ವರ್ಲಿ ಅಪ್ಪಾಜಿ ಬೀಡು ಫೌಂಡೇಶನ್‌ ಬೆಳ್ಳಿಹಬ್ಬ ಸಮಾರೋಪ

Team Udayavani, Jan 4, 2019, 10:00 AM IST

ಮುಂಬಯಿ: ಪ್ರಾತಃ, ಸಂಧ್ಯಾ, ಮಾಧ್ಯಮಿಕ ಮತ್ತು ಸಾಯಂ ಸಂಧ್ಯಾ, ಈ ತ್ರಿಕಾಲದಲ್ಲಿ ದೇವರ ಆರಾಧನೆ ಮಾಡಬೇಕು. ಅಪ್ಪಾಜಿ ಬೀಡು ಮತ್ತು ದೇವರ ಹೆಸರಿಗೆ ಹತ್ತಿರದ ಸಂಬಂಧವಿದೆ.  ಅಯ್ಯಪ್ಪನ ದರ್ಶನ ಪಡೆಯುವುದು ಸುಲಭ ಸಾಧ್ಯವಲ್ಲ. ಅಯ್ಯಪ್ಪನ ವೃತದಾರಿಗಳ ಕ್ರಮವನ್ನು ನೋಡಿದಾಗ ಸನಾತನ ಸಂಸ್ಕೃತಿಯು ಉಳಿಯುತ್ತಿದೆ ಎನ್ನಬಹುದು   ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಡಿ. 30ರಂದು ದಾದರ್‌ ಪಶ್ಚಿಮ ಪರೇಲ್‌ ಕಾಮಾYರ್‌ ಮೈದಾನದಲ್ಲಿ ನಡೆದ ವರ್ಲಿಯ ಶ್ರೀ  ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ನ 25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಹಾಗೂ ಬೆಳ್ಳಿ ಹಬ್ಬ ಸಂಭ್ರಮದ ಸಮಾರೋಪ ಸಮಾರಂಭವನ್ನು  ದೀಪ ಬೆಳಗಿಸಿ ಉದ್ಘಾಟಿಸಿ  ಆಶೀರ್ವಚನ ನೀಡಿ, ನಿಷ್ಟವಾದ ಸಂಸ್ಕೃತಿ ಮತ್ತು ದೇಹ ನಿಷ್ಠವಾದ ಸಂಸ್ಕೃತಿ ಬಗ್ಗೆ ಮಾತನಾಡಿ, ಅತ್ಮ ನಿಷ್ಟವಾದ ಸಂಸ್ಕೃತಿಯಿಂದ ಬದುಕಲ್ಲಿ ಶಾಂತಿ, ನೆಮ್ಮದಿ ಸಾಧ್ಯ. ಇದರಿಂದಾಗಿ ಪಾಶ್ಚಾತ್ಯ ಸಂಸ್ಕೃತಿಯಿಂದ ನಾವು ದೂರ ಸರಿಯಬಹುದು. ಆಧ್ಯಾತ್ಮಿಕ ಮರೆತಲ್ಲಿ ನೆಮ್ಮದಿ ಅಸಾಧ್ಯ. ಮನುಷ್ಯ ತಾನು ನಾನು ಮತ್ತು ಬೇಕು ಎಂಬುದನ್ನು ಬಿಟ್ಟಲ್ಲಿ ಶಾಂತಿಯಿಂದ ಜೀವಿಸಲು ಸಾಧ್ಯ. ಧರ್ಮದ ಪ್ರಜ್ಞೆ ನಮಗಿರಲಿ. ಅದನ್ನು ನಾವು ಇಲ್ಲಿ ಕಾಣಬಹುದು. ಶಬರಿಮಲೆಯ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪನ್ನು ನೀಡಿದ್ದು, ಕಾನೂನನ್ನು ನಾವು ಗೌರವಿಸಬೇಕಾಗಿದ್ದರೂ ಶಬರಿಮಲೆಯ ನಿಯಮಾವಳಿಗಳಿಗೆ ವಿರೋಧ ವಾಗಿ ನಡೆಯುವುದು ಸರಿಯಲ್ಲ. ಅಯ್ಯಪ್ಪನ ಸಂದೇಶ ತ್ಯಾಗ. ತ್ಯಾಗವಿಲ್ಲದ ಸೇವೆಯಲ್ಲಿ ಸುಖವಿಲ್ಲ. ಇತಿಮಿತಿಯ ಬದುಕು ನಮ್ಮದಾಗಲಿ. ಧರ್ಮದ ಜಾಗೃತಿಯಾಗುತ್ತಾ ಇರಲಿ.  ರಮೇಶ ಗುರುಸ್ವಾಮಿ ಮತ್ತು ಶಾಂಭವಿಯವರ ಸೇವೆ ಅಭಿನಂದನೀಯ. ಇನ್ನೊಮ್ಮೆಯಾದರೂ ನಾನು ಅಪ್ಪಾಜಿ ಬೀಡುಗೆ ಬರುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಸಲ್ದ ರಸೆ ನವೀನ್‌ ಡಿ. ಪಡೀಲ್‌ ಅವರು ಮಾತನಾಡಿ, ಭಕ್ತಿಯ ಧಾರ್ಮಿಕ ಕಾರ್ಯಕ್ರಮಕ್ಕೆ ನನ್ನನ್ನು ದೇವರು ಇಲ್ಲಿಗೆ ಕರೆಸಿ¨ªಾರೆ. ಅಯ್ಯಪ್ಪ ದೇವರು ಹಣದ ದೇವರು ಅಲ್ಲ, ಅರೋಗ್ಯ ವೃದ್ಧಿ ಮಾಡುವ ದೇವರು.  ಅಯಪ್ಪ ದೇವರನ್ನು ಭಕ್ತಿಯಿಂದ ಪೂಜಿಸಿದಲ್ಲಿ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ.  ಇಂತಹ ವೇದಿಕೆಯಲ್ಲಿ ನನಗೂ ಅವಕಾಶ ನೀಡಿದ್ದಕ್ಕೆ ಕೃತಜ್ಞತೆಗಳು ಎಂದರು.

ಅಪ್ಪಾಜಿ ಬೀಡು ಫೌಂಡೇಶನ್‌ನ ಪ್ರಮುಖರಾದ ರಮೇಶ್‌ ಗುರುಸ್ವಾಮಿ ಅವರ ಪತ್ನಿ ಮತ್ತು ಮಕ್ಕಳನ್ನು  ಒಡಿಯೂರು ಶ್ರೀಗಳು ಸಮ್ಮಾನಿಸಿದರು. ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ರಮೇಶ್‌ ಗುರುಸ್ವಾಮಿಯವರು, ನನಗೆ ಈ ಭಾಗ್ಯವು ಇಂದು ದೊರೆಯಿತು. ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶದಿಂದ ಆಗಮಿಸಿದ ಎÇÉಾ ಅತಿಥಿಗಳಿಗೆ ನನ್ನ ಕೃತಜ್ಞತೆಗಳು. ಕಳೆದ 25ವರ್ಷಗಳಿಂದ ನನ್ನೊಂದಿಗೆ ಕ್ಷೇತ್ರದ ಟ್ರಷ್ಟಿಗಳು, ಪದಾಧಿಕಾರಿಗಳು, ಬೆಳ್ಳಿ ಹಬ್ಬ ಸಂಭ್ರಮದ ಕಾರ್ಯಾಧ್ಯಕ್ಷರಾದ ದಿನೇಶ್‌ ಕುಲಾಲ…, ಮಹಿಳಾ ಸದಸ್ಯರು ಎಲ್ಲರೂ ನನ್ನೊಂದಿಗೆ ಕೆಲಸ ಮಾಡಿದ್ದು ಈ ಸಮ್ಮಾನವನ್ನು ಅವರೆಲ್ಲರಿಗೆ ಅರ್ಪಿಸುತ್ತಿದ್ದೇನೆ ಎಂದು ನುಡಿದರು.

ಟ್ರಸ್ಟಿ ಹಾಗೂ  ಬೆಳ್ಳಿ ಹಬ್ಬ ಸಂಭ್ರಮದ ಕಾರ್ಯಾಧ್ಯಕ್ಷರಾದ ಪತ್ರಕರ್ತ ದಿನೇಶ್‌ ಕುಲಾಲ್‌ ಮತ್ತು ಪರಿವಾರದವರನ್ನು ಹಾಗೂ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸುರೇಶ್‌ ಶೆಟ್ಟಿ ಕೇದಗೆ ಇವರನ್ನು ಪರಿವಾರ ಸಮೇತ ಸಮ್ಮಾನಿಸಿ ಗೌರವಿಸಲಾಯಿತು.

ಗೌರವ ಅತಿಥಿಗಳಾಗಿ ಪೊವಾಯಿಯ ಶ್ರೀ ರುಂಡಮಾಲಿನಿ ದೇವಸ್ಥಾನದ ಶ್ರೀ ಸುವರ್ಣ ಬಾಬಾ, ಜನಪ್ರಿಯ ಜೋತಿಷ ಹಾಗೂ ಪುರೋಹಿತರಾದ ಡಾ| ಎಂ. ಜೆ. ಪ್ರವೀಣ್‌ ಭಟ್‌, ಜಾಗತಿಕ ಬಂಟ್ಸ್‌  ಅಸೋಸಿಯೇಶನ್‌ ಫೆಡರೇಶನ್‌ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಎಸ್‌.  ಪೂಜಾರಿ, ವಿಕೆ ಸಮೂಹ ಸಂಸ್ಥೆಯ ಸಿಎಂಡಿ ಕರುಣಾಕರ ಎಂ. ಶೆಟ್ಟಿ, ಹೊಟೇಲ್‌ ಕೃಷ್ಣ ಪ್ಯಾಲೇಸ್‌ನ ಸಿಎಂಡಿ ಕೃಷ್ಣ ವೈ. ಶೆಟ್ಟಿ, ಕ್ಲಾಸಿಕ್‌  ಗ್ರೂಪ್‌ ಆಫ್‌ ಹೊಟೇಲ್‌ನ  ಸಿಎಂಡಿ ಸುರೇಶ್‌ ಕಾಂಚನ್‌,  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ,  ಬಂಟ್ಸ್‌  ಸಂಘ ಪಡುಬಿದ್ರೆಯ ಮಾಜಿ ಅಧ್ಯಕ್ಷ  ನವೀನ್‌ ಚಂದ್ರ ಜೆ. ಶೆಟ್ಟಿ ಪಡುಬಿದ್ರೆ, ಮಹೇಶ್‌ ಶೆಟ್ಟಿ ತೆಳ್ಳಾರ್‌, ಬಂಟರ ಸಂಘ ಮುಂಬಯಿ ಸೋಶಿಯಲ್‌ ವೆಲ್ಫೆàರ್‌ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಮುಲುಂಡ್‌  ಬಂಟ್ಸ್‌ನ  ಉಪಾಧ್ಯಕ್ಷ ವಸಂತ  ಪಲಿಮಾರ್‌, ಪುಣೆ ಬಂಟ್ಸ್‌ ಸಂಘದ ಅಧ್ಯಕ್ಷ ಇನ್ನ ಕುರ್ಕಿಬೆಟ್ಟು ಸಂತೋಷ್‌ ಶೆಟ್ಟಿ, ಬಂಟರ ಸಂಘ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ,  ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಅಡ್ವೆ ಕಾಂತಲಗುಟ್ಟು ಸುಧಾಕರ ವೈ. ಶೆಟ್ಟಿ, ವಿರಾರ್‌  ಹೊಟೇಲ್‌ ಎಂ. ಎಂ. ನ ಹರೀಶ್‌ ಶೆಟ್ಟಿ ಗುರ್ಮೆ, ಬೋಂಬೆ ಬಂಟ್ಸ್‌ ಅಸೋಸಿಯೇಶನಿನ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಪ್ರಭಾದೇವಿ ಉದ್ಯಮಿ  ದೀಪಕ್‌ ರಾಮದೇವ್‌ ತ್ಯಾಗಿ, ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ ಎಲ್‌. ಕುಲಾಲ…, ಪುಣೆ ಶ್ರೀ ಮಹಾಗಣಪತಿ  ಯಕ್ಷಗಾನ ಮಂಡಳಿಯ ಅಧ್ಯಕ್ಷ  ಪ್ರವೀಣ್‌ ಶೆಟ್ಟಿ ಪುತ್ತೂರು, ಮೀರಾ-ಡಹಾಣು ಬಂಟ್ಸ್‌ ಇದರ ವಸಾಯಿ-ನಯಾಗಾಂವ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಕೆ. ಶೆಟ್ಟಿ, ಮಂಗಳೂರು ಶ್ರೀ ವೀರ ನಾರಾಯಣ ದೇವಸ್ಥಾನದ ಕಾರ್ಯಾಧ್ಯಕ್ಷ ಬಿ. ಪ್ರೇಮಾನಂದ ಕುಲಾಲ…, ಗುರುಪ್ರಸಾದ್‌ ಭಟ್‌,  ಗಣೇಶ್‌ ಶೆಟ್ಟಿ ತೆಳ್ಳಾರ್‌, ರವಿ ದೇವಾಡಿಗ ಉಪಸ್ಥಿತರಿದ್ದರು. ಅತಿಥಿ-ಗಣ್ಯರುಗಳನ್ನು ಶ್ರೀಗಳು ಗೌರವಿಸಿದರು.

ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್‌ ಜಿ. ಕುಲಾಲ್‌  ಸ್ವಾಗತಿಸಿದರು. ಉಪಾಧ್ಯಕ್ಷರಾದ ಸಂತೋಶ್‌ ವಿ. ಶೆಟ್ಟಿ ವಂದಿಸಿದರು. ಅತಿಥಿ-ಗಣ್ಯರು ಸಂದಭೋìಚಿತವಾಗಿ ಮಾತನಾಡಿದರು. ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ ಟ್ರಸ್ಟಿಗಳಾದ ಶಾಂಭವಿ ಆರ್‌. ಶೆಟ್ಟಿ, ರತ್ನಾಕರ ಜಿ. ಶೆಟ್ಟಿ,  ಸುಧಾಕರ್‌ ಎನ್‌. ಶೆಟ್ಟಿ, ಪುಷ್ಪರಾಜ್‌ ಎಸ್‌. ಶೆಟ್ಟಿ, ರತ್ನಾಕರ ಆರ್‌. ಶೆಟ್ಟಿ, ಮೋಹನ್‌ ಟಿ. ಚೌಟ,  ಟ್ರಸ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್‌ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಶ್‌ ವಿ. ಶೆಟ್ಟಿ, ಜತೆ ಕಾರ್ಯದರ್ಶಿ ಭರತ್‌ ಶೆಟ್ಟಿ ಅತ್ತೂರು, ಜತೆ ಕೋಶಾಧಿಕಾರಿ ನೀಮಾ  ರಾಜೇಶ್‌ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಉದಯ ಶೆಟ್ಟಿ ಟಾಟಾ, ಬಾಲಚಂದ್ರ ಡಿ. ಶೆಟ್ಟಿ, ಪಾರ್ಥಸಾರತಿ ಆರ್‌. ಶೆಟ್ಟಿ, ಸನತ್‌ ಕುಮಾರ್‌ ಶೆಟ್ಟಿ, ಗಣೇಶ್‌ ಸಾಲ್ಯಾನ್‌, ಪದ್ಮನಾಭ ಶೆಟ್ಟಿ, ಜಯಕರ ಶೆಟ್ಟಿ, ಶೇಖರ್‌  ಶೆಟ್ಟಿ, ಸತೀಶ್‌ ಪೂಜಾರಿ, ಗಣೇಶ್‌ ಶೆಟ್ಟಿ, ಸತೀಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ವಿಜಯ ಶೆಟ್ಟಿ, ಪ್ರಸಾದ್‌ ಶೆಟ್ಟಿ, ಸಲಹೆಗಾರರಾದ ಅರುಣ್‌ ಆಳ್ವ ಕಾಂತಾಡಿಗುತ್ತು, ಭೋಜ ಎಸ್‌. ಶೆಟ್ಟಿ ಕೇದಗೆ, ಪ್ರವೀಣ್‌ ಕುಮಾರ್‌  ಶೆಟ್ಟಿ ಕುರ್ಕಾಲ…, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ, ಕಾರ್ಯದರ್ಶಿ ವಿನೋದಾ ಜೆ. ಶೆಟ್ಟಿ, ಕೋಶಾಧಿಕಾರಿ ರೋಹಿಣಿ ಎಸ್‌. ಪೂಜಾರಿ, ಉಪ ಕಾರ್ಯಾಧ್ಯಕೆÏ ವಿಜಯಶ್ರೀ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ದಿವ್ಯಾ ಪಿ. ಶೆಟ್ಟಿ, ಜತೆ ಕೋಶಾಧಿಕಾರಿ ಸುಜಾತಾ ಎನ್‌. ಪುತ್ರನ್‌,  ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ನಿರ್ಮಲಾ ಕೆ. ಶೆಟ್ಟಿ, ಪ್ರಜ್ಞಾ  ಎಸ್‌. ಶೆಟ್ಟಿ, ರಮ್ಯಾ ಎಸ್‌. ಶೆಟ್ಟಿ, ರಾಣಿ ಆರ್‌. ಶೆಟ್ಟಿ, ರಾಗಿಣಿ ಆರ್‌. ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ಸುಮಿತ್ರಾ ಪಿ. ಶೆಟ್ಟಿ, ಶೋಭಾ ವಿ. ಶೆಟ್ಟಿ, ಸಲಹೆಗಾರಗಾದ ಲೀಲಾ ಎಸ್‌.  ಶೆಟ್ಟಿ, ಉಷಾ ಬಿ. ಶೆಟ್ಟಿ, ಯಶೋದಾ ಎಸ್‌. ಶೆಟ್ಟಿ, ಕವಿತಾ ಜಿ. ಶೆಟ್ಟಿ, ಅರ್ಪಿತಾ  ಪಿ. ಶೆಟ್ಟಿ, ವಿಶೇಷ ಆಮಂತ್ರಕರು ಹಾಗೂ ಅಪ್ಪಾಜಿ ಬೀಡು ಫೌಂಡೇಶನಿನ ಎÇÉಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಟ್ರಸ್ಟಿ ರಘುನಾಥ ಎನ್‌. ಶೆಟ್ಟಿ, ಅರ್ಪಿತಾ ಶೆಟ್ಟಿ, ಶಶಿಕಲಾ ಶೆಟ್ಟಿ, ಶಕುಂತಳಾ  ಶೆಟ್ಟಿ, ಪ್ರಮೀಳಾ ವಿ. ಕುಲಾಲ್‌ ಮತ್ತು ಪತ್ರಕರ್ತ ದಿನೇಶ್‌ ಕುಲಾಲ್‌ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ   ನಿರ್ವಹಿಸಿದರು. ಮನೋರಂ ಜನೆಯ ಅಂಗವಾಗಿ ತುಳು ಕನ್ನಡ ಚಿತ್ರರಂಗದ ಕಲಾವಿದರಿಂದ ನಗು ನಗುತ್ತ ನಲಿ ಹಾಸ್ಯ ಪ್ರದರ್ಶನವು ನಡೆಯಿತು.

 ಇಂತಹ ಉತ್ತಮ ಕೆಲಸಗಳಿಂದ ಸಮಾಜದಲ್ಲಿ ಹೆಸರು ಉಳಿಯಲಿ.  ಇಪ್ಪತ್ತೈದನೆ ಈ ಧಾರ್ಮಿಕ ಸಂಭ್ರಮವು ಅತೀ ಉತ್ತಮವಾಗಿ ನಡೆದಿದ್ದು ನೂರನೇ ವರ್ಷವನ್ನು ಆಚರಿಸಲಿ ಎಂದು ಶುಭ ಹಾರೈಸುತ್ತೇನೆ.
       – ಐಕಳ ಹರೀಶ್‌ ಶೆಟ್ಟಿ, 
ಅಧ್ಯಕ್ಷರು,ಜಾಗತಿಕ ಬಂಟರ ಒಕ್ಕೂಟ

 ನಾವೆÇÉಾ ಒಂದಾಗಿ ಧರ್ಮವನ್ನು ಉಳಿಸಿ ಬೆಳೆಸೋಣ. ಮೂಢನಂಬಿಕೆಯಿಲ್ಲದೆ ಭಗವಂತನ ಪೂಜೆ ಮಾಡೋಣ.  ಇಂತಹ ಧಾರ್ಮಿಕ ಕಾರ್ಯಗಳಿಂದ ಜೀವನದಲ್ಲಿ ಸಂತೋಷ ತುಂಬಲಿ.  ನಮಗೆಲ್ಲರಿಗೂ ಆರೋಗ್ಯ ಭಾಗ್ಯ ನೀಡಲಿ.
   – ಚಂದ್ರಶೇಖರ ಎಸ್‌. ಪೂಜಾರಿ, 
ಅಧ್ಯಕ್ಷರು,ಬಿಲ್ಲವರ ಅಸೋ. ಮುಂಬಯಿ

 ಶಬರಿಮಲೆಗೆ 800 ವರ್ಷಗಳ ಇತಿಹಾಸವಿದೆಯಂತೆ. ಅಲ್ಲಿ ಪಡಿಪೂಜೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ. ಶಬರಿಮಲೆಗೆ ಭಕ್ತಿಯಿಂದ ಹೋದಾಗ ಅಲ್ಲಿ ಶಕ್ತಿ ದೊರೆಯುತ್ತದೆ. ನಮ್ಮ ಜಿÇÉೆಯ ಅಭಿವೃದ್ಧಿªಗಾಗಿ ಅಲ್ಲಿ ಮಾಡಿದ ಪ್ರಾರ್ಥನೆ ಕಾರ್ಯಗತವಾಗಿದೆ.
      – ತೋನ್ಸೆ ಜಯಕೃಷ್ಣ ಶೆಟ್ಟಿ, 
ಅಧ್ಯಕ್ಷರು,ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ

 ಅಪ್ಪಾಜಿ ಬೀಡು ಕ್ಷೇತ್ರದ ಇಂದಿನ ಕಾರ್ಯಕ್ರಮ ಮುಂಬಯಿಗರಿಗೆ ಉತ್ತಮ ಸಂದೇಶ ನೀಡಿದೆ. ರಮೇಶ್‌ ಗುರುಸ್ವಾಮಿ ಮತ್ತು ದಿನೇಶ್‌ ಕುಲಾಲ್‌ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯವನ್ನು ಹಮ್ಮಿಕೊಳ್ಳ ಲಾಗಿದೆ. ಅವರೆಲ್ಲರಿಗೂ ಅಭಿನಂದನೆಗಳು. 
     – ಸುರೇಶ್‌ ಕಾಂಚನ್‌, 
 ಸಿಎಂಡಿ, ಕ್ಲಾಸಿಕ್‌  ಗ್ರೂಪ್‌ ಹೊಟೇಲ್‌ 

ಚಿತ್ರ -ವರದಿ : ಈಶ್ವರ ಎಂ. ಐಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ