3 ಪಂದ್ಯ ರದ್ದು: ವಿಶ್ವಕಪ್‌ ದಾಖಲೆ!

Team Udayavani, Jun 12, 2019, 5:00 AM IST

ಬ್ರಿಸ್ಟಲ್: ವಿಶ್ವಕಪ್‌ಗೆ ವಕ್ಕರಿಸಿರುವ ಮಳೆಯಿಂ ದಾಗಿ ಸತತ 2ನೇ ದಿನವೂ ಪಂದ್ಯ ರದ್ದಾಗಿದೆ. ಮಂಗಳವಾರ ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಕೊನೆಗೊಂಡಿತು. ಎರಡೂ ತಂಡಗಳಿಗೆ ಅಂಕವನ್ನು ಹಂಚಲಾಯಿತು.

ಇದರೊಂದಿಗೆ ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ 3 ಪಂದ್ಯಗಳು ರದ್ದುಗೊಂಡ ದಾಖಲೆ ನಿರ್ಮಾಣವಾಯಿತು. 1992 ಮತ್ತು 2003ರಲ್ಲಿ ತಲಾ 2 ಪಂದ್ಯಗಳು ಮಳೆಯಿಂದ ರದ್ದುಗೊಂಡು ಶ್ರೀಲಂಕಾ ಸತತ 2 ಪಂದ್ಯಗಳಲ್ಲಿ ಅಂಕವನ್ನು ಹಂಚಿಕೊಳ್ಳಬೇಕಾಯಿತು. ಇದಕ್ಕೂ ಮೊದಲು ಪಾಕಿಸ್ಥಾನ ವಿರುದ್ಧದ ಶುಕ್ರವಾರದ ಪಂದ್ಯದಲ್ಲೂ ಮಳೆ ಆಟವಾಡಿತ್ತು. ಈ ಪಂದ್ಯವನ್ನೂ ಬ್ರಿಸ್ಟಲ್ನಲ್ಲೇ ಆಯೋಜಿಸಲಾಗಿತ್ತು.

ಸೋಮವಾರದ ದ. ಆಫ್ರಿಕಾ-ವಿಂಡೀಸ್‌ ನಡುವಿನ ಸೌತಾಂಪ್ಟನ್‌ ಪಂದ್ಯವೂ ಮಳೆಗೆ ಬಲಿಯಾಗಿತ್ತು. ಇದರೊಂದಿಗೆ ಪ್ರಸಕ್ತ ವಿಶ್ವಕಪ್‌ ಕೂಟದಲ್ಲಿ ಒಟ್ಟು 3 ಪಂದ್ಯಗಳು ಮಳೆಯಿಂದ ರದ್ದುಗೊಂಡಂತಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ