ಸೆಂಚುರಿಯನ್‌ ಟೆಸ್ಟ್‌: ಭಾರತಕ್ಕೆ ವಿರಾಟ್‌ ಆಧಾರ


Team Udayavani, Jan 15, 2018, 6:00 AM IST

AP1_14_2018_000179B.jpg

ಸೆಂಚುರಿಯನ್‌: ನಾಯಕ ವಿರಾಟ್‌ ಕೊಹ್ಲಿ ಅವರ ಏಕಾಂಗಿ ಬ್ಯಾಟಿಂಗ್‌ ಸಾಹಸದಿಂದ ಸೆಂಚುರಿಯನ್‌ ಟೆಸ್ಟ್‌ ಪಂದ್ಯದ ದ್ವಿತೀಯ ದಿನ ದಾಟದಲ್ಲಿ ಪ್ರವಾಸಿ ಭಾರತ ಸಾಮಾನ್ಯ ಮಟ್ಟದ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ. ದಕ್ಷಿಣ ಆಫ್ರಿಕಾದ 335ಕ್ಕೆ ಉತ್ತರವಾಗಿ 5 ವಿಕೆಟಿಗೆ 183 ರನ್‌ ಮಾಡಿದೆ. ಇನ್ನೂ 152 ರನ್‌ ಹಿನ್ನಡೆಯಲ್ಲಿದೆ.

ಜವಾಬ್ದಾರಿಯುತ ಆಟ ಆಡುತ್ತಿರುವ ವಿರಾಟ್‌ ಕೊಹ್ಲಿ 85 ರನ್‌ ಮಾಡಿ ಬ್ಯಾಟಿಂಗ್‌ ಕಾದಿರಿಸಿಕೊಂಡಿ ದ್ದಾರೆ. ಇವರೊಂದಿಗೆ 11 ರನ್‌ ಗಳಿಸಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇದ್ದಾರೆ. ಸೋಮವಾರದ ಮೊದಲ ಅವಧಿಯ ಆಟ ಭಾರತದ ಪಾಲಿಗೆ ನಿರ್ಣಾಯಕ.

ಕೊಹ್ಲಿ 124 ಎಸೆತ ನಿಭಾಯಿಸಿದ್ದು, 7 ಬೌಂಡರಿ ಹೊಡೆದಿದ್ದಾರೆ. ಕೊಹ್ಲಿ ಹೊರತುಪಡಿಸಿದರೆ 46 ರನ್‌ ಮಾಡಿದ ವಿಜಯ್‌ ಅವರದೇ ಹೆಚ್ಚಿನ ಗಳಿಕೆ.

ರಾಹುಲ್‌, ಪೂಜಾರ ವಿಫ‌ಲ
ಭಾರತದ ಆರಂಭ ಮತ್ತೂಮ್ಮೆ ನಿರೀಕ್ಷಿತ ಮಟ್ಟ ಮುಟ್ಟುವಲ್ಲಿ ಎಡವಿತು. ಶಿಖರ್‌ ಧವನ್‌ ಬದಲು ಆಡಲಿಳಿದ ಕೆ.ಎಲ್‌. ರಾಹುಲ್‌ ಈ ಅವಕಾಶ ಬಳಸಿಕೊಳ್ಳುವಲ್ಲಿ ವಿಫ‌ಲರಾದರು. ಕೇವಲ 10 ರನ್‌ ಮಾಡಿ ಮಾರ್ಕೆಲ್‌ಗೆ ರಿಟರ್ನ್ ಕ್ಯಾಚ್‌ ನೀಡಿದರು. “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಮರು ಎಸೆತದಲ್ಲೇ ರನೌಟ್‌ ದೌರ್ಭಾಗ್ಯಕ್ಕೆ ಸಿಲುಕಿದರು. ಅಲ್ಲಿಗೆ 28 ರನ್ನಿಗೆ ಭಾರತದ 2 ವಿಕೆಟ್‌ ಹಾರಿ ಹೋಯಿತು.

3ನೇ ವಿಕೆಟಿಗೆ ಜತೆಗೂಡಿದ ಮುರಳಿ ವಿಜಯ್‌-ವಿರಾಟ್‌ ಕೊಹ್ಲಿ 72 ರನ್‌ ಜತೆಯಾಟದ ಮೂಲಕ ತಂಡದ ರಕ್ಷಣೆಗೆ ನಿಂತರು. ವಿಜಯ್‌ ಅತ್ಯಂತ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದರು. 46 ರನ್ನಿಗೆ ಅವರು 126 ಎಸೆತ ಎದುರಿಸಿದರು. ಇದರಲ್ಲಿ 6 ಬೌಂಡರಿ ಸೇರಿತ್ತು.

ವಿರಾಟ್‌ ಕೊಹ್ಲಿ ತುಸು ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದರು. 68 ಎಸೆತಗಳಲ್ಲಿ ಅವರ ಅರ್ಧ ಶತಕ ಪೂರ್ತಿಗೊಂಡಿತು. ಆದರೆ ರೋಹಿತ್‌ ಶರ್ಮ ಅವರಿಂದ ಕಪ್ತಾನನಿಗೆ ಯಾವುದೇ ಬೆಂಬಲ ಸಿಗಲಿಲ್ಲ. ರೋಹಿತ್‌ ಕೇವಲ 10 ರನ್‌ ಮಾಡಿ ಪೆವಿಲಿಯನ್‌ ಸೇರಿಕೊಂಡರು.

ಆಫ್ರಿಕಾ 335 ಆಲೌಟ್‌
6ಕ್ಕೆ 269 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ದಕ್ಷಿಣ ಆಫ್ರಿಕಾ, ಕಪ್ತಾನ ಡು ಪ್ಲೆಸಿಸ್‌ ಅವರ ಅರ್ಧ ಶತಕದ ನೆರವಿನಿಂದ 335ರ ತನಕ ಬೆಳೆಯಿತು. 24 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಡು ಪ್ಲೆಸಿಸ್‌ 63ರ ತನಕ ಬೆಳೆದರು. ಇವರ ವಿಕೆಟನ್ನು ಬೇಗ ಹಾರಿಸಿ ಆಫ್ರಿಕಾವನ್ನು ಮುನ್ನೂರರೊಳಗೆ ಹಿಡಿದು ನಿಲ್ಲಿಸುವ ಭಾರತದ ಯೋಜನೆ ಫ‌ಲಿಸಲಿಲ್ಲ. ಡು ಪ್ಲೆಸಿಸ್‌ 9ನೇ ವಿಕೆಟ್‌ ರೂಪದಲ್ಲಿ ಇಶಾಂತ್‌ಗೆ ಬೌಲ್ಡ್‌ ಆಗಿ ವಾಪಸಾಗುವಾಗ ಆಫ್ರಿಕಾ 333 ರನ್‌ ಮಾಡಿತ್ತು. 142 ಎಸೆತಗಳಿಗೆ ಜವಾಬಿತ್ತ ಹರಿಣಗಳ ನಾಯಕ, ಒಟ್ಟು 9 ಬೌಂಡರಿ ಹೊಡೆದರು.

ಡು ಪ್ಲೆಸಿಸ್‌-ಕೇಶವ್‌ ಮಹಾರಾಜ್‌ ಜೋಡಿಯನ್ನು ಶಮಿ ಬೇರ್ಪಡಿಸಿದರು. ಮಹಾರಾಜ್‌ ಗಳಿಕೆ 18 ರನ್‌. ಬಳಿಕ ರಬಾಡ (11) ಅವರನ್ನು ಕೂಡಿಕೊಂಡ ಡು ಪ್ಲೆಸಿಸ್‌ 8ನೇ ವಿಕೆಟಿಗೆ 42 ರನ್‌ ಸೇರಿಸಿದರು. 6 ರನ್‌ ಮಾಡಿದ ಮಾರ್ಕೆಲ್‌ ವಿಕೆಟ್‌ ಕಿತ್ತ ಅಶ್ವಿ‌ನ್‌ ಆಫ್ರಿಕಾ ಇನ್ನಿಂಗ್ಸಿಗೆ ತೆರೆ ಎಳೆದರು. ಅಶ್ವಿ‌ನ್‌ 113ಕ್ಕೆ 4 ವಿಕೆಟ್‌ ಕಿತ್ತು ಭಾರತದ ಅತ್ಯಂತ ಯಶಸ್ವಿ ಬೌಲರ್‌ ಎನಿಸಿದರು. ಇಶಾಂತ್‌ ಶರ್ಮ ಬುಟ್ಟಿಗೆ 3 ವಿಕೆಟ್‌ ಬಿತ್ತು.

ಶಮಿ ವಿಕೆಟ್‌ ಶತಕ
ರವಿವಾರದ ಆಟದಲ್ಲಿ ಮೊಹಮ್ಮದ್‌ ಶಮಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಸಾಧನೆ ಮಾಡಿದರು. ಮಹಾರಾಜ್‌ ಅವರನ್ನು ಔಟ್‌ ಮಾಡುವ ಮೂಲಕ ಶಮಿ ಈ ಹಿರಿಮೆಗೆ ಪಾತ್ರರಾದರು. ಶಮಿ “ವಿಕೆಟ್‌ ಶತಕ’ ಸಾಧನೆಗೈದ ಭಾರತದ 7ನೇ ವೇಗಿ. ಕಪಿಲ್‌, ಜಹೀರ್‌, ಜೆ. ಶ್ರೀನಾಥ್‌, ಇಶಾಂತ್‌, ಕರ್ಶನ್‌ ಘಾವ್ರಿ, ಇರ್ಫಾನ್‌ ಪಠಾಣ್‌ ಅವರೆಲ್ಲ ಭಾರತದ ಉಳಿದ ಸಾಧಕರು.

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌
(ಮೊದಲ ದಿನ: 6 ವಿಕೆಟಿಗೆ 269)
ಫಾ ಡು ಪ್ಲೆಸಿಸ್‌    ಬಿ ಇಶಾಂತ್‌    63
ಕೇಶವ್‌ ಮಹಾರಾಜ್‌    ಸಿ ಪಟೇಲ್‌ ಬಿ ಶಮಿ    18
ಕಾಗಿಸೊ ರಬಾಡ    ಸಿ ಪಾಂಡ್ಯ ಬಿ ಇಶಾಂತ್‌    11
ಮಾರ್ನೆ ಮಾರ್ಕೆಲ್‌    ಸಿ ವಿಜಯ್‌ ಬಿ ಅಶ್ವಿ‌ನ್‌    6
ಲುಂಗಿಸಾನಿ ಎನ್‌ಗಿಡಿ    ಔಟಾಗದೆ    1
ಇತರ         9
ಒಟ್ಟು  (ಆಲೌಟ್‌)        335
ವಿಕೆಟ್‌ ಪತನ: 7-282, 8-324, 9-333.
ಬೌಲಿಂಗ್‌:
ಜಸ್‌ಪ್ರೀತ್‌ ಬುಮ್ರಾ        22-6-60-0
ಮೊಹಮ್ಮದ್‌ ಶಮಿ        15-2-58-1
ಇಶಾಂತ್‌ ಶರ್ಮ        22-4-46-3
ಹಾರ್ದಿಕ್‌ ಪಾಂಡ್ಯ        16-4-50-0
ಆರ್‌. ಅಶ್ವಿ‌ನ್‌        38.5-10-113-4
ಭಾರತ ಪ್ರಥಮ ಇನ್ನಿಂಗ್ಸ್‌
ಮುರಳಿ ವಿಜಯ್‌    ಸಿ ಡಿಕಾಕ್‌ ಬಿ ಮಹಾರಾಜ್‌    46 ಕೆ.ಎಲ್‌. ರಾಹುಲ್‌    ಸಿ ಮತ್ತು ಬಿ ಮಾರ್ಕೆಲ್‌    10
ಚೇತೇಶ್ವರ್‌ ಪೂಜಾರ    ರನೌಟ್‌    0
ವಿರಾಟ್‌ ಕೊಹ್ಲಿ    ಬ್ಯಾಟಿಂಗ್‌    85
ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ರಬಾಡ    10
ಪಾರ್ಥಿವ್‌ ಪಟೇಲ್‌    ಸಿ ಡಿಕಾಕ್‌ ಬಿ ಎನ್‌ಗಿಡಿ    19
ಹಾರ್ದಿಕ್‌ ಪಾಂಡ್ಯ    ಬ್ಯಾಟಿಂಗ್‌    11
ಇತರ        2
ಒಟ್ಟು  (5 ವಿಕೆಟಿಗೆ)        183
ವಿಕೆಟ್‌ ಪತನ: 1-28, 2-28, 3-107, 4-132, 5-164.
ಬೌಲಿಂಗ್‌:
ಕೇಶವ್‌ ಮಹಾರಾಜ್‌        16-1-53-1
ಮಾರ್ನೆ ಮಾರ್ಕೆಲ್‌        15-3-47-1
ವೆರ್ನನ್‌ ಫಿಲಾಂಡರ್‌        9-3-23-0
ಕಾಗಿಸೊ ರಬಾಡ        12-0-33-1
ಲುಂಗಿ ಎನ್‌ಗಿಡಿ        9-2-26-1

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.