ನೂತನ ಸ್ಟೇಡಿಯಂನಲ್ಲಿ ಏಶ್ಯ-ವಿಶ್ವ ಇಲೆವೆನ್‌ ನಡುವೆ ಪಂದ್ಯ

Team Udayavani, Dec 3, 2019, 12:08 AM IST

ಮುಂಬಯಿ: ವಿಶ್ವದಲ್ಲೇ ಅತೀ ದೊಡ್ಡದಾದ ಅಹ್ಮದಾ ಬಾದ್‌ನ ನವೀಕೃತ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಲೋಕಾರ್ಪಣೆಗೆ ಸಜ್ಜಾಗಿದೆ. ಮುಂದಿನ ಮಾರ್ಚ್‌ ವೇಳೆ ಇದು ಕ್ರಿಕೆಟ್‌ ವಿಶ್ವಕ್ಕೆ ತೆರೆದುಕೊಳ್ಳಲಿದೆ.

ಈ ಸ್ಟೇಡಿಯಂನ ಉದ್ಘಾಟನೆಯ ವೇಳೆ ಏಶ್ಯ ಇಲೆವೆನ್‌ ಮತ್ತು ವಿಶ್ವ ಇಲೆವೆನ್‌ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಏರ್ಪಡಿಸುವ ಯೋಜನೆಯೊಂದು ಬಿಸಿಸಿಐ ಮುಂದಿದೆ. ಇದಕ್ಕೆ ಐಸಿಸಿಯ ಅನುಮತಿಯನ್ನು ಕಾಯಲಾಗುತ್ತಿದೆ ಎಂಬುದಾಗಿ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಒಂದು ಲಕ್ಷದ ಹತ್ತು ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ, ಆಸ್ಟ್ರೇಲಿಯದ “ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ನ ಸಾಮರ್ಥ್ಯವನ್ನೂ ಮೀರಿಸಲಿದೆ. ಅಹ್ಮದಾಬಾದ್‌ನ ಮೊಟೆರಾದಲ್ಲಿರುವ ಈ ಸ್ಟೇಡಿಯಂನ ಹಿಂದಿನ ಸಾಮರ್ಥ್ಯ 54 ಸಾವಿರದಷ್ಟಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ