Udayavni Special

ತುಳುವರನ್ನು ಒಗ್ಗೂಡಿಸುವ ಕಾರ್ಯಕ್ರಮ ಅಭಿನಂದನೀಯ: ಪ್ರವೀಣ್‌ ಶೆಟ್ಟಿ


Team Udayavani, Oct 27, 2019, 4:12 PM IST

mumbai-tdy-1

ಮುಂಬಯಿ, ಅ. 26: ಪಾಲ್ಘರ್‌ ಪರಿಸರದ ನಮ್ಮವರ ಬಗ್ಗೆ ಇರುವ ಪ್ರೀತಿ ಇಂದು ಇಲ್ಲಿಗೆ ನನ್ನನ್ನು ಕರೆ ತಂದಿದೆ. ಪರವೂರಿನಲ್ಲಿಯ ತುಳುವರನ್ನು ಒಂದೆಡೆ ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಅಭಿನಂದನೀಯ. ಮೀರಾ ಡಹಾಣೂ ಬಂಟ್ಸ್‌ನ ಭವಿಷ್ಯದ ಯಾವತ್ತೂ ಕಾರ್ಯಕ್ರಮಗಳಿಗೆ ನನ್ನ ಮನಃ ಪೂರ್ವಕ ಸಹಕಾರ ಇರುತ್ತದೆ ಎಂದು ವಿರಾರ್‌-ವಸಾಯಿ ಮಹಾನಗರ ಪಾಲಿಕೆಯ ಮಹಾಪೌರ ಪ್ರವೀಣ್‌ ಶೆಟ್ಟಿ ನುಡಿದರು.

ಮೀರಾ-ಡಹಾಣೂ ಬಂಟ್ಸ್‌ನ ಬೊಯಿಸರ್‌- ಪಾಲ್ಘರ್‌ ವಿಭಾಗದ ವತಿಯಿಂದ ಆಯೋಜಿ ಸಲಾಗಿದ್ದ ಅರಸಿನ ಕುಂಕುಮ ಮತ್ತು ಸ್ನೇಹ ಸಮ್ಮಿಲನದ ಸಮಾರಂಭದಲ್ಲಿ ವಿಶೇಷ ಅತಿಥಿ ಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಇನ್ನಷ್ಟು ಸಮಾಜಪರ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಮೀರಾ-ಡಹಾಣೂ ಬಂಟ್ಸ್‌ನ ಸ್ಥಾಪಕಾಧ್ಯಕ್ಷ, ವಸಾಯಿ ತಾಲೂಕು ಹೊಟೇಲ್‌ ಅಸೋಸಿ ಯೇಶನ್‌ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ಇವರು ಮಾತನಾಡಿ, ಬೊಯಿಸರ್‌-ಪಾಲ್ಘರ್‌ ವಿಭಾಗದ ಸಂಘಟಕರಿಂದ ಜರಗಿದ ಈ ಕಾರ್ಯಕ್ರಮ ಅಭಿನಂದನೀಯ. ಇನ್ನು ಮುಂದೆಯೂ ವಿವಿಧ ರೀತಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಲಿ. ಸಂಘಟನಾತ್ಮಕ ಚಟುವಟಿಕೆ ಗಳು ಕಾರ್ಯರೂಪಕ್ಕೆ ಬರುವಾಗ ವಿಭಿನ್ನ ಅಭಿಪ್ರಾಯಗಳು ಉಂಟಾಗುವುದು ಸಹಜ. ಇದನ್ನು ಪರಸ್ಪರ ಸಹಕಾರದಿಂದ ನಿವಾರಿಸಿ ಕೊಂಡು ಮುನ್ನಡೆಯಬೇಕು ಎಂದರು.

ಆರಂಭದಲ್ಲಿ ಮೀರಾ-ಡಹಾಣೂ ಬಂಟ್ಸ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಶುಭಾ ಸತೀಶ್‌ ಶೆಟ್ಟಿ ಹಾಗೂ ಬೊಯಿಸರ್‌ ಪಾಲರ್‌ ವಿಭಾಗದ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಭುಜಂಗ ಶೆಟ್ಟಿ, ಉಪಾಧ್ಯಕ್ಷೆ ಪ್ರತಿಭಾ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ವಿಶಾಲಾ ಆರ್‌. ಶೆಟ್ಟಿ ಇವರ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ಜರಗಿತು. ಮೀರಾರೋಡ್‌ ಪರಿಸರದ ಯುವ ಗಾಯಕ ವಿಜಯ ಶೆಟ್ಟಿ ಮೂಡುಬೆಳ್ಳೆ ಇವರಿಂದ ಸುಗಮ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಿತು.

ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಯಶೋದಾ ಬಿ. ಶೆಟ್ಟಿ ಅವರು ಪ್ರಾರ್ಥನೆಗೈದರು. ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಿತು. ಮೀರಾ ಡಹಾಣೂ ಬಂಟ್ಸ್‌ನ ಉಪಾಧ್ಯಕ್ಷ ಸಂಪತ್‌ ಶೆಟ್ಟಿ ಪಂಜದಗುತ್ತು ಇವರು ಪ್ರಾಸ್ತಾವಿಕ ಮಾತುಗಳನ್ನಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಂಟರ ಹಿರಿಮೆಯನ್ನು ವಿವರಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೀರಾ-ಡಹಾಣೂ ಬಂಟ್ಸ್‌ನ ಮಾಜಿ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತ ನಾಡಿ, ಯಾವ ಒಂದು ಸಂಸ್ಥೆಯ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಬೆಳೆಯುವಲ್ಲಿ ಕಾರ್ಯಕರ್ತರ ಮನಃಪೂರ್ವಕ ಭಾಗವಹಿಸುವಿಕೆ ಅತ್ಯಗತ್ಯ. ಸದಸ್ಯರ ಸ್ಪಂದನೆ ಇದ್ದಲ್ಲಿ ಸಂಸ್ಥೆ ತಾನಾಗಿ ಬೆಳೆಯುತ್ತದೆ. ಪಾಲ್ಘರ್‌ ಜಿಲ್ಲೆ ಹಿಂದುಳಿದ ವರ್ಗಗಳ ಕ್ಷೇತ್ರವೆನಿಸಿದರೂ ಇದು ಬೆಳವಣಿಗೆ ಹೊಂದಿ ಮಹಾರಾಷ್ಟ್ರದಲ್ಲೇ ನಂಬರ್‌ವನ್‌ ಸ್ಥಾನ ಪಡೆಯಲಿದೆ.

ಮೀರಾ-ಡಹಾಣೂ ಬಂಟ್ಸ್‌ನ ಪ್ರತೀ ವಿಭಾಗದಲ್ಲಿನ ಊರುಗಳಲ್ಲಿ ಈ ರೀತಿಯ ವಿಶಿಷ್ಟವಾದ ತುಳುಭಾಷಾ ಕಾರ್ಯಕ್ರಮಗಳು ಆಗುತ್ತಿರಬೇಕು. ಇದರಿಂದ ಸದಸ್ಯರ ಉತ್ಸಾಹಕ್ಕೆ ಪುನಶ್ಚೇತನ ನೀಡಿದಂತಾಗುತ್ತದೆ. ತನ್ನ ಚಟುವಟಿಕೆಗಳಿಂದ ಸಂಸ್ಥೆಯು ಬಹುಕಾಲ ಮುಂದುವರಿಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಅನುಪ ಸ್ಥಿತರಾಗಿದ್ದ ಸಂಸ್ಥೆಯ ಗೌರವಾಧ್ಯಕ್ಷ ಡಾ| ವಿರಾರ್‌ ಶಂಕರ್‌ ಬಿ. ಶೆಟ್ಟಿ, ಸಂಸ್ಥೆಯ ಅಧ್ಯಕ್ಷ, ಮೀರಾ- ಭಾಯಂದರ್‌ ಮಹಾನಗರ ಪಾಲಿಕೆಯ ನಗರ ಸೇವಕ ಅರವಿಂದ ಶೆಟ್ಟಿ ಅವರ ಶುಭ ಸಂದೇಶ ಗಳನ್ನು ಸಭೆಯಲ್ಲಿ ಓದಲಾಯಿತು.

ವೇದಿಕೆ ಯಲ್ಲಿ ಅತಿಥಿಗಳಾಗಿ ಉದ್ಯಮಿ ಭಾಸ್ಕರ್‌ ಕೆ. ಶೆಟ್ಟಿ ಬೊಯಿಸರ್‌, ಪಾಲ್ಘರ್‌ ಉದ್ಯಮಿಗಳಾದ ಮಹಾಬಲ ಬಿ. ಶೆಟ್ಟಿ, ನಾರಾಯಣ ಬಿ. ಶೆಟ್ಟಿ, ರವೀಂದ್ರ ವಿ. ಶೆಟ್ಟಿ, ನಿರ್ವಾಣ ಬಿಲ್ಡರ್ನ ಮುಕೇಶ್‌ ಶೆಟ್ಟಿ, ಸಂಸ್ಥೆಯ ಮಹಿಳಾ ವಿಭಾಗಾಧ್ಯಕ್ಷೆ ಶುಭಾ ಸತೀಶ್‌ ಶೆಟ್ಟಿ, ರತಿ ಶಂಕರ್‌ ಬಿ. ಶೆಟ್ಟಿ ವಿರಾರ್‌, ಬೊಯಿಸರ್‌-ಪಾಲ್ಘರ್‌ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಭುಜಂಗ ಶೆಟ್ಟಿ, ಮಾಜಿ ಅಧ್ಯಕ್ಷೆ ವಿಶಾಲಾ ಆರ್‌. ಶೆಟ್ಟಿ, ಬೊಯಿಸರ್‌-ಪಾಲ್ಘರ್‌ ವಿಭಾಗದ ಅಧ್ಯಕ್ಷ ವಿಜಯ್‌ ಶೆಟ್ಟಿ ಅವರು ಉಪಸ್ಥಿತರಿದ್ದರು. ಪ್ರವೀಣ್‌ ಶೆಟ್ಟಿ ದಂಪತಿಯನ್ನು ಸಂಸ್ಥೆಯ ಬೊಯಿಸರ್‌-ಪಾಲ್ಘರ್‌ ವಿಭಾಗದ ಅಧ್ಯಕ್ಷ ವಿಜಯ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.

ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳನ್ನು ಗೌರವಿಸಲಾಯಿತು. ವಿಶೇಷ ಆಕರ್ಷಣೆಯಾಗಿ ವಸಾಯಿ ಪಶ್ಚಿಮದ ಕೌಶಿಕಿ ಸಿಲ್ಕ್ ವತಿಯಿಂದ ಬಹುಮಾನ ರೂಪದಲ್ಲಿ ಸೀರೆಗಳ ಲಕ್ಕಿ ಕೂಪನ್‌ ಆಯೋಜಿ ಸಲಾಗಿತ್ತು. ನಾಗರಾಜ್‌ ಕಾರ್ಯಕ್ರಮ ನಿರ್ವಹಿಸಿದರು.

ಮೀರಾ-ಡಹಾಣೂ ಬಂಟ್ಸ್‌ ಬೊಯಿ ಸರ್‌-ಪಾಲ್ಘರ್‌ ವಿಭಾಗದ ಕಾರ್ಯಾಧ್ಯಕ್ಷ ವಿಜಯ್‌ ಶೆಟ್ಟಿ ಮಾತನಾಡಿ ಸ್ಮರಣೀಯ ಅನುಭವಗಳನ್ನು ನೆನಪಿನಲ್ಲಿಡುವಂತೆ ಮಾಡಿದ ಇಂದಿನ ಕಾರ್ಯ ಕ್ರಮದ ಯಶಸ್ಸಿಗಾಗಿ ಸಹಕರಿಸಿದ ಕಾರ್ಯಕಾರಿ ಮಂಡಳಿ, ಮಹಿಳಾ ವಿಭಾಗದ ಸದಸ್ಯರನ್ನು ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭ ಚಾಪರ್ಕ ಕಲಾವಿದರಿಂದ ದೇವದಾಸ್‌ ಕಾಪಿಕಾಡ್‌ ರಚಿಸಿ, ನಿರ್ದೇಶಿಸಿದ ಪುಷ್ಪಕ್ಕನ ವಿಮಾನ ತುಳು ನಾಟಕ ಪ್ರದರ್ಶನಗೊಂಡಿತು. ದೇವದಾಸ್‌ ಕಾಪಿಕಾಡ್‌ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

 

 ಚಿತ್ರ-ವರದಿ: ಪಿ. ಆರ್‌. ರವಿಶಂಕರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಈವರೆಗೆ ದೇಶದಲ್ಲಿ 89,983 ಮಂದಿ ಕೋವಿಡ್ 19 ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.

ಭಾರತದಲ್ಲಿ ಕೋವಿಡ್ ಅಟ್ಟಹಾಸ; ಒಂದೇ ದಿನ 8ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ

ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ

Mumbai-tdy-1

ಮಿಡತೆಗಳ ನಿಯಂತ್ರಣ ಕ್ರಮ ಸೂಚಿಸಿದ ಔರಂಗಾಬಾದ್‌ ಕೃಷಿ ವಿವಿ

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆನ್ಲೈನ್‌ ಪ್ರತಿಭಟನೆ

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆನ್ಲೈನ್‌ ಪ್ರತಿಭಟನೆ

ಬಿಎಂಸಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌

ಬಿಎಂಸಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌

ಬಾಕಿ ಬೆಳೆ ಸಾಲ: ಸರಕಾರಿ ಖಾತೆಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ನಿರ್ದೇಶ

ಬಾಕಿ ಬೆಳೆ ಸಾಲ: ಸರಕಾರಿ ಖಾತೆಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ನಿರ್ದೇಶ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ಕುಂದಾಪುರ: ಗುಣಮುಖರಾಗಿ 14 ಮಂದಿ ಬಿಡುಗಡೆ

ಕುಂದಾಪುರ: ಗುಣಮುಖರಾಗಿ 14 ಮಂದಿ ಬಿಡುಗಡೆ

31-May-16

ಶಾಸಕ ಗಣೇಶ ಆರೋಪದಲ್ಲಿ ಹುರುಳಿಲ್ಲ

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.