ಎಂಟೇ ತಂಡಗಳ ವಿಶ್ವಕಪ್‌: ಜೋನ್ಸ್‌

Team Udayavani, May 16, 2019, 6:02 AM IST

ಮೆಲ್ಬರ್ನ್: ಈ ವಿಶ್ವಕಪ್‌ ಅವಧಿ ದೀರ್ಘ‌ವಾಯಿತು, ಹತ್ತರ ಬದಲು ಎಂಟೇ ತಂಡಗಳನ್ನು ಆಡಿಸುವ ಬಗ್ಗೆ ಐಸಿಸಿ ಯೋಚಿಸಬೇಕು ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಡೀನ್‌ ಜೋನ್ಸ್‌ ಹೇಳಿದ್ದಾರೆ.

‘ಇದು ಸಿಕ್ಕಾಪಟ್ಟೆ ದೊಡ್ಡ ಕೂಟವಾಗಿದೆ. 50 ದಿನಗಳ ಕಾಲ ಸಾಗುವುದರಿಂದ ಜನರು ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. 32 ತಂಡಗಳ ಫಿಫಾ ವಿಶ್ವಕಪ್‌ ಕೂಡ ಒಂದು ತಿಂಗಳೊಳಗೆ ಮುಗಿಯುತ್ತದೆ. ಹೀಗಾಗಿ ವಿಶ್ವಕಪ್‌ನಲ್ಲಿ ಎಂಟೇ ತಂಡಗಳನ್ನು ಆಡಿಸುವುದು ಒಳ್ಳೆಯದು’ ಎಂದು ಆಸ್ಟ್ರೇಲಿಯದ ಪ್ರಥಮ ವಿಶ್ವಕಪ್‌ ವಿಜೇತ ತಂಡದ ಸದಸ್ಯನೂ ಆಗಿರುವ ಜೋನ್ಸ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ