ನುಚ್ಚಿಮಣಿಯಂಡ, ಪುಚ್ಚಿಮಂಡಕ್ಕೆ ಮುನ್ನಡೆ


Team Udayavani, Apr 25, 2018, 6:00 AM IST

27.jpg

ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಇಲ್ಲಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ನುಚ್ಚಿಮಣಿಯಂಡ, ಪುಚ್ಚಿಮಂಡ, ಪಾಡೆಯಂಡ, ಪಟ್ರಪಂಡ, ಕುಂಡೊಳಂಡ, ಪಾಲೆ 
ಯಂಡ, ಮದ್ರಿರ, ನಾಗಂಡ, ಪೊರ್ಕೊವಂಡ, ಮುರುವಂಡ, ಕೀತಿಯಂಡ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶ
ಪಡೆದುಕೊಂಡಿವೆ.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಪಾಲೆಯಂಡ ತಂಡವು ಮೂವೇರ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು. ಪಾಲೇಯಂಡ ಪರ ಸುರಿ ಸುಬ್ಬಯ್ಯ, ರಾಬಿನ್‌ ದೇವಯ್ಯ ಒಂದೊಂದು ಗೋಲು
ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ನಂತರದ ಪಂದ್ಯದಲ್ಲಿ ಮದ್ರೀರ ತಂಡವು ಬಡ್ಡೀರ ತಂಡವನ್ನು 1-0 ಗೋಲುಗಳಿಂದ
ಮಣಿಸಿತು. ಮದ್ರೀರ ಪರ ಹರೀನ್‌ ಅಯ್ಯಪ್ಪ ಗೆಲುವಿನ ಗೋಲು ಗಳಿಸಿದರು. ಮೂರನೇ ಪಂದ್ಯವು ಪೋಕೂìವಂಡ ಮತ್ತು ಚಂದೂರ ತಂಡಗಳ ನಡುವೆ ನಡೆದು ಚಂದೂರ ತಂಡವು 3-0 ಗೋಲಿನಿಂದ ವಿಜಯ ಸಾಧಿಸಿತು. ಚಂದುರ ತಂಡದ ಪರ ಪ್ರಧಾನ್‌ ಪೂವಣ್ಣ ಹ್ಯಾಟ್ರಿಕ್‌ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಮುರುವಂಡ ತಂಡವು ಮುಂಡಚಾಡೀರ  ತಂಡವನ್ನು 5-0 ಗೋಲಿನಿಂದ ಮಣಿಸಿತು. ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಮುರುವಂಡ ತಂಡದ ಅಣ್ಣಯ್ಯ 3, ತನುಶ್‌ 1, ಶಶಾಂಕ್‌ 1 ಗೋಲು ಗಳಿಸಿ ಭರ್ಜರಿ ಗೆಲುವಿಗೆ ಕಾರಣರಾದರು. ಕೀತಿಯಂಡ ತಂಡವು ಮಂದೆಯಂಡ ತಂಡದ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿತು. ಕೀತಿಯಂಡ ಪರ ದೇವಯ್ಯ 1 ಗೋಲು ಹೊಡೆದರು. ನಾಗಂಡ ತಂಡವು ಚೇಮೆರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ನಾಗಂಡ ಪರ ರೋಶನ್‌ 2, ದಿವಿನ್‌ 1 ಗೋಲು ಬಾರಿಸಿದರು.

ಇನ್ನೊಂದು ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನುಚ್ಚಿಮಣಿಯಂಡ ತಂಡ ಕಂಬೇಯಂಡ ತಂಡಗಳ ನಡುವೆ ನಡೆದು ನಿಗದಿತ ಅವಧಿಯಲ್ಲಿ ಯಾವುದೇ ಗೋಲು ಬಾರದ ಕಾರಣ ಟೈಬ್ರೇಕರ್‌ ವ್ಯವಸ್ಥೆಯನ್ನು ಅಳವಡಿಸಲಾಯಿತು. ಇದರಲ್ಲಿ ನುಚ್ಚಿಮಣಿಯಂಡ ತಂಡವು 5-4 ಗೋಲಿನಿಂದ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಪುಚ್ಚಿಮಂಡ ತಂಡವು ಚಂಗೇಟಿರ ತಂಡವನ್ನು 1-0
ಗೋಲಿನಿಂದ ಮಣಿಸಿತು. ಕುತೂಹಲದಿಂದ ಕೂಡಿದ್ದ ಈ ಕದನದಲ್ಲಿ ಸುಬ್ಬಯ್ಯ  ನವರು ಗೋಲು ಹೊಡೆಯುವುದರ ಮೂಲಕ ಪುಚ್ಚಿಮಂಡಕ್ಕೆ ಜಯ ತಂದುಕೊಟ್ಟರು. ನಂತರದ ಪಂದ್ಯದಲ್ಲಿ ಪಾಡೇಯಂಡ ತಂಡವು ಮಂಡಂಗಡ ತಂಡವನ್ನು 4-1 ಗೋಲಿನಿಂದ
ಸೋಲಿಸಿತು. ಪಾಡೇಯಂಡ ತಂಡದ ಪರ ಸಂತೋಷ್‌ ಅಯ್ಯಪ್ಪ 2, ಮಂದಣ್ಣ 1, ವರುಣ್‌ 1 ಗೋಲು ಗಳಿಸಿದರೆ, ಮಂಡಂಗಡ ಪರ ವಿಕ್ಕಿ ಮಂದಣ್ಣ 1 ಗೋಲು ಬಾರಿಸಿದರು. ಐದನೇ ಪಂದ್ಯಾಟದಲ್ಲಿ ಪಟ್ರಪಂಡ ತಂಡವು ಅಪ್ಪಚಟ್ಟೋಳಂಡ ತಂಡವನ್ನು 2-1
ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಪಟ್ರಪಂಡ ಪರ ವಿತಾ ಗಣಪತಿ 2 ಗೋಲು ಬಾರಿಸಿದರೆ,
ಅಪ್ಪಚಟ್ಟೋಳಂಡ ಪರ ಯಾನ್‌ ಬೋಪಣ್ಣ 1 ಗೋಲು ಬಾರಿಸಿದರು. 

● ಎಸ್‌.ಕೆ ಲಕ್ಷ್ಮೀಶ

ಟಾಪ್ ನ್ಯೂಸ್

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.