ಕೊಲಂಬಿಯ 2-0 ಜಯಭೇರಿ

ಕೊಪಾ ಅಮೆರಿಕ ಫ‌ುಟ್ಬಾಲ್

Team Udayavani, Jun 17, 2019, 6:09 AM IST

ಸಾಲ್ವಡೋರ್‌: ಕೊಪಾ ಅಮೆರಿಕ ಫ‌ುಟ್ಬಾಲ್ ಕೂಟದಲ್ಲಿ ಕೊಲಂಬಿಯ ಬಲಿಷ್ಠ ಆರ್ಜೆಂಟೀ ನಾವನ್ನು 2-0 ಗೋಲುಗಳಿಂದ ಉರುಳಿಸಿ ಶುಭಾರಂಭಗೈದಿದೆ.

ಪಂದ್ಯದುದ್ದಕ್ಕೂ ಆರ್ಜೆಂಟೀನಾ ಆಟಗಾರರು ಪ್ರಾಬಲ್ಯ ಮೆರೆದರೂ ಕೊಲಂಬಿಯ ಕೊನೆ ಹಂತದಲ್ಲಿ 2 ಗೋಲು ಹೊಡೆದು ವಿಜಯೋತ್ಸವ ಆಚರಿಸಿತು. ಈ ಮೂಲಕ ನೆಚ್ಚಿನ ಆರ್ಜೆಂಟೀನಾಕ್ಕೆ ಆರಂಭದಲ್ಲಿಯೇ ಹೊಡೆತ ನೀಡಿತು.

‘ಬಿ’ ಬಣದ ಈ ಪಂದ್ಯದ 72ನೇ ನಿಮಿಷದಲ್ಲಿ ರೋಜರ್‌ ಮಾರ್ಟಿನೆಜ್‌ ಅದ್ಭುತ ಗೋಲು ಹೊಡೆದು ಕೊಲಂಬಿಯಕ್ಕೆ ಮುನ್ನಡೆ ಒದಗಿಸಿದರು. ಪಂದ್ಯ ಮುಗಿಯಲು 3 ನಿಮಿಷವಿರುವಾಗ ಬದಲಿ ಆಟಗಾರ ದುವಾನ್‌ ಝಪಟ ಇನ್ನೊಂದು ಗೋಲು ಹೊಡೆದರು.

2 ದಶಕಗಳ ಬಳಿಕ ಜಯ
ಕೊಪಾ ಅಮೆರಿಕ ಕೂಟದಲ್ಲಿ ಕೊಲಂಬಿಯ 20 ವರ್ಷ ಬಳಿಕ ಆರ್ಜೆಂಟೀನಾ ವಿರುದ್ಧ ಮೊದಲ ಜಯ ದಾಖಲಿಸಿದೆ.

‘ನಾವು ಆರ್ಜೆಂಟೀನಾವನ್ನು ಮಣಿಸದೆ ದಶಕಗಳೇ ಉರುಳಿವೆ ಎಂಬುದು ತಿಳಿದಿದೆ. ಗೆಲುವಿನಿಂದ ರೋಮಾಂಚನವಾಗಿದೆ. ಆದರೆ ಕೊಪಾ ಅಮೆರಿಕ ಕೂಟ ಇನ್ನೂ ಮುಗಿ ದಿಲ್ಲ. ಸದ್ಯ ನಾವು ಈ ಗೆಲುವನ್ನು ಆನಂದಿಸಲಿದ್ದೇವೆ’ ಎಂಬುದು ಝಪಟ ಹೇಳಿಕೆ.

ಇದು ಕೊಲಂಬಿಯ ಪಾಲಿಗೆ ‘ಬಿ’ ಬಣದ ಅತ್ಯಂತ ಕಠಿನ ಪಂದ್ಯವಾಗಿತ್ತು. ಇನ್ನುಳಿದ ಪಂದ್ಯಗಳಲ್ಲಿ ಪರಗ್ವೆ ಮತ್ತು ಏಶ್ಯನ್‌ ಚಾಂಪಿಯನ್‌ ಕತಾರ್‌ ತಂಡವನ್ನು ಎದುರಿಸಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ