“ವ್ಹಾಯ್ಸ್‌ ಆಫ್‌ ಬಿಲ್ಲವ’ ಅಂತಿಮ  ಸುತ್ತಿನ ಸ್ಪರ್ಧೆಗೆ ಚಾಲನೆ

Team Udayavani, Jul 3, 2018, 4:40 PM IST

ಮುಂಬಯಿ: ಸಂಗೀತವು ಮನಸ್ಸನ್ನು  ಶುದ್ಧಿಕರಿಸುವ ಶಕ್ತಿ ಯನ್ನು ಹೊಂದಿದೆ. ವಿಶೇಷವಾಗಿ ಭಾರತೀಯರಲ್ಲಿ ಸಂಗೀತ ಪ್ರಭಾವ ಬಹಳಷ್ಟಿದೆ. ಸಂಗೀತದೊಂದಿಗೆ ಆಧ್ಯಾತ್ಮಿಕತೆಯ ಸಾರವನ್ನು ಆನಂ ದಿಸುವ ಜನತೆ ನೆಮ್ಮದಿಯನ್ನು ಅನುಭವಿತ್ತಾರೆ. ಆದ್ದರಿಂದ ಸಂಗೀತ ಅಸ್ವಾದಿಸುವ ಮನಸ್ಸುಗಳು ಭೇದವನ್ನು ಮರೆಸುತ್ತವೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಬಿಲ್ಲವರ ಅಸೋಸಿ ಯೇಶನ್‌ ಇಂತಹ ಯೋಜನೆಯನ್ನು ರೂಪಿಸಿರುವುದು ಬಹಳ ಸಂತಸ ದಾಯಕ ಎಂದು ಗುಜರಾತ್‌ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ ತಿಳಿಸಿದರು.

ಜು. 1 ರಂದು ಅಪರಾಹ್ನ ಸಾಂತಾ ಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ  ಅಸೋಸಿಯೇಶನ್‌ ಮುಂಬಯಿ ಇದರ  ಯುವಾ ಭ್ಯುದಯ ಉಪ ಸಮಿತಿ ಆಯೋ ಜಿಸಿದ್ದ “ವ್ಹಾಯ್ಸ್‌ ಆಫ್‌ ಬಿಲ್ಲವ’ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆ ಮತ್ತು ಪಾರಿತೋಷಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯ ಕ್ರಮವನ್ನು ಮನೋಜ್‌ ಪೂಜಾರಿ ಮತ್ತು ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಅಂತಿಮ ಸುತ್ತಿನಲ್ಲಿ 26 ಸ್ಪರ್ಧಿಗಳು ಕಣದಲ್ಲಿದ್ದರು. ಮನೋಜ್‌ ಆನಂದ್‌, ರಾಜೇಶ್ವರಿ ಕೆ., ಶ್ರುತಿ ನಾಯಕ್‌, ಅವಿನಾಶ್‌ ಕಾಮತ್‌ ಅವರು  ತೀರ್ಪುಗಾರರಾಗಿ ಸಹಕರಿಸಿದರು.

ಗೌರವ ಅತಿಥಿಗಳಾಗಿ ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್‌ ಕಾರ್ನಾಡ್‌, ಸೂರತ್‌ ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕುರಿಯಾಳ, ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ್‌ ಜೆ. ಪೂಜಾರಿ, ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ರಾಜ ವಿ. ಸಾಲ್ಯಾನ್‌, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಗೌರವ  ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌, ಸಂಗೀತಕಾರ ರಂಜನ್‌ ಎನ್‌. ಸುವರ್ಣ ಉಪಸ್ಥಿತರಿದ್ದರು.  ಸಂಗೀತ ಕ್ಷೇತ್ರದ ದಿಗ್ಗಜ ನವೀನ್‌ ಎನ್‌. ಸುವರ್ಣ ಅವರನ್ನು ಸಮ್ಮಾನಿಸಲಾಯಿತು.

ರಾಜ್‌ಕುಮಾರ್‌ ಕಾರ್ನಾಡ್‌ ಅವರು  ಮಾತನಾಡಿ, ಇದೊಂದು ಒಳ್ಳೆಯ ಕಾರ್ಯಕ್ರಮ. ಪ್ರತಿಭೆಗಳಿಗೆ ಉತ್ತಮ ಅವಕಾಶವಾಗಿದೆ. ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳನ್ನು  ಅಭಿನಂದಿಸಿ ತನ್ನ ಕಂಠದಲ್ಲಿ ಸಂಗೀತವನ್ನಾಡಿ ನೆರೆದ ಸಂಗೀತ ಪ್ರೇಮಿಗಳ ಮನಸೂರೆಗೊಂಡರು. ರೂಪಿಣಿ ಪ್ರಸಿದ್ಧ ಚಿತ್ರನಟಿ ಕೋಮಲ್‌ ಮಹುವಕರ್‌ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ಪ್ರದಾನಿಸಿ ಶುಭಹಾರೈಸಿದರು.

ಸಂತೋಷ್‌ ಪೂಜಾರಿ ಮತ್ತು ಬಳಗ ಪ್ರಾರ್ಥನೆಗೈದರು. ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರ್‌ ಸ್ವಾಗತಿಸಿದರು. ಅಕ್ಷಯ್‌ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು. ಲತೇಶ್‌ ಎಂ. ಪೂಜಾರಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಯಜ್ಞೆàಶ್‌ ಸಾಲ್ಯಾನ್‌ ಸ್ಪರ್ಧಿಗಳ ಯಾದಿ ವಾಚಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಯುವಾಭ್ಯುದಯದ ಗೌರವ  ಕಾರ್ಯದರ್ಶಿ ಉಮೇಶ್‌ ಎನ್‌. ಕೋಟ್ಯಾನ್‌ ವಂದಿಸಿದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ