ವಿವೇಕಾನಂದ ಜಯಂತಿ ಆಚರಣೆ

Team Udayavani, Jan 17, 2020, 7:02 PM IST

ಪುಣೆ, ಜ. 16: ಪುಣೆ ಯುವ ಬ್ರಿಗೇಡ್‌ ಪುಣೆ ತಂಡದಿಂದ ಜ. 12 ರಂದು ಚಿಂಚಾÌಡ್‌ ನಗರದ ಆದಿತ್ಯ ಬಿರ್ಲಾ ಆಸ್ಪತ್ರೆಯ ಪಕ್ಕದಲ್ಲಿ ಹಾದು ಹೋಗುವ ಪಾವನಾ ನದಿಯ ದಡವನ್ನು ಸ್ವತ್ಛಗೊಳಿಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನುಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್‌ ಸದಸ್ಯರಾದ ಅವಿನಾಶ್‌, ವೀರುಪಾಕ್ಷಿ, ದಿನೇಶ್‌, ನಿಂಗಪ್ಪ ಮತ್ತು ಇತರೆ ಸದಸ್ಯರುಗಳು ಹಾಜರಿದ್ದರು.

ಮೊದಲಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಪುಣೆ ಪರಿಸರದಲ್ಲಿ ಸದ್ದಿಲ್ಲದೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಕನ್ನಡಿಗ ಯುವ ಬ್ರಿಗೇಡ್‌ ಸದಸ್ಯರು ಮಾಡುತ್ತಿದ್ದು, ಈ ಹಿಂದೆಯೂ ಸಂಘಟನೆಯ ವತಿಯಿಂದ ಚಿಂಚಾಡ್‌ ನಲ್ಲಿ ಹರಿಯುವ ಪಾವನಾ ನದಿ ದಡವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದರು.

ಆದಿತ್ಯ ಬಿರ್ಲಾ ಆಸ್ಪತ್ರೆಯ ಹತ್ತಿರದಿಂದ ಹರಿಯುತ್ತಿರುವ ಈ ನದಿಯನ್ನು ಸಾರ್ವಜನಿಕರು ಕಸಗಳನ್ನು ಎಸೆದು ಹಾಳು ಮಾಡುತ್ತಿರುವುದನ್ನು ಗಮಿನಿಸಿದ ಸದಸ್ಯರು ಸ್ವತ್ಛತಾ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.

 

ವರದಿ : ಕಿರಣ್‌ ಬಿ. ರೈ ಕರ್ನೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ