24 ಪದಕ; ಭಾರತಕ್ಕೆ ಅಗ್ರಸ್ಥಾನ, ಚೀನ ದ್ವಿತೀಯ
Team Udayavani, Jul 21, 2019, 5:03 AM IST
ಹೊಸದಿಲ್ಲಿ: ಜರ್ಮನಿಯಲ್ಲಿ ನಡೆದ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಅಗ್ರಸ್ಥಾನದ ಗೌರವ ಸಂಪಾದಿಸಿದೆ. 10 ಚಿನ್ನ, 9 ಬೆಳ್ಳಿ, 5 ಕಂಚು ಸೇರಿದಂತೆ ಒಟ್ಟು 24 ಪದಕಗಳಿಗೆ ಗುರಿ ಇರಿಸಿ ಪರಾಕ್ರಮ ಮೆರೆದಿದೆ.
ಪುರುಷರ ರೈಫಲ್ ತ್ರೀ ಪೊದಿಶನ್ನಲ್ಲಿ ಪ್ರತಾಪ್ ಸಿಂಗ್ ತೋಮರ್ ಜೂನಿಯರ್ ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಗುರಿ ಇರಿಸಿದ್ದು ಭಾರತದ ಕೊನೆಯ ದಿನದ ಸಾಧನೆಯಾಗಿತ್ತು. ಹಾಲಿ ಯುತ್ ಒಲಿಂಪಿಕ್ ಚಾಂಪಿಯನ್ ರಶ್ಯದ ಗ್ರಿಗೊರಿಲ್ ಶಮಖೋವ್ ಸವಾಲನ್ನು ತೋಮರ್ ಮೆಟ್ಟಿನಿಂತರು.
ಕೊನೆಯ ಸ್ಪರ್ಧೆಯಾದ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಇಶಾ ಸಿಂಗ್-ಗೌರವ್ ರಾಣಾ ಕಂಚಿನ ಪದಕ ಗೆದ್ದರು.
ಈ ಕೂಟದಲ್ಲಿ ಚೀನ ದ್ವಿತೀಯ ಸ್ಥಾನಿಯಾಯಿತು. ಅದು 8 ಚಿನ್ನಗಳೊಂದಿಗೆ ಒಟ್ಟು 24 ಪದಕ ಜಯಿಸಿತು.