ಹ್ಯಾರಿಸ್‌ ಶೀಲ್ಡ್‌ ಕ್ರಿಕೆಟ್‌:ತಂಡದ ಎಲ್ಲರೂ ಸೊನ್ನೆಗೆ ಔಟ್‌!

Team Udayavani, Nov 22, 2019, 12:07 AM IST

ಮುಂಬಯಿ: ಬಹಳ ವರ್ಷಗಳ ಹಿಂದೆ ಸಚಿನ್‌ ತೆಂಡುಲ್ಕರ್‌ ಅವರಂತಹ ಖ್ಯಾತನಾಮರು ಆಡಿದ್ದ ಮುಂಬಯಿಯ ಪ್ರತಿಷ್ಠಿತ “ಹ್ಯಾರಿಸ್‌ ಶೀಲ್ಡ್‌’ ಶಾಲಾ ಕ್ರಿಕೆಟ್‌ ಪಂದ್ಯವೊಂದರಲ್ಲಿ ತಂಡವೊಂದು ಕೇವಲ 7 ರನ್ನಿಗೆ ಆಲೌಟಾಗಿದೆ. ಆಟಗಾರೆಲ್ಲ ಸೊನ್ನೆ ಸುತ್ತಿದ್ದು, ಆ 7 ರನ್‌ ಎಕ್ಸ್‌ಟ್ರಾ ರೂಪದಲ್ಲಿ ಬಂದಿತ್ತು!

ಶೂನ್ಯ ಸುತ್ತಿದ ತಂಡದ ಹೆಸರು ಚಿಲ್ಡ್ರನ್‌ ವೆಲ್‌ಫೇರ್‌, ಅಂಧೇರಿ. ಈ ತಂಡವು ಎದುರಾಳಿ, ಬೊರಿವಿಲಿಯ ಸ್ವಾಮಿ ವಿವೇಕಾನಂದ ಅಂತಾರಾಷ್ಟ್ರೀಯ ಶಾಲಾ ತಂಡದ ವಿರುದ್ಧ ಹೀನಾಯ ಸೋಲುಂಡಿತು. ಚಿಲ್ಡ್ರನ್‌ ವೆಲ್‌ಫೆರ್‌ ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳೂ ಸೊನ್ನೆಗೆ ಔಟ್‌ ಆದರು. ಇತರೆ ರನ್‌ ರೂಪದಲ್ಲಿ ಬಂದ 7 ರನ್ನೇ ತಂಡದ ಗಳಿಕೆ ಆಗಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಸ್ವಾಮಿ ವಿವೇಕಾನಂದ ಶಾಲಾ ತಂಡ 45 ಓವರ್‌ಗಳಲ್ಲಿ 4 ವಿಕೆಟಿಗೆ 761 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಮೀಟ್‌ ಮೇಯ್ಕರ್‌ 338 ರನ್‌ (134 ಎಸೆತ, 7 ಸಿಕ್ಸರ್‌, 56 ಬೌಂಡರಿ) ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಚಿಲ್ಡ್ರನ್‌ ವೆಲ್‌ಫೇರ್‌ ತಂಡ ಭಾರೀ ಮುಖಭಂಗ ಅನುಭವಿಸಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ