರುಗಳಾಗಿ ಉಮೇಶ್‌ ಶೆಟ್ಟಿ, ರಮೇಶ್‌ ಕುಂದರ್‌, ಸರೋಜಾದೇವಿ, ಲಕ್ಷ್ಮಣ್‌ ಕುಂದರ್‌ ಭಾಗವಹಿಸಲಿದ್ದಾರೆ.

ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಇವರ ನಿರ್ದೇಶನದ “ಭೂತದ ಇಲ್‌É’ ನಾಟಕದಲ್ಲಿ ಕಲಾವಿದರುಗಳಾಗಿ ರಘುರಾಜ್‌, ವಿಜಯ ಕುಮಾರ್‌ ಶೆಟ್ಟಿ, ಚಂದ್ರಪ್ರಭಾ, ಧನುಶ್ಮತಿ, ಸರೋಜಾದೇವಿ, ಲಕ್ಷ್ಮಣ್‌, ಲೀಲೇಶ್‌, ಆಶು, ಸುರೇಶ್‌ ಎಂ., ಸುಂದರ್‌ ಅಡಪ, ಲಾರೆನ್ಸ್‌ ಅವರು ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಮೋಹನ್‌ ಮಾರ್ನಾಡ್‌ ನಿರ್ದೇಶನದ “ಈ ನಲ್ಕೆ ದಾಯೆ’ ನಾಟಕದಲ್ಲಿ ಮೋಹನ್‌ ಮಾರ್ನಾಡ್‌, ಸರೋಜಾದೇವಿ, ಲೀಲೇಶ್‌ ಮೊದಲಾದವರು ಹಾಗೂ ಲೀಲೇಶ್‌ ಶೆಟ್ಟಿ ಅವರ ನಿರ್ದೇಶನದ “ಬರ್ಸ’ ನಾಟಕದಲ್ಲಿ ಎಚ್‌. ಮೋಹನ್‌, ಜಗದೀಶ್‌ ರಾವ್‌, ವೀಣಾ ಸರಪಾಡಿ ಭಾಗವಹಿಸಲಿದ್ದಾರೆ.

ಸರೋಜಾದೇವಿ ನಿರ್ದೇಶನದ “ಒರಿಯೆ ಮಗೆ ಒರಿಯೆ’ ನಾಟಕದಲ್ಲಿ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ರೇಷ್ಮಾ ಶೆಟ್ಟಿ, ಎಚ್‌. ಮೋಹನ್‌ ಅವರು ಪಾಲ್ಗೊಳ್ಳಲಿದ್ದಾರೆ. ಚಂದ್ರಾವತಿ ಅವರ ನಿರ್ದೇಶನದ “ಊರುದ ಮಾರಿ’ ನಾಟಕದಲ್ಲಿ ಜಗದೀಶ್‌, ಜ್ಯೂಲಿಯೆಟ್‌, ಹೇಮಂತ್‌ ಶೆಟ್ಟಿ, ಕೃಷ್ಣರಾಜ್‌ ಶೆಟ್ಟಿ ನಿರ್ದೇಶನದ “ಗುಬ್ಬಚ್ಚಿ’ ನಾಟಕದಲ್ಲಿ ಕೃಷ್ಣರಾಜ್‌ ಶೆಟ್ಟಿ, ಚಂದ್ರಾವತಿ, ಎನ್‌. ಪೃಥ್ವಿರಾಜ್‌ ಮುಂಡ್ಕೂರು ಅವರು ಭಾಗವಹಿಸಲಿದ್ದಾರೆ.

ಎನ್‌. ಪೃಥ್ವಿರಾಜ್‌ ಮುಂಡ್ಕೂರು ನಿರ್ದೇಶನದ “ಈ ನಲ್ಕೆ ದಾಯೆ’ ನಾಟಕದಲ್ಲಿ ಎನ್‌. ಪೃಥ್ವಿರಾಜ್‌, ನಿಶಾ ಮೊಲಿ, ಜ್ಯೂಲಿಯೆಟ್‌, ಜಗದೀಶ್‌, ಸುರೇಶ್‌ ಕೆ. ಶೆಟ್ಟಿ, ಸುರೇಶ್‌ ಶೆಟ್ಟಿ ಡೊಲಿ, ದರ್ಶನ್‌ ಶೆಟ್ಟಿ ಹಾಗೂ ರಘುರಾಜ್‌ ಕುಂದರ್‌ ಅವರ ನಿರ್ದೇಶನದ “ಎನಡಾªವಂದ್‌’ ನಾಟಕ ದಲ್ಲಿ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಚಂದ್ರಾವತಿ, ವಿಜಯ ಕುಮಾರ್‌ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.

ಅಮಿತಾ ಜತ್ತಿನ್‌ ನಿರ್ದೇಶನದ “ಅಪ್ಪೆ ಸೀತೆ’ ನಾಟಕದಲ್ಲಿ ರೇಷ್ಮಾ ಶೆಟ್ಟಿ, ಸಾಕ್ಷೀ, ಕೃತಿಕಾ, ಮೇಘಾ, ಜೋತ್ಸಾ° ದೇವಾಡಿಗ ಮೊದಲಾದವರು ಭಾಗವಹಿಸಲಿದ್ದಾರೆ. ಪ್ರಭಾಕರ ಶೆಟ್ಟಿ ನಿರ್ದೇಶನದ “ಮೋಕ್ಷ’ನಾಟಕದಲ್ಲಿ ಹರೀಶ್‌ ಶೆಟ್ಟಿ, ಹೇಮಂತ್‌ ಶೆಟ್ಟಿ, ದರ್ಶನ್‌ ಶೆಟ್ಟಿ ಹಾಗೂ ಲತೇಶ್‌ ಶೆಟ್ಟಿ ನಿರ್ದೇಶನದ “ಈ ಬಾಲೆ ನಮ್ಮವು’ ನಾಟಕದಲ್ಲಿ ಸುಧಾ, ಪ್ರಭಾಕರ್‌, ಜೀವಿಕಾ ಶೆಟ್ಟಿ ಪೇತ್ರಿ, ಲತೇಶ್‌, ವೀಣಾ, ವಿಶ್ವನಾಥ್‌ ಶೆಟ್ಟಿ ಪೇತ್ರಿ, ಅಶು ಪಾಂಗಾಳ್‌, ಜಯಾನಂದ ಶೆಟ್ಟಿ ಮತ್ತು ವಿಜಯಕುಮಾರ್‌ ಶೆಟ್ಟಿ ಭಾಗವಹಿಸಲಿದ್ದಾರೆ.

ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ನಿರ್ದೇಶನದ “ಶರಶಯೆÂ’ ನಾಟಕದಲ್ಲಿ ಶ್ರೇಯಸ್‌ ಎಸ್‌. ಹೆಗ್ಡೆ, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಕೃಷ್ಣರಾಜ್‌ ಶೆಟ್ಟಿ, ಚಂದ್ರಾವತಿ ಅವರು ಪಾಲ್ಗೊಳ್ಳಲಿದ್ದಾರೆ. ಸಂಜೆ 6.30 ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದ್ದು, ಆನಂತರ ಡಾ| ವಿಜಯಕುಮಾರ್‌ ಶೆಟ್ಟಿ ನಿರ್ದೇಶನ ಮತ್ತು ನಿರ್ಮಾಣದ ದಾಖಲೆಯ “ಪತ್ತನಾಜೆ’ ತುಳು ಸಿನೇಮಾ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಲಾಭಿಮಾನಿಗಳು, ತುಳು-ಕನ್ನಡಿಗರು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕ ರಿಸುವಂತೆ ಕಲಾಜಗತ್ತು ಮುಂಬಯಿ ಇದರ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ