ಆಸೀಸ್‌ ಕ್ರಿಕೆಟಿಗ ಟೋನಿ ನಿಧನ

Team Udayavani, Nov 15, 2019, 10:48 PM IST

ಪರ್ತ್‌: ಕ್ಯಾನ್ಸರ್‌ನಿಂದ ನರಳುತ್ತಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ, ಲೆಗ್‌ ಸ್ಪಿನ್ನಿಂಗ್‌ ಆಲ್‌ರೌಂಡರ್‌ ಟೋನಿ ಮಾನ್‌ (74) ಶುಕ್ರವಾರ ಪರ್ತ್‌ನಲ್ಲಿ ನಿಧನ ಹೊಂದಿದರು.

1977-78ರ ಅವಧಿಯಲ್ಲಿ ಆಸ್ಟ್ರೇಲಿಯ ಪರ 4 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಟೋನಿ 189 ರನ್‌ ಜತೆಗೆ 4 ವಿಕೆಟ್‌ ಉರುಳಿಸಿ ದ್ದರು. ಇದರಲ್ಲಿ ಒಂದು ಶತಕವೂ ಸೇರಿದೆ (105). ಇದನ್ನವರು ಪ್ರವಾಸಿ ಭಾರತದೆದುರಿನ 1977-78ರ ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ನೈಟ್‌ ವಾಚ್‌ಮನ್‌ ಆಗಿ ಕ್ರೀಸಿಗಿಳಿದು ಬಾರಿಸಿದ್ದರು. ಆ ಕಾಲದಲ್ಲಿ ಈ ಸಾಧನೆಗೈದ ಕೇವಲ 2ನೇ ಕ್ರಿಕೆಟಿಗನಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ