ಯಕ್ಷಗಾನ ಕಲಿಕೆಯಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ:ಕಟೀಲು ಸದಾನಂದ ಶೆಟ್ಟಿ

Team Udayavani, Sep 7, 2019, 11:41 AM IST

ಮುಂಬಯಿ, ಸೆ. 6: ವಾಪಿ ಕನ್ನಡ ಸಂಘ ಮತ್ತು ತುಳುನಾಡ ಐಸಿರಿ ವಾಪಿ ಇವರ ಜಂಟಿ ಆಶ್ರಯದಲ್ಲಿ ಯಕ್ಷಗಾನ ತರಬೇತಿ ಶಿಬಿರವು ಸೆ. 1ರಂದು ವಾಪಿ ಕನ್ನಡ ಸಂಘದ ಸಭಾಗೃಹದಲ್ಲಿ ಚಾಲನೆಗೊಂಡಿತು.

ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಯಕ್ಷಗುರು ಸದಾನಂದ ಶೆಟ್ಟಿ ಕಟೀಲು ಅವರು, ಕೆಲವು ವರ್ಷಗಳ ಹಿಂದೆ ಯಕ್ಷಗಾನ ಕಲಾವಿದನಿಗೆ ಅಷ್ಟೊಂದು ಮಾನ್ಯತೆ ಸಿಗುತ್ತಿರಲಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು, ಮಹಿಳೆಯರು, ವಿದ್ಯಾವಂತರು, ವೈದ್ಯರು ಹೀಗೆ ಯಕ್ಷಗಾನ ಕಲೆಗೆ ಹೆಚ್ಚಿನವರು ಆಕರ್ಷಿತರಾಗುತ್ತಿದ್ದಾರೆ. ಈಗ ಮಕ್ಕಳು ರಂಗಭೂಮಿಯ ಕಡೆ ಆಸಕ್ತಿ ವಹಿಸುತ್ತಿರುವುದು ಅಭಿನಂದನೀಯ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಭಾಷೆ, ಸಂಸ್ಕೃತಿ, ಕಲೆ ರಂಗ ಮಾಧ್ಯಮವನ್ನು ಶ್ರೀಮಂತಗೊಳಿಸುವ ಕೀರ್ತಿಗೆ ಪಾತ್ರರಾಗುವುದರಲ್ಲಿ ಎರಡು ಮಾತಿಲ್ಲ. ಯಕ್ಷಗಾನ ತರಬೇತಿಯು ಮಕ್ಳಳ ಮನಸಲಿ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿಯಾಗುತ್ತದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಗುಜರಾತಿನ ವಾಪಿ ಪರಿಸರದಲ್ಲಿ ಕನ್ನಡ ಭಾಷೆ ನುಡಿಗಳಿಗೆ ಮಹತ್ತರವಾದ ಸೇವೆ ಸಲ್ಲಿಸುತ್ತಿದ್ದಾರೆ. ವಾಪಿ ಕನ್ನಡ ಸಂಘ ಮತ್ತು ಇತ್ತೀಚೆಗಿನ ದಿನಗಳಲ್ಲಿ ಹುಟ್ಟಿಕೊಂಡ ತುಳುನಾಡ ಐಸಿರಿ ವಾಪಿ ಯಕ್ಷಗಾನ ಕಲೆಯನ್ನು ಜೀವಂತವಾಗಿ ಉಳಿಸುವ ಕಾರ್ಯದಲ್ಲಿ ತೊಡಗಿದೆ. ವಾಪಿ, ವಲ್ಸಾಡ್‌, ಸೂರತ್‌, ದಮನ್‌ ಮತ್ತು ಉಮರ್‌ಗಾಂವ್‌ ಸಂಘಟನೆಗಳು ಮಾಡುತ್ತಿರುವ ಕಾರ್ಯ ಅಭಿನಂದನೀಯವಾಗಿದೆ. ಈ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಎರಡು ಸಂಘಟನೆಗಳ ಹೆಸರನ್ನು ಪ್ರಸಿದ್ಧಿಗೊಳಿಸುವುದಕ್ಕೆ ಮುಂದಾಗಬೇಕು ಎಂದರು.

ವೇದಿಕೆಯಲ್ಲಿ ವಾಪಿ ಕನ್ನಡ ಸಂಘದ ಅಧ್ಯಕ್ಷೆ ನಿಶಾ ನಾರಾಯಣ ಶೆಟ್ಟಿ, ತುಳುನಾಡ ಐಸಿರಿ ವಾಪಿ ಇದರ ಅಧ್ಯಕ್ಷ ಬಾಲಕೃಷ್ಣ ಎಸ್‌. ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಘೋಷಿ,ಸದಾನಂದ ಶೆಟ್ಟಿ ಕಟೀಲ್, ಭಾಸ್ಕರ್‌ ಸರಪಾಡಿ, ವಿಶ್ವಸ್ತರಾದ ನಾರಾಯಣ ಶೆಟ್ಟಿ, ಶಿಬಿರದ ಸಂಚಾಲಕರಾದ ನವೀನ್‌ ಶೆಟ್ಟಿ, ನಾಗರಾಜ್‌ ಶೆಟ್ಟಿ, ಡಾ| ರಾಧಾಕೃಷ್ಣ ನಾಯರ್‌, ಅರಣ್ಯ ರಕ್ಷಣಾ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ನೂತನ ಯಕ್ಷಗಾನ ಶಿಬಿರಕ್ಕೆ ಚಾಲನೆ ನೀಡಿದರು.

ತುಳುನಾಡ ಐಸಿರಿಯ ಅಧ್ಯಕ್ಷ ಬಾಲಕೃಷ್ಣ ಎಸ್‌. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನ ಶಿಬಿರದ ನಮ್ಮ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಇದರ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು.

ಹಿರಿಯ ಸಂಘಟಕ, ವಾಪಿ ಕನ್ನಡ ಸಂಘದ ವಿಶ್ವಸ್ತ ಪಿ ಎಸ್‌. ಕಾರಂತ್‌ ಅವರು ಸಂಘವು ನಡೆದು ಬಂದ ಬಗೆಯನ್ನು ವಿವರಿಸಿ, ಯಕ್ಷಗಾನ ಹಿಂದೆ ಯಾವ ರೀತಿ ಇತ್ತು, ಈಗ ಹೇಗಿದೆ, ಇದು ನಮ್ಮ ಸಂಘ ಗೌರವ ಹೆಚ್ಚಿಸುತ್ತದೆ, ಶಿಬಿರಕ್ಕೆ ಬೇಕಾಗುವ ಸವಲತ್ತುಗಳನ್ನು ಕೊಟ್ಟು ಶಿಬಿರದ ಯಶಸ್ಸಿಗೆ ಪಾತ್ರರಾಗೋಣಎಂದರು.

ವಾಪಿ ಕನ್ನಡ ಸಂಘದ ಅಧ್ಯಕ್ಷೆ ನಿಶಾ ನಾರಾಯಣ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನದ ಶಿಬಿರದ ಅಚ್ಚುಕಟ್ಟಾಗಿ ನಡೆಯಲು ಸಂಘದ ಎಲ್ಲ ಸದಸ್ಯರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಶಿಬಿರ ನಡಿಸಿ ಈ ಶಿಬಿರದ ಮುಖೇನ ಒಂದು ಒಳೆಯ ಯಕ್ಷಗಾನ ಪ್ರದರ್ಶನ ಇದೆ ಸಭಾಗೃಹದಲಿ ಮಾಡಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿ 50ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸುಕೇಶ್‌ ಎ. ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ ಪುತ್ತೂರು, ಕಿರಣ್‌ ಅಂಚನ್‌ ಮತ್ತು ಮಹಿಳಾ ವಿಭಾಗದವರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಚಂದ್ರಿಕಾ ಅಶೋಕ್‌ ಕೋಟ್ಯಾನ್‌ ಪ್ರಾರ್ಥನೆಗೈದರು. ವಿಶ್ವಸ್ತರಾದ ಮಲ್ಲಾರ್‌ ನಿಂಬರ್ಗಿ ಅವರು ಕಾರ್ಯಕ್ರಮ ನಿರೂಪಿಸಿದರು. ತುಳುನಾಡ ಐಸಿರಿಯ ಗೌರವ ಕಾರ್ಯದರ್ಶಿ ಉದಯ ಬಿ. ಶೆಟ್ಟಿ ಹಾಗೂ ನಿಶಾ ನಾರಾಯಣ ಶೆಟ್ಟಿ ಅವರು ಗಣ್ಯರನ್ನು ಗೌರವಿಸಿದರು. ಶಿಬಿರದ ಸಂಚಾಲಕರಾದ ನಾಗರಾಜ ಶೆಟ್ಟಿ ಅವರು ಶಿಬಿರದ ನೀತಿ-ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ತುಳುನಾಡ ಐಸಿರಿಯ ಉಪಾಧ್ಯಕ್ಷ ನವೀನ್‌ ಎಸ್‌. ಶೆಟ್ಟಿ ವಂದಿಸಿದರು. ಕೊನೆಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ