ದುಬೈಯಲ್ಲಿ ಯಕ್ಷಗಾನ ಅಭ್ಯಾಸ ತರಗತಿ 2018 ಪ್ರಾರಂಭ

Team Udayavani, Jul 6, 2018, 3:45 PM IST

ದುಬೈ: ಇಲ್ಲಿಯ ಟ್ಯಾಲೆಂಟ್ಝೋನ ಸಂಗೀತ  ಮತ್ತು ನೃತ್ಯ ಸಂಸ್ಥೆಯ ಸಹಯೋಗದಲ್ಲಿ 2018ನೇ ಸಾಲಿನ ಯಕ್ಷಗಾನ ಅಭ್ಯಾಸ  ನೂತನ ತರಗತಿಗಳ ಉದ್ಘಾಟನಾ ಸಮಾರಂಭವು ಜೂನ್ 29 ರಂದು  ನಗರದ ಅಲ್ನಾದ 2 ರಲ್ಲಿರುವ ಟ್ಯಾಲೆಂಟ್ಝೋನ್ಸ್‌ ನ ಸಭಾಂಗಣದಲ್ಲಿ ವಿದ್ಯುಕ್ತವಾಗಿ ನೆರವೇರಿತು.

ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಳರ ಗಣಪತಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ತರಗತಿ ಸಂಚಾಲಕರಾದ ಶ್ರೀಯುತ ದಿನೇಶ ಶೆಟ್ಟಿ ಕೊಟ್ಟಿಂಜರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡು ಸ್ವಾಗತಿಸಿದರು. 

ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ ಕಲಾಪೋಷಕ ಸುಧಾಕರ ರಾವ್ಪೇಜಾವರ ಮತ್ತು ಕನ್ನಡ ತುಳು ಚಿತ್ರನಿರ್ಮಾಪಕ ಶೋಧನ್‌ ಪ್ರಸಾದ್‌  ತರಗತಿ ಸಂಚಾಲಕರಾದ ದಿನೇಶ ಶೆಟ್ಟಿಕೊಟ್ಟಿಂಜ, ಯಕ್ಷಗಾನ ಶಿಕ್ಷಕರಾದ ಶರತ್ಕುಮಾರ್, ಪೋಷಕ ಜಯಾನಂದ ಪಕ್ಕಳರ ಜೊತೆಗೆ ಗುರುಗಳಾದ ಶೇಖರ್‌ ಡಿಶೆಟ್ಟಿಗಾರ್‌ ಕಿನ್ನಿಗೋಳಿಯವರು ದೀಪಬೆಳಗಿಸುವ ಮೂಲಕ ತರಗತಿ ಉದ್ಘಾಟಿಸಿದರು. ಜೊತೆ ಜೊತೆಗೆ ವಿದ್ಯಾರ್ಥಿಗಳಿಂದ ತರಗತಿಯ ನಿತ್ಯ ಪ್ರಾರ್ಥನೆಯೂ ಸುಶ್ರಾವ್ಯವಾಗಿ ಮೊಳಗಿತು.

ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಶೋಧನ್‌ ಪ್ರಸಾದ್‌ಮತ್ತು ಸುಧಾಕರ ರಾವ್ಪೇಜಾವರರು ಸಭೆಯನ್ನುಉದ್ದೇಶಿಸಿ ಮಾತನಾಡುತ್ತಾ,  ಶೇಖರ್‌ ಡಿ. ಶೆಟ್ಟಿಗಾರರು ಕಲಾ ಸಹೃದಯರು  ಹೆತ್ತವರ ಜೊತೆಗೂಡಿ ನಡೆಸುವಕಾರ್ಯಕ್ರಮಗಳಿಗೆ ತಮ್ಮ ಸರ್ವಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ,ಕಷ್ಟ ಸಾಧ್ಯವಾದ ಈ ಕೈಂಕರ್ಯಕ್ಕೆ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿರುವ ಯಕ್ಷಗಾನ ಆಸಕ್ತರೆಲ್ಲ ಬೆಂಬಲಿಸಬೇಕೆಂದು ಕೇಳಿಕೊಂಡರು. 

ಯಕ್ಷಗಾನ ತರಗತಿಗಳ ಪಾಠ ನಾಟ್ಯಗಳಲ್ಲಿ ಶೇಖರ್‌ ಡಿ. ಶೆಟ್ಟಿಗಾರರ ಜೊತೆ ಕಿಶೋರ್‌ ಗಟ್ಟಿಉಚ್ಚಿಲ ಮತ್ತುಶ ರತ್‌ ಕುಮಾರರು ಸಹಕರಿಸಲಿದ್ದಾರೆ ಎಂದು ತಿಳಿಸಿದ ಯಕ್ಷಗಾನ ಅಭ್ಯಾಸ ತರಗತಿ ಸಂಚಾಲಕ ದಿನೇಶ ಶೆಟ್ಟಿಯವರು ಈ ಸದವಕಾಶವನ್ನುವಿದ್ಯಾರ್ಥಿಗಳು  ಹೆತ್ತವರು ಚೆನ್ನಾಗಿ ಉಪಯೋಗಿಸಿಕೊಂಡು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕೆಂದು ಹಿತೋಕ್ತಿಗಳನ್ನಾಡಿದರು. 

ಗಿರೀಶ ನಾರಾಯಣ್‌ ಕಾಟಿಪಳ್ಳ ಮತ್ತು ಜಯಲಕ್ಷ್ಮಿಪಕ್ಕಳ ಅವರು ತಮ್ಮ ಅನಿಸಿಕೆಗಳನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮದ ಕೊನೆಯಲ್ಲಿ ಶೇಖರ್‌ ಡಿ . ಶೆಟ್ಟಿಗಾರರು ತರಗತಿಯ ವತಿಯಿಂದ ನಡೆವ ಸಾಧನಾ ಸಂಭ್ರಮ 2018ರ ವಿವಿಧ ಸ್ಪರ್ಧೆ ಮತ್ತು ಡಿಸೆಂಬರ್‌ ತಿಂಗಳಲ್ಲಿ ನಡೆಯಲಿರುವ ಮುಖ್ಯ ಸಮಾರಂಭ ಹಾಗೂ ಜುಲೈ 13ರಂದು ದೇರದುಬೈಯ ಟ್ವಿನ್ಟವರ್‌ನ ಲ್ಲಿ ನಡೆಯಲಿರುವ ಕಪ್ ತರಬೇತಿ ಶಿಬಿರದ ಸ್ಥೂಲ ನೋಟವನ್ನು ಸಭೆಯ ಮುಂದಿಟ್ಟು ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಯುಕ್ತ ಅರಬ್‌ ಸಂಸ್ಥಾನದ ಕಲಾಭಿಮಾನಿಗಳು, ಕಲಾಪೋಷಕರು ಸಹಕರಿಸಬೇಕೆಂದು ಕೇಳಿಕೊಂಡರು. 

ದುಬೈ ನಗರದ ಅಲ್ನಾದ 2 ಲ್ಲಿರುವ ಟ್ಯಾಲೆಂಟ್ ಝೋನ್‌ನ ಸಂಗೀತ ಮತ್ತು ನೃತ್ಯ ಸಂಸ್ಥೆಯಲ್ಲಿ ಪ್ರತಿ ಶುಕ್ರವಾರ ಪೂರ್ವಾಹ್ನ  10:00  ಗಂಟೆಯಿಂದ ಅಪರಾಹ್ನ  1:00 ಗಂಟೆಯವರೆಗೆ ಉಚಿತವಾಗಿ ನಡೆಸುವ ಈ ಯಕ್ಷಗಾನ ಅಭ್ಯಾಸ ತರಗತಿಗಳ ತಿಂಗಳ ಖರ್ಚು ವೆಚ್ಚಗಳ ಪ್ರಾಯೋಜಕರಾಗಿ ದಾನಿಗಳು ಮುಂದೆ ಬರಬೇಕೆಂದು ಶೇಖರ್‌ ಡಿ. ಶೆಟ್ಟಿಗಾರ್‌ ವಿನಂತಿಸಿದರು.

ತರಗತಿ ಸೇರ್ಪಡೆಗೆ ಹೆತ್ತವರು, ವಿದ್ಯಾರ್ಥಿಗಳು ಸಂಪರ್ಕಿಸಬೇಕಾದ ವಿಳಾಸ   

ಟ್ಯಾಲೆಂಟ್ ಝೋನ್‌   
105 ಡಿ ,ಅಹ್ಲಿ ಹೌಸ್ಬಿ, ರಾವಿ ರೆಸ್ಟೋರೆಂಟ್‌ ಬಿಲ್ಡಿಂಗ್,
ಅಲ್ಸಲಾಮ್‌ ಫ್ರೈವೇಟ್‌ ಸ್ಕೂಲ್‌ ಎದುರು
ಅಲ್ ನಾದ 2, ದುಬೈ .
ದೂರವಾಣಿ : +971 4 2381055 ( ಟ್ಯಾಲೆಂಟ್ಝೋನ್)
ಮೊಬೈಲ್ : +971 50 8968565 ( ಶೇಖರ್‌ ಡಿ.ಶೆಟ್ಟಿಗಾರ್ )


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ