ನಿಮ್ಮಲ್ಲಿಗೆ ಕನ್ನಡ ಕೂಟ

6 ತಿಂಗಳಲ್ಲಿ 160ಕ್ಕೂ ಹೆಚ್ಚು ಕಾರ್ಯಕ್ರಮ

Team Udayavani, Dec 12, 2020, 1:11 PM IST

ನಿಮ್ಮಲ್ಲಿಗೆ ಕನ್ನಡ ಕೂಟ

ಕ್ಯಾಲಿಫೋರ್ನಿಯಾ: ವಿಶ್ವದಾದ್ಯಂತ ಕೊರೊನಾ ಹಬ್ಬುತ್ತಿದ್ದಂತೆ ಅದನ್ನು ಎದುರಿಸಲು ಮುಂಚೂಣಿಯಲ್ಲಿ ಸಜ್ಜಾದ  ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಂಘ ತ್ರಿಶೂಲಮುಖೀ ಯೋಜನೆಯನ್ನು ಸಿದ್ಧಪಡಿಸಿತು. ಕೂಟಕ್ಕೆ ಬರಲು ಸಾಧ್ಯವಾಗದ ಸದಸ್ಯರಿಗೆ ನಿಮ್ಮಲ್ಲಿಗೇ ಕನ್ನಡ ಕೂಟ ಎನ್ನುವ ಸರಣಿ ಕಾರ್ಯಕ್ರಮ ಆರಂಭಿಸಿ ಮನೆಯಲ್ಲೇ ಬಂಧಿಯಾಗಿದ್ದ ಸದಸ್ಯರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿತು.

ಅಂತರ್ಜಾಲದ ಮೂಲಕ ನಿಮ್ಮ ಮನೆಯ ಪಡಸಾಲೆಯಲ್ಲಿ ವರ್ಚುವಲ್‌ ಕೂಟ ಕಾರ್ಯಕ್ರಮ ಆಯೋಜಿಸಲಾಯಿತು.  ಅನೀಶ್‌ ವಿದ್ಯಾಶಂಕರ ಅವರ ವಯೊಲಿನ್‌ ವಾದನ, ವಸುಧೇಂದ್ರ (ಸಾಹಿತ್ಯ) ಮತ್ತು ಅಮೋಘ ವರ್ಷ (ಕರ್ನಾಟಕದ ವನ್ಯ ಜೀವಿ) ಅವರೊಡನೆ ಸಂಭಾಷಣೆ, ಖ್ಯಾತ ನಿರೂಪಕಿ ಅಪರ್ಣ ವಸ್ತಾರೆ ನಿರೂಪಣೆಯ ಹಿಂದಿನ ಕತೆ, ಪ್ರಣಯರಾಜ ಶ್ರೀನಾಥ ಆದರ್ಶ ದಂಪತಿಯ ಗುಟ್ಟನ್ನು ಎಳೆಎಳೆಯಾಗಿ ಬಿಡಿಸಿಟ್ಟು ಸದಸ್ಯರನ್ನು ರಂಜಿಸಿದರು.

ಜೂಮ್‌ ಮೂಲಕ ಡಾ| ಚಂದ್ರ ಐತಾಳ್‌ ನಾಟಕ ಪ್ರಯೋಗ ಮಾಡಿದರು.  ಪ್ರಶಸ್ತಿ ವಿಜೇತ ವಿಜಯೇಂದ್ರ ಸಂಗೀತ ಕಚೇರಿ, ಸಂಧ್ಯಾ ಮಹೇಶ್‌ ಅವರ ಭಾರತ ನಾಟ್ಯ,  ಭಾರತಿ ಅವರಿಂದ ಮದ್ದು ಮತ್ತು ಚಿಕಿತ್ಸೆಗಳ ಕುರಿತು ಮಾಹಿತಿ ನೀಡಲಾಯಿತು.

ಲಾಕ್‌ಡೌನ್‌ನಿಂದಾಗಿ ನಾಟಕ ಪ್ರದರ್ಶನ ಸಾಧ್ಯವಾಗದೇ ಇದ್ದುದರಿಂದ ರೇಡಿಯೋ ಮೂಲಕ ನಾಟಕಗಳನ್ನು ಬಿತ್ತರಿಸುವ ಕೆಲಸ ಮಾಡಲಾಯಿತು.

ಮನೆಯಲ್ಲೇ ಇದ್ದ ಸದಸ್ಯರೆಲ್ಲ ಒಂದಾಗಿ, ಮುಕ್ತವಾಗಿ ಬೆರೆಯಲು ಕೂಡಿ ಕಲಿ ಕೂಡಿ ನಲಿ ಕಾರ್ಯಕ್ರಮ ನಡೆಸಲಾಯಿತು. ಇದರಲ್ಲಿ ಸದಸ್ಯರೇ ಅಡಿಗೆ ಮನೆ, ಯೋಗ, ಧ್ಯಾನ, ನೃತ್ಯ, ಸುಗಮ ಸಂಗಿತ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಕಾರ್ಯಕ್ರಮಗಳನ್ನು ನಡೆಸಿ ಲಾಕ್‌ಡೌನ್‌ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಲಾಯಿತು.

ಯುವ ಸದಸ್ಯರಿಗೆ ವಿಶೇಷ ವೇದಿಕೆ

ಮಕ್ಕಳು, ಯುವ ಜನರಿಗಾಗಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡಲಾಯಿತು. ಆಯ್ದ ವಿಷಯಗಳು ಮತ್ತು ಕೊರೊನಾ ಸಹಿತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಚರ್ಚಾಕೂಟ ನಡೆಸಿ ಆ ಮೂಲಕ ಯುವ ಸದಸ್ಯರ ಕ್ರಿಯಾಶೀಲತೆಗೆ ವೇದಿಕೆ ಕಲ್ಪಿಸಲಾಯಿತು. ಅಲ್ಲದೇ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮಕ್ಕಳೇ ನಿರ್ವಹಿಸಲು ಉತ್ಸಾಹ ತುಂಬುವ ಮೂಲಕ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಪ್ರೇರಣೆ ನೀಡಲಾಯಿತು.

ರಾಜ್ಯೋತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ನವರಾತ್ರಿ, ದಸರೆ, ವಿಜಯದಶಮಿ, ರಾಜ್ಯೋತ್ಸವ, ಮಕ್ಕಳ ದಿನ, ದೀಪಾವಳಿ ಎಲ್ಲವನ್ನು ಕನ್ನಡ ಸೂತ್ರದಲ್ಲಿ ಪೋಣಿಸಿ ನಾಡಹಬ್ಬ ಎಂದು ತನ್ನದೇ ವ್ಯಾಖ್ಯಾನ ನೀಡಿದೆ. ಕನ್ನಡ ಉತ್ಸವ ನಿರಂತರ ಎನ್ನುವುದೇ ಇದರ ಹಿಂದಿನ ಭಾವನೆ.

160 ಕ್ಕೂ ಹೆಚ್ಚು ಕಾರ್ಯಕ್ರಮ

ಕಳೆದ ಆರು ತಿಂಗಳಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ  160ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರಣಿಯಲ್ಲಿ 80, ಯುವ ಸಮಿತಿಯಲ್ಲಿ 16 ಮತ್ತು ಕೂಡಿ ಕಲಿ ಕೂಡಿ ನಲಿ ತರಗತಿಗಳು 75 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸುಮಾರು 250 ಗಂಟೆಗಳ ಕಾಲ ಸದಸ್ಯರು ಒಟ್ಟಿಗೆ ಸೇರಿದ್ದಾರೆ. ಕೊರೊನಾ ಇರದಿದ್ದರೆ ನಾಲ್ಕಾರು ಗಂಟೆಗಳ ನಾಲ್ಕು ಕಾರ್ಯಕ್ರಮಗಳಲ್ಲಿ ಕನ್ನಡಿಗರು ತೃಪ್ತಿ ಪಡುತ್ತಿದ್ದರು. ಮುಂದೆ ಕೊರೊನಾ ದೂರವಾದರೂ, ಕನ್ನಡಿಗರು ಹತ್ತಿರವಾಗಿ ಇಂಥ ಕಾರ್ಯಕ್ರಮಗಳನ್ನು ಮುಂದುವರಿಸುವ ಪಣ ತೊಟ್ಟಿದ್ದೇವೆ.

ಇದನ್ನೂ ಓದಿ:ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ: ಸುಧಾಮೂರ್ತಿ

ಯಶಸ್ಸಿನ ರುವಾರಿಗಳು

ಕೊರೊನಾ ಪರಿಸ್ಥಿತಿಯನ್ನು ಅರಿತು ಕನ್ನಡಿಗರಿಗೆ ಸ್ಥೈರ್ಯ ಒದಗಿಸಲು ಒಂದು ನಕ್ಷೆ, ಚೌಕಟ್ಟನ್ನು ಹಾಕಿ ಹತ್ತಾರು ಯೋಜನೆಗಳನ್ನುರೂಪಿಸಿದ ಅಧ್ಯಕ್ಷರಾದ ಧಾರಿಣಿ ದೀಕ್ಷಿತಾ, ಸಿಟಿಒ ಸತ್ಯಪ್ರಮೋದಾ, ನಿಮ್ಮಲ್ಲಿಗೆ ಕನ್ನಡ ಕೂಟದ ಉಪಾಧ್ಯಕ್ಷರಾದ ಗುರು ಪ್ರಸಾದ್‌, ಕೂಡಿ ಕಲಿಕೂಡಿ ನಲಿ ನಿರ್ದೇಶಕರು ಗೋಪಾಲ ಶ್ರೀನಾಥ್‌ ಮತ್ತು ಅನುರಾಧಾ ಗುಂಡಪ್ಪ, ಯುವ ಸಮಿತಿ ಮಾರ್ಗದರ್ಶಕರ ನಿರ್ದೇಶಕ ಉಮೇಶ ಸತ್ಯನಾರಾಯಣ, ಯುವ ಸಮಿತಿ ಅಧ್ಯಕ್ಷ  ಸಿದ್ಧಾಂತ ಮತ್ತು ಉಪಾಧ್ಯಕ್ಷೆ ಅನನ್ಯಾ, ಸಂಘದ ನಿರ್ದೇಶಕರು ಅನಂತ ಪ್ರಸಾದ, ಕಾರ್ಯದರ್ಶಿ ಶೈಲಾ ಚಲನ್‌, ಶೈಲಾ ರಾವ್‌ ಮತ್ತು ಪುಷ್ಪ ಗೌಡರ್‌, ತರಗತಿಗಳನ್ನು ನಡೆಸಿ ಕೊಟ್ಟವರು, ಕಲಾವಿದರು, ಸಾಹಿತಿಗಳು, ತಜ್ಞರು ಅನೇಕ. ಇದಕ್ಕೆಲ್ಲ ಸ್ಫೂರ್ತಿಯಾಗಿದ್ದು ಉತ್ಸಾಹದಿಂದ ಪಾಲ್ಗೊಂಡಿದ್ದ ಕನ್ನಡಿಗರು.

ವಿಶ್ವೇಶ್ವರ ದೀಕ್ಷಿತ, ಲಾಸ್‌ ಏಂಜಲೀಸ್‌, ಯು.ಎಸ್‌.ಎ.

ಟಾಪ್ ನ್ಯೂಸ್

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.