ಸಾರಸ್ವತ ಉತ್ಸವ ಮತ್ತು ವಾರ್ಷಿಕ ಮಹಾಸಭೆ

ವಿಘ್ನಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ

Team Udayavani, Jul 2, 2019, 4:43 PM IST

ಮುಂಬಯಿ: ಸೇವೆ ಅನ್ನುವುದು ಪಾವಿತ್ರÂವುಳ್ಳದ್ದು. ಆದ್ದರಿಂದ ಸೇವೆಯಲ್ಲಿ ತಾಳ್ಮೆ, ಧರ್ಮನಿಷ್ಠೆ ಇರುವುದು ಅವಶ‌. ಸಂಸ್ಥೆಯ ಚಟುವಟಿಕೆಗಳನ್ನು ಮನಸಾರೆ ಮೆಚ್ಚಿದ್ದೇನೆ ಹಾಗೂ ನನ್ನ ಬಾಯೊ ಕೊಂಕಣಿ ಸಿನೆಮಾಕ್ಕೆ ನಿಮ್ಮೆಲ್ಲರ ಬೆಂಬಲ ಸಿಗಬೇಕು ಎಂದು “ಬಾಯೊ’ ಕೊಂಕಣಿ ಚಿತ್ರ ನಿರ್ಮಾಪಕ ನಾಗೇಂದ್ರ ಕಾಮತ್‌ ಅವರು ನುಡಿದರು.

ವಿಘ್ನಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲದ ದಹಿಸರ್‌ ಸಂಸ್ಥೆಯು ಮಂಡಲದ ಅಧ್ಯಕ್ಷ ವಸಂತ ಆರ್‌. ನಾಯಕ್‌ ಅಧ್ಯಕ್ಷತೆಯಲ್ಲಿ ಜೂ. 30ರಂದು ನಡೆದ ದಹಿಸರ್‌ ಪೂರ್ವದ ಶ್ರೀ ವಿಠಲ ರುಕುಮಾಯಿ ಮಂದಿರದ ಮಾಧವೇಂದ್ರ ಸಭಾಗೃಹದಲ್ಲಿ ನಡೆದ ವಾರ್ಷಿಕ ಸಾರಸ್ವತ್‌ ಉತ್ಸವ ಮತ್ತು ವಾರ್ಷಿಕ ಮಹಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘದ ಯೋಜನೆಗಳಿಗೆ ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಠಲ ಪ್ರಭು, ವಾಸುದೇವ ಪ್ರಭು, ವೇದಮೂರ್ತಿ ರಮೇಶ ಭಟ್‌ ಹಾಗೂ ಭಜನಾ ಮಂಡಳಿಯ ಸದಸ್ಯರು ದೀಪ ಬೆಳಗಿಸಿ ಉದಾrಟಿಸಿದರು. ಗೌರವ ಅತಿಥಿಯಾಗಿ ಮೋಹನ್‌ದಾಸ್‌ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಿ ಶುಭ ಹಾರೈಸಿದರು. ಸಮಾಜ ಬಂಧು ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಅಂತೆಯೇ ಸಂಘದ ಮಹಾ ಪೋಷಕರು, ಉಪಸ್ಥಿತ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು.

ಸಂಸ್ಥೆಯ ಅಧ್ಯಕ್ಷ ವಸಂತ್‌ ನಾಯಕ್‌ ಅವರು ಮಾತನಾಡಿ, ತಾನು ಸುಮಾರು ವರ್ಷದಿಂದ ಈ ಸಂಸ್ಥೆಯ ಪ್ರದಾನ ಸೇವಕನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಸಮಯೋಚಿತವಾಗಿ ಸಿಕ್ಕಿದೆ. ಮುಂದೆ ಕೂಡ ಸಂಸ್ಥೆಯ ಏಳಿಗೆಗಾಗಿ ಕಾರ್ಯಕಾರಿ ಸಮಿತಿಗೆ ನಿಮ್ಮ ಬೆಂಬಲ ಕೊಡಬೇಕಾಗಿ ವಿನಂತಿ. ಸಂಸ್ಥೆಗೆ ಸ್ವಂತ ಕಟ್ಟಡ ಆಗುವ ಹಾಗೆ ನಾವೆಲ್ಲರೂ ದುಡಿಯಬೇಕು ಎಂದ‌ು ನುಡಿದರು.

ಅತಿಥಿಯಾಗಿ ಪಾಲ್ಗೊಂಡ ಮೋಹನ್‌ದಾಸ್‌ ಮಲ್ಯ ಮಾತನಾಡಿ, ವಿಘ್ನಹರ್ಥ ಮಂಡಳಿಯು ಸವೊìತೋಮುಖ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು. ಅದರದೇ ಸ್ವಂತ ವಾಸ್ತು ಅದಷ್ಟು ಬೇಗ ಆಗಲೆಂದು ತನು ಮನದಿಂದ ಹಾರೈಸುತ್ತೇನೆ ಎಂದರು. ಸುಜಾತಾ, ಜಯಲಕ್ಷ್ಮೀ ಮತ್ತು ವಾರಿಜಾ ಅವರು ಪ್ರಾರ್ಥನೆಗೈದರು. ಗೌರವ ಕಾರ್ಯದರ್ಶಿ ಎನ್‌. ಶ್ರೀನಿವಾಸ ನಾಯಕ್‌ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಭರತ್‌ ವಿ. ಕಾಮತ್‌ ವಂದಿಸಿದರು.

ಪೂರ್ವಾಹ್ನ ವಸಂತ ನಾಯಕ್‌ ಅಧ್ಯಕ್ಷತೆಯಲ್ಲಿ ಸೇವಾ ಮಂಡಲದ 13ನೇ ಮಹಾಸಭೆ ನಡೆಸಲಾಗಿದ್ದು, ವೇದಿಕೆಯಲ್ಲಿ ಮಂಡಲದ ಗೌರವಾಧ್ಯಕ್ಷ ಗೋಪಾಲ ಆರ್‌. ನವಳ್ಕರ್‌, ಉಪಾಧ್ಯಕ್ಷ ರಮೇಶ್‌ ಎಸ್‌. ನಾಯಕ್‌, ಗೌರವ ಕೋಶಾಧಿಕಾರಿ ಭರತ್‌ ವಿ. ಕಾಮತ್‌, ಜತೆ ಕಾರ್ಯದರ್ಶಿ ಗೋಪಾಲ ಎ. ನಾಯಕ್‌, ಜತೆ ಕೋಶಾಧಿಕಾರಿ ಆನಂದ್‌ ಕೆ.ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ ವರ್ಷದ‌ಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರು, ಹಿತೈಷಿಗಳು, ಕಲಾವಿದರಿಗೆ ಸಭೆಯಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ಎನ್‌. ಶ್ರೀನಿವಾಸ್‌ ನಾಯಕ್‌ ಗತ ವಾರ್ಷಿಕ ಮಹಾಸಭೆ ವರದಿ ಮತ್ತು ವಾರ್ಷಿಕ ಚಟುವಟಿಕೆಗಳ ವಿವರ ನೀಡಿದರು. ಗೌರವ ಕೋಶಾಧಿಕಾರಿ ಭರತ್‌ ವಿ. ಕಾಮತ್‌ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು.

ಮಕ್ಕಳಿಗೆ ಛದ್ಮವೇಷ ಮತ್ತು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಮಕ್ಕಳಿಂದ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡಿತು. ಕೊನೆಯಲ್ಲಿ ವಸಂತ ಆರ್‌. ನಾಯಕ್‌ ವಿರಚಿತ “ಬಾಬ’ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ : ರೊನಿಡಾ ಮುಂಬಯಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ