ವಾಶಿಯ ಶ್ರೀ ಬಾಲಾಜಿ ಮಂದಿರದ ಪರಿವಾರ ದೇವರ ವರ್ಧಂತಿ ಉತ್ಸವ

Team Udayavani, Jun 18, 2019, 4:45 PM IST

ನವಿ ಮುಂಬಯಿ: ಜಿಎಸ್‌ಬಿ ಸಭಾ ನವಿ ಮುಂಬಯಿ ಇದರ ವಾಶಿಯ ಶ್ರೀ ಬಾಲಾಜಿ ಮಂದಿರ ಪ್ರಸಿದ್ಧಿಯ ಶ್ರೀ ಲಕ್ಷಿ¾à ವೆಂಕಟರಮಣ ದೇವಸ್ಥಾನದಲ್ಲಿ ರಜತ ಸಂಭ್ರಮದ ಶುಭಾವಸರದಲ್ಲಿ ಜೂ. 16 ರಂದು ಮಂದಿರದಲ್ಲಿ ಪ್ರತಿಷ್ಠಾಪಿತ ಪರಿವಾರ ದೇವರ 22ನೇ ವರ್ಧಂತಿ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗುರು ಮತ್ತು ಗಣಪತಿ ಪೂಜೆ, ಗೌರಿ ಮಾತ್ರಕ ಪೂಜೆ, ದೇವನಂದಿನಿ ಸಮಾರಾಧನೆ, ಕಲಶ ಪ್ರಾರ್ಥನೆ, ಅಭಿಷೇಕ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹವನ, ವೆಂಕಟೇಶ ಮೂಲ ಮಂತ್ರ ಹವನ. ಮಧ್ಯಾಹ್ನ ಪುಣ್ಯಾಹುತಿ, ಪ್ರಸನ್ನ ಪೂಜೆ, ಅಷ್ಠ ಮಂಗಳ ನಿರೀಕ್ಷಣ, ಪರಿವಾರ ದೇವರಿಗೆ ಪಟ್ಟ ಕಾಣಿಕೆ, ಮಧ್ಯಾಹ್ನದ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ, ಪ್ರಸಾದ ವಿತರಣೆ. ಸಂಜೆ ಭಜನಾ ಸೇವೆ, ಬಾಲಾಜಿ ದೇವರಿಗೆ ಮತ್ತು ಪರಿವಾರ ದೇವರಿಗೆ ರಂಗ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.

ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಪಟ್ಟದ ದೇವರಿಗೆ ಪೂಜೆಯೊಂದಿಗೆ ಮಹಾ ಆರತಿಗೈದು, ಕುಲಗುರು ದೈವಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸ್ಮರಣೆಗೈದು ಉಪಸ್ಥಿತ ಭಕ್ತಾಬಿಮಾನಿಗಳನ್ನು ಮಂತ್ರಾಕ್ಷತೆ ನೀಡಿ ಹರಸಿದ‌ರು.ವೇದಮೂರ್ತಿ ಲಕ್ಷ್ಮೀನಾ ರಾಯಣ ಭಟ್‌ ವಾಲ್ಕೇಶ್ವರ್‌ ಮತ್ತು ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಶತಾನಂದ ಭಟ್‌ ಅವರು ವಿವಿಧ ಪೂಜೆಗಳನ್ನು ನಡೆಸಿದರು. ಪುರೋಹಿತ‌ ಕೇದಾರ್‌ ಭಟ್‌ ಮತ್ತು ಸಹ ಪುರೋಹಿತರು ವಿವಿಧ ಪೂಜಾಧಿಗಳನ್ನು ನಡೆಸಿ ಉಪಸ್ಥಿತ ಸದ್ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಎಸ್‌ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್‌. ಆರ್‌. ಪೈ, ಕಾರ್ಯಾಧ್ಯಕ್ಷ ದೀಪಕ್‌ ಬಿ. ಶೆಣೈ, ಗೌರವ ಕಾರ್ಯದರ್ಶಿ ವಸಂತ್‌ ಕುಮಾರ್‌ ಬಂಟ್ವಾಳ, ಕೋಶಾಧಿಕಾರಿ ಪ್ರೇಮಾನಂದ ಮಲ್ಯ, ಜೊತೆ ಕಾರ್ಯದರ್ಶಿ ಸತೀಶ್‌ ಶೆಣೈ, ಜೊತೆ ಕೋಶಾಧಿಕಾರಿ ಪ್ರಮೋದ್‌ ಎಸ್‌. ಕಾಮತ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೀಮಾ ಎಸ್‌. ಪೈ, ಕಾರ್ಯದರ್ಶಿ ಗಿರಿಜಾ ಭಂಡಾರಿ, ಕಟಪಾಡಿ ಉಮೇಶ್‌ ಕಿಣಿ, ಬೈದ್ಯೆಬೆಟ್ಟು ಆನಂದರಾಯ ಪೈ, ಶ್ರೀನಿವಾಸ ವಿ. ಶೆಣೈ, ವೆಂಕಟೇಶ ವಿ. ಪ್ರಭು, ವಿ. ಪ್ರಭಾಕರ ಪೈ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು, ಜಿಎಸ್‌ಬಿ ಸಮಾಜ ಬಾಂಧವರು, ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು ಪೂಜಾದಿಗಳಲ್ಲಿ ಪಾಲ್ಗೊಂಡರು.

ಜೂ. 17ರಂದು ಜೇಷ್ಠ ಶುಕ್ಲ ಪೂರ್ಣಿಮೆಯಂದು ಶ್ರೀ ಬಾಲಾಜಿ ಪ್ರತಿಷ್ಠಾu ವರ್ಧಂತಿ ಮತ್ತು ದೇವತೆಗಳ 18ನೇ ನವಗ್ರಹ ದೇವತಾ ವರ್ಧಂತಿ ಮಹೋತ್ಸವ ನಿಮಿತ್ತ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಗುರು ಮತ್ತು ಗಣಪತಿ ಪೂಜೆ, ಪುಣ್ಯಾಹ ವಾಚನ ಪೂಜೆ, ಗೌರಿ ಮಾತ್ರಕ ಪೂಜೆ, ದೇವನಂದಿನಿ ಸಮಾರಾಧನಾ. ಪಾವಮಾನ ಕಲಶ ಪ್ರತಿಷ್ಠಾಪನ, ಅಗ್ನಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ, ಹಾಲು ಅಭಿಷೇಕ, ಗಂಗಾಭಿಷೇಕ, ಸನಿಧ್ಯ ಹವನ, ಲಘು ವಿಷ್ಣು ಹವನ, ಪ್ರಸನ್ನ ಪೂಜೆ, ಅಷ್ಟಮಂಗಳ ನಿರೀಕ್ಷಣ, ಕಾಣಿಕೆ ಮತ್ತು ಗುರು ಕಾಣಿಕೆ, ಮಧ್ಯಾಹ್ನ ಪೂರ್ಣಾಹುತಿ, ಪುಷ್ಪಾಲಂಕಾರ, ಮಧ್ಯಾಹ್ನದ ಮಹಾಪೂಜೆ, ಮಂಗಳಾರತಿ, ಬ್ರಾಹ್ಮಣ ಸಂತರ್ಪಣೆ, ಮಯ್ಯು ಸಮಾರಾಧನೆ, ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಸಂಜೆ ಭಜನಾ ಸೇವೆ, ಬಾಲಾಜಿ ದೇವರಿಗೆ ರಂಗ ಪೂಜೆ, ರಾತ್ರಿ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಮಾಜ ಬಾಂಧವರು ಮತ್ತು ಭಕ್ತಾಭಿಮಾನಿಗಳು ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಶ್ರೀ ಹರಿಯ ಕೃಪೆಗೆ ಪಾತ್ರರಾಗುವಂತೆ ಜಿಎಸ್‌ಬಿ ಸಭಾ ನವಿ ಮುಂಬಯಿ ಸಮಿತಿ ತಿಳಿಸಿದೆ.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ