Udayavni Special

ಭಾರತದ ಮಿಕ್ಸೆಡ್‌ ರಿಲೇ ತಂಡಕ್ಕೆ 7ನೇ ಸ್ಥಾನ

Team Udayavani, Oct 1, 2019, 5:24 AM IST

mixed-rellay

ದೋಹಾ: ವಿಶ್ವ ಆ್ಯತ್ಲೆಟಿಕ್ಸ್‌ 4ಗಿ400 ಮೀ. ಮಿಕ್ಸೆಡ್‌ ರಿಲೇ ಫೈನಲ್‌ ಸ್ಪರ್ಧೆಯಲ್ಲಿ ಭಾರತ ತಂಡ 7ನೇ ಸ್ಥಾನಕ್ಕೆ ಸಮಾಧಾನಪಟ್ಟಿದೆ.

ಮುಹಮ್ಮದ್‌ ಅನಾಸ್‌, ವಿ.ಕೆ. ವಿಸ್ಮಯಾ, ಜಿಸ್ನಾ ಮ್ಯಾಥ್ಯೂ ಮತ್ತು ಟಾಮ್‌ ನಿರ್ಮಲ್‌ ನೋಹ್‌ ಅವರನ್ನೊಳಗೊಂಡ ಭಾರತ ತಂಡ 3 ನಿಮಿಷ, 15.77 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು. ಫೈನಲ್‌ನಲ್ಲಿ ವಿಶ್ವದ 8 ತಂಡಗಳು ಭಾಗವಹಿಸಿದ್ದವು. ಬ್ರಝಿಲ್‌ಗಿಂತ ಮೇಲಿನ ಸ್ಥಾನ ಭಾರತದ್ದಾಯಿತು.

ಕಳೆದ ವರ್ಷ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿತ್ತು. ಅಂದು ಈ ದೂರವನ್ನು 3 ನಿಮಿಷ, 15.71 ಸೆಕೆಂಡ್‌ಗಳಲ್ಲಿ ಕ್ರಮಿಸಲಾಗಿತ್ತು.

ಅಮೆರಿಕಕ್ಕೆ ಚಿನ್ನ
ದೋಹಾ ಫೈನಲ್‌ನಲ್ಲಿ ಅಮೆರಿಕ 3 ನಿಮಿಷ, 09.34 ಸೆಕೆಂಡ್‌ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದಿತು. ಜಮೈಕಾ ಬೆಳ್ಳಿ (3:11.78), ಬಹ್ರೈನ್‌ ಕಂಚಿನ ಪದಕ ಜಯಿಸಿತು (3:11.82). ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಿಶ್ರ ರಿಲೇ ಸ್ಪರ್ಧೆಯನ್ನು ಅಳವಡಿಸಲಾಗಿತ್ತು.

ಭಾರತ ತಂಡ ಹೀಟ್ಸ್‌ನಲ್ಲಿ 3ನೇ, ಒಟ್ಟಾರೆಯಾಗಿ 7ನೇ ಸ್ಥಾನದೊಂದಿಗೆ ಫೈನಲ್‌ ಅರ್ಹತೆ ಸಂಪಾದಿಸಿತ್ತು. ಈ ಸಾಧನೆಗಾಗಿ ಟೋಕಿಯೊ ಒಲಿಂಪಿಕ್‌ ಅರ್ಹತೆಯೂ ಲಭಿಸಿತು.

ಬೋಲ್ಟ್ ದಾಖಲೆ ಮುರಿದ ಅಲಿಸನ್‌ ಫೆಲಿಕ್ಸ್‌
ವಿಶ್ವ ಆ್ಯತ್ಲೆಟಿಕ್‌ ಚಾಂಪಿ ಯನ್‌ಶಿಪ್‌ನಲ್ಲಿ ಅತೀ ಹೆಚ್ಚು ಚಿನ್ನ ಗೆದ್ದ ದಾಖಲೆಯೀಗ ಅಮೆರಿಕದ ಓಟಗಾರ್ತಿ ಅಲಿಸನ್‌ ಫೆಲಿಕ್ಸ್‌ ಪಾಲಾಗಿದೆ. ವಿಶ್ವಶ್ರೇಷ್ಠ ಓಟಗಾರ ಉಸೇನ್‌ ಬೋಲ್ಟ… ದಾಖಲೆ ಪತನಗೊಂಡಿದೆ. ರವಿವಾರ ರಾತ್ರಿ ನಡೆದ ಮಿಶ್ರ ವಿಭಾಗದ 4ಗಿ400 ರಿಲೇ ಓಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಲಿಸನ್‌ ಈ ದಾಖಲೆಯನ್ನು ತಮ್ಮದಾಗಿ ಸಿಕೊಂಡರು.
ಇದು ಅಲಿಸನ್‌ ಫೆಲಿಕ್ಸ್‌ ಗೆದ್ದ 12ನೇ ವಿಶ್ವ ಚಾಂಪಿಯನ್‌ ಚಿನ್ನ. ಉಸೇನ್‌ ಬೋಲ್ಟ್ 11 ಬಂಗಾರ ಜಯಿಸಿದ್ದರು.

33 ವರ್ಷದ ಫೆಲಿಕ್ಸ್‌ 5 ವಿಶ್ವ ಆ್ಯತ್ಲೆಟಿಕ್ಸ್‌ ಕೂಟಗಳಲ್ಲಿ ಸ್ಪರ್ಧಿಸಿ 200 ಮೀ., 400 ಮೀ., 4ಗಿ100 ಮೀ., 4ಗಿ400 ಮೀ. ಮತ್ತು 4ಗಿ400 ಮೀ. ಮಿಕ್ಸೆಡ್‌ ರಿಲೇ ವಿಭಾಗದಲ್ಲಿ ಒಟ್ಟು 12 ಚಿನ್ನದ ಪದಕ ಜಯಿಸಿದ್ದಾರೆ.

ದೋಹಾದಲ್ಲಿ “ಅಮ್ಮಂದಿರ ದಿನ’!
ಅಲಿಸನ್‌ ಫೆಲಿಕ್ಸ್‌ ಸಾಧನೆಯೊಂದಿಗೆ ದೋಹಾ ಆ್ಯತ್ಲೆಟಿಕ್ಸ್‌ ಕೂಟ ರವಿವಾರ “ಅಮ್ಮಂದಿರ ದಿನ’ವಾಗಿ ಮಾರ್ಪಟ್ಟಿತು. ವಿಶ್ವದಾಖಲೆಗೈದ ಫೆಲಿಕ್ಸ್‌ ಅಮ್ಮನಾದ ಬಳಿಕ ಇದೇ ಮೊದಲ ಸಲ ಬಂಗಾರಕ್ಕೆ ಮುತ್ತಿಟ್ಟಿದ್ದರು. ಇದಕ್ಕೂ ಸ್ವಲ್ಪ ಮೊದಲು 100 ಮೀ. ಓಟದಲ್ಲಿ 4ನೇ ವಿಶ್ವ ಕಿರೀಟ ಏರಿಸಿಕೊಂಡಿದ್ದ ಜಮೈಕಾದ ಶೆಲ್ಲಿ ಆ್ಯನ್‌ ಫ್ರೆàಸರ್‌ ಪ್ರೈಸ್‌ ಕೂಡ ಅಮ್ಮನೇ ಆಗಿದ್ದರು. ಅವರು ತಮ್ಮ 2 ವರ್ಷದ ಮಗ ಜಿಯಾನ್‌ ಜತೆ ಟ್ರ್ಯಾಕ್‌ನಲ್ಲೇ ಸಂಭ್ರಮ ಆಚರಿಸಿದರು!

ಟಾಪ್ ನ್ಯೂಸ್

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ

ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ

Shubha Punja

ಬಿಗ್ ಬಾಸ್ ಮನೆಗೆ ನಟಿ ಶುಭಾ ಪೂಂಜಾ ಜತೆ ಎಂಟ್ರಿ ಕೊಟ್ರು ಕನ್ನಡದ ನಟ…ಯಾರವರು ?

Bajarangi 2 features song on Dhanvantari gods, says Dr V Nagendra Prasad

ಧನ್ವಂತರಿ ದೇವರ ಹಾಡು ‘ಭಜರಂಗಿ 2’ ಸಿನಿಮಾದಲ್ಲಿ ವಿಶೇಷ : ನಾಗೇಂದ್ರ ಪ್ರಸಾದ್

hhhds

100 ರೂ.ಗೆ ಲೀಟರ್ ಹಾಲು ಮಾರಲು ನಿರ್ಧಾರ…ಕೃಷಿ ಕಾಯ್ದೆ ವಿರುದ್ಧ ಸಮರ ಸಾರಿದ ರೈತರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

ಭಾರತ- ಇಂಗ್ಲೆಂಡ್‌ ನಡುವಿನ ಅಂತಿಮ ಪಂದ್ಯಕ್ಕೆ ಬ್ಯಾಟಿಂಗ್‌ ಬ್ಯೂಟಿ ಟ್ರ್ಯಾಕ್‌

ಭಾರತ- ಇಂಗ್ಲೆಂಡ್‌ ನಡುವಿನ ಅಂತಿಮ ಪಂದ್ಯಕ್ಕೆ ಬ್ಯಾಟಿಂಗ್‌ ಬ್ಯೂಟಿ ಟ್ರ್ಯಾಕ್‌

ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಕಂಚು

ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಕಂಚು

\172.17.1.5ImageDirUdayavaniDaily28-02-21Daily_NewsBUMRAH

ಕೊನೆಯ ಪಂದ್ಯಕ್ಕೆ ಬುಮ್ರಾ ಇಲ್ಲ : ವೈಯಕ್ತಿಕ ಕಾರಣ, ತಂಡದಿಂದ ಬಿಡುಗಡೆ

8 ವರ್ಷಗಳ ಬಳಿಕ ವೆಸ್ಟ್ ಇಂಡೀಸ್‌ ತಂಡಕ್ಕೆ ಮರಳಿದ ಎಡ್ವರ್ಡ್ಸ್‌

8 ವರ್ಷಗಳ ಬಳಿಕ ವೆಸ್ಟ್ ಇಂಡೀಸ್‌ ತಂಡಕ್ಕೆ ಮರಳಿದ ಎಡ್ವರ್ಡ್ಸ್‌

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

Alemari Jananga 06

ಅಲೆಮಾರಿ ಜನಾಂಗದ ಬದುಕಿನ ಯಾತನೆ

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

Manasi Joshi

ಮಹಾ ಸಾಧಕಿ ಮಾನಸಿ ಜೋಶಿ; ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಅಡ್ಡಿಯಾಗಲಿಲ್ಲ

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.