ತುಳುನಾಡ ತುಳುವೆರ್‌: ಶ್ರೀ ರಾಮನವಮಿ ಉತ್ಸವ

Team Udayavani, Apr 25, 2019, 2:45 PM IST

ಕಲ್ಯಾಣ್‌: ತುಳುನಾಡ ತುಳುವೆರ್‌ ಕಲ್ಯಾಣ್‌ ಇದರ ವತಿಯಿಂದ ಶ್ರೀ ರಾಮನವಮಿ ಉತ್ಸವವು ಇತ್ತೀಚೆಗೆ ಕಲ್ಯಾಣ್‌ ಪೂರ್ವದ ನ್ಯೂ ಅಜಯ್‌ ಕೋ ಆಪರೇಟಿವ್‌ ಹೌಸಿಂಗ್‌ ಸೊಸೈಟಿಯಲ್ಲಿರುವ ಸಂಘದ ಸಭಾಗೃಹದಲ್ಲಿ ನಡೆಯಿತು.

ಭಜನಾ ಕಾರ್ಯಕ್ರಮವು ಸಂಸ್ಥಾಪಕ ಅಶೋಕ್‌ ಎಲ್‌. ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಮಾ ಶೆಟ್ಟಿ, ರೇಖಾ ಶೆಟ್ಟಿ, ಅಂಜನಾ ಪೂಜಾರಿ, ಸುಮಿತ್ರಾ ಪೂಜಾರಿ, ದಯಾವತಿ ಸುವರ್ಣ, ಭವಾನಿ ಪೂಜಾರಿ ಅವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕೊನೆಯಲ್ಲಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಲಘು ಉಪಾಹಾರದ ವ್ಯವಸೆœಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ