Udayavni Special

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌


Team Udayavani, Nov 28, 2020, 4:26 PM IST

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಸಿಂಗಾರವೆಂಬ ಸೀರೆಯನ್ನುಟ್ಟು, ಬಂಗಾರವೆಂಬ ಬಳೆಯನ್ನು ತೊಟ್ಟು, ನರ್ತಕಿಯೆಂಬ ನತ್ತನ್ನಿಟ್ಟು, ಚೆಲುವೆ ಚಂದುಳ್ಳಿಯಾಗಿ ಕೈಬೀಸಿ ಕರೆಯುವ ದೇಶ ಥೈಲ್ಯಾಂಡ್‌.

ಜಗತ್ತಿನ ಪುಟ್ಟ ದ್ವೀಪ ರಾಷ್ಟ್ರ ಥೈಲ್ಯಾಂಡ್‌ ಪ್ರಕೃತಿದತ್ತವಾದ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ದೇಶ ಮುನ್ನಡೆಯುತ್ತಿರುವುದು, ಇಲ್ಲಿನ ಜನರು ಜೀವನ ನಡೆಸುತ್ತಿರುವುದು ಪ್ರವಾಸೋದ್ಯಮದಿಂದಲೇ ಎಂಬುದು ಇಲ್ಲಿನ ಅಚ್ಚರಿಯ ವಿಚಾರ. ಹೀಗಾಗಿ ಇಲ್ಲಿ ಪ್ರವಾಸಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿಮಾನ ನಿಲ್ದಾಣ,  ಅಂಗಡಿ ಮಳಿಗೆಗಳಲ್ಲಿ  ಪ್ರವಾಸಿಗರಿಗೆ ಕೈಮುಗಿದು ಸ್ವಾಗತಿಸಲಾಗುತ್ತದೆ ಮತ್ತು ಅದೇ ರೀತಿ ಬೀಳ್ಕೊಡಲಾಗುತ್ತದೆ.

ವಿಶ್ವದ ಮೂಲೆಮೂಲೆಯಿಂದಲೂ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಥೈಲ್ಯಾಂಡ್‌ನ‌ಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಜತೆಗೆ ಉದ್ಯೋಗ,  ಜೀವನವನ್ನು ರೂಪಿಸಲು ಯೋಗ್ಯ ದೇಶವಾಗಿದೆ.

ಸ್ವತ್ಛತೆ ಇಲ್ಲಿ ಎದ್ದು ಕಾಣುವ ವಿಚಾರ. ರಸ್ತೆ, ಹೆದ್ದಾರಿ ಸ್ವತ್ಛತೆ ಕಾರ್ಯ  ಮೆಚ್ಚುವಂತಿದೆ. ಟ್ರಾಫಿಕ್‌ ಜಾಮ್‌ ಕಾಣ ಸಿಗುವುದೇ ಇಲ್ಲ. ಇಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ಅದೇ ರೀತಿ ಮಾಡಲಾಗಿದೆ. ಇಲ್ಲಿ ಎಂಜಿನಿಯರಿಂಗ್‌ ಪರಿಣತಿ ಎದ್ದು ಕಾಣುತ್ತದೆ.

ದೇಶದ ಕೇಂದ್ರಬಿಂದು ಬ್ಯಾಂಕಾಕ್‌ ಅತ್ಯಂತ ಸಮೃದ್ಧಿಯನ್ನು ಹೊಂದಿದ ನಗರ. ಇಲ್ಲಿ  ಭಾರತೀಯ ಆಚಾರ, ವಿಚಾರಗಳಿಗೆ ಮನ್ನಣೆ ನೀಡುವುದರ ಜತೆಗೆ ಧರ್ಮ, ಸಂಪ್ರದಾಯ, ಹಬ್ಬಹರಿದಿನಗಳ ಆಚರಣೆಗೂ ಹೆಚ್ಚಿನ ಅವಕಾಶವಿದೆ.

ಕನ್ನಡಿಗರ ಹೃದಯ ಶ್ರೀಮಂತಿಕೆಗೆ ಇಲ್ಲಿನ ಜನ ಗೌರವ ನೀಡುತ್ತಾರೆ. ಕನ್ನಡ ನಾಡುನುಡಿ, ನಿತ್ಯಹರಿದ್ವರ್ಣ ಕಾಡುಗಳು, ಗಂಧದ ಮರ, ರಾಜಮಹಾರಾಜರ ಇತಿಹಾಸ, ಶಿಲ್ಪಕಲೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯದ ಬಗ್ಗೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ವಿಶೇಷ.

ಅತ್ಯಂತ ಸುಸಂಸ್ಕೃತ, ಸರಳ  ಜೀವನ ನಡೆಸುವ ಇಲ್ಲಿನ ಜನರು, ಕನ್ನಡಿಗರೊಂದಿಗೆ ಸಹೋದರತ್ವ ಭಾವನೆಯಿಂದ ಬೆರೆತುಕೊಳ್ಳುತ್ತಾರೆ.  ಹಬ್ಬಗಳಲ್ಲಿಯೂ  ಸಹಭಾಗಿಯಾಗುತ್ತಾರೆ. ದೇವರು, ಪೂಜೆ, ಪುನಸ್ಕಾರಗಳನ್ನು ಗೌರವಿಸುತ್ತಾರೆ.

ಚಿಯಾಂಗ್‌ ಮಾಯಿ

ಥೈಲ್ಯಾಂಡ್‌ನ‌ಲ್ಲಿ ಪ್ರಸಿದ್ಧ ಪ್ರವಾಸಿ ತಾಣ. ಇದು ಥೈಲ್ಯಾಂಡ್‌ನ‌ ಅತ್ಯಂತ ದೊಡ್ಡ  ಮತ್ತು ಸುಂದರವಾದ ನಗರ. ಇಲ್ಲಿ ಅತಿ ಹೆಚ್ಚು ಪರ್ವತಗಳಿವೆ. ಬ್ಯಾಂಕಾಂಕ್‌ನಿಂದ ಸುಮಾರು 700 ಕಿ.ಮೀ. ದೂರದಲ್ಲಿದೆ. ಇಲ್ಲಿ ಅತ್ಯುದ್ಭುತ ಗೋಡೆಗಳು, ಸ್ಮಾರಕ, ಪ್ರತಿಮೆಗಳು ಕಾಣಸಿಗುತ್ತವೆ. ಹೆಚ್ಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ತಾಣವಾಗಿದೆ.

ಚಿಯಾಂಗ್‌ ರೈ

ಉತ್ತರ ಥೈಲ್ಯಾಂಡ್‌ ಪರ್ವತಗಳ ನಡುವೆ ಇರುವ ಚಿಯಾಂಗ್‌ ರೈ ಆಕರ್ಷಕ ತಾಣ. ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ, ಸುಂದರ ದೃಶ್ಯಗಳು, ಪ್ರಶಾಂತ, ರೋಮಾಂಚನಕಾರಿ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿರುವ ಚಿಯಾಂಗ್‌ ರಾಯ್‌ ಕ್ಲಾಕ್‌ ಟವರ್‌, ಭವ್ಯವಾದ  9 ಶ್ರೇಣಿಯ ವಾಟ್‌ ಹುವಾಯಿ ಪಿಯಾ ಕುಂಗ್‌ ದೇವಾಲಯ ರಚನೆ ಅತ್ಯದ್ಭುತವಾಗಿದೆ. ಇಲ್ಲಿರುವ ಸಿಂಘಾ ಪಾರ್ಕ್‌, ಮೇ ಕೋಕ್‌ ನದಿ ಹಾಗೂ ಸುಂದರ ಶಿಖರಗಳಲ್ಲಿ ಒಂದಾಗಿರುವ ದೋಯಿ ಮಾಸಲೋಂಗ್‌ ಕೂಡ ಇಲ್ಲಿದೆ. ಇಲ್ಲಿ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ.

ವಾಟ್‌ ರೊಂಗ್‌ ಖುನ್‌

ವೈಟ್‌ ಟೆಂಪಲ್‌ ಎಂದು ಕರೆಯಲ್ಪಡುವ ವಾಟ್‌ ರೊಂಗ್‌ ಖುನ್‌ ಥೈಲ್ಯಾಂಡ್‌ನ‌ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ. ಇದು ಚಿಯಾಂಗ್‌ ರಾಯ್‌ನ ಹೆಗ್ಗುರುತು. ಬೌದ್ಧ ಮೌಲ್ಯಗಳನ್ನು ಒಳಗೊಂಡ ಇಲ್ಲಿ ಬೌದ್ಧ ಧರ್ಮದ ಶಿಕ್ಷಣ, ಬುದ್ಧನ ಬೋಧನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ದೇವಾಲಯದಲ್ಲಿ ಬಳಸಿರುವ ಗಾಜಿನ ಮೇಲೆ ಸೂರ್ಯನ ಬೆಳಕು ಬಿದ್ದಾಗ ಕಾಣುವ ದೃಶ್ಯ ನಯನಮನೋಹರವಾಗಿರುತ್ತದೆ.

– ಲಕ್ಷ್ಮೀ, ಅಂಕಲಗಿಮಠ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹವ್ಯಾಸಕ್ಕೆ ಅನುಗುಣವಾಗಿ ಖಾತೆ ಹಂಚಿಕೆ ಮಾಡಲಾಗಿದೆ: ಡಿಸಿಎಂ ಸವದಿ

ಹವ್ಯಾಸಕ್ಕೆ ಅನುಗುಣವಾಗಿ ಖಾತೆ ಹಂಚಿಕೆ ಮಾಡಲಾಗಿದೆ: ಡಿಸಿಎಂ ಲಕ್ಷ್ಮಣ ಸವದಿ

ನಮ್ಮ ಶಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಬೇಡಿ: ರೈತ ಮುಖಂಡ ಬಾಬಾಗೌಡ ಪಾಟೀಲ

ನಮ್ಮ ಶಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಬೇಡಿ: ರೈತ ಮುಖಂಡ ಬಾಬಾಗೌಡ ಪಾಟೀಲ

ದೆಹಲಿ: ಹಿಂಸಾರೂಪಕ್ಕೆ ತಿರುಗಿದ ರೈತರ ಪ್ರತಿಭಟನೆ; ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಸಾವು

ದೆಹಲಿ: ಹಿಂಸಾರೂಪಕ್ಕೆ ತಿರುಗಿದ ರೈತರ ಪ್ರತಿಭಟನೆ; ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಸಾವು

Restricted Republic Day Celebrations By Indians Abroad Amid Covid

ವಿದೇಶಿ ನೆಲದ ಮುಗಿಲೆತ್ತರದಲ್ಲಿ ಹಾರಿದ ರಾಷ್ಟ್ರ ಧ್ವಜ

ಕೆಂಪುಕೋಟೆಗೆ ನುಗ್ಗಿದ ರೈತರು: ಧ್ವಜಸ್ತಂಭ ಏರಿ ರೈತ ಬಾವುಟ ಹಾರಿಸಲು ಯತ್ನ!

ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!

kalburagi

ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ghatkopar Shri Bhawani Saneeswara Temple

ಘಾಟ್‌ಕೋಪರ್‌ ಶ್ರೀ ಭವಾನಿ ಶನೀಶ್ವರ ದೇವಸ್ಥಾನ: ವಾರ್ಷಿಕ ಮಹಾಪೂಜೆ

Annual Founder’s Day

ಇಂದು 89ನೇ ವಾರ್ಷಿಕ ಸಂಸ್ಥಾಪನ ದಿನಾಚರಣೆ

Nandita Kotyan  selected as a vice president

ಉಪಾಧ್ಯಕೆಯಾಗಿ  ನಂದಿತಾ ಕೋಟ್ಯಾನ್‌ ಬೆಳ್ಮಣ್ ಆಯ್ಕೆ

Madhva Navami festival celebration

ಮಧ್ವ ನವಮಿ ಉತ್ಸವ ಆಚರಣೆ

Mumbai  Babu Shiva Poojary selected as an presiden

ಅಧ್ಯಕರಾಗಿ ಮುಂಬಯಿ ಸಾಹಿತಿ  ಬಾಬು ಶಿವ ಪೂಜಾರಿ ಆಯ್ಕೆ

MUST WATCH

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

udayavani youtube

ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

ಹೊಸ ಸೇರ್ಪಡೆ

ಬಿಜೆಪಿ ಸೇರಿದ ವಾರದೊಳಗೆ ಉದ್ಯಮಿ ಮಂಜುನಾಥ್‌ ಯೂ ಟರ್ನ್

ಬಿಜೆಪಿ ಸೇರಿದ ವಾರದೊಳಗೆ ಉದ್ಯಮಿ ಮಂಜುನಾಥ್‌ ಯೂ ಟರ್ನ್

26-10

ನಾಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ

ಇಂದು ಸಂಜೆ ಇನ್ಸ್‌ಪೆಕ್ಟರ್‌ ವಿಕ್ರಂ ಟ್ರೇಲರ್‌ ರಿಲೀಸ್‌

ಇಂದು ಸಂಜೆ ಇನ್ಸ್‌ಪೆಕ್ಟರ್‌ ವಿಕ್ರಂ ಟ್ರೇಲರ್‌ ರಿಲೀಸ್‌

26-9

ಮತದಾನ ನಮ್ಮೆಲ್ಲರ ಹಕ್ಕು-ಕರ್ತವ್ಯ

ಕಾಯ್ದೆ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ

ಕಾಯ್ದೆ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.