ವೆಂಕಿ ಬದಲಿಗೆ ಭಾರತ ಕಿರಿಯರ ಆಯ್ಕೆ ಸಮಿತಿಗೆ ಕಪೂರ್ ಆಯ್ಕೆ
Team Udayavani, Apr 4, 2018, 7:00 AM IST
ಮುಂಬಯಿ: ಮೂವರು ಸದಸ್ಯರನ್ನೊಳಗೊಂಡ ಭಾರತ ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟಿಗ ಆಶಿಶ್ ಕಪೂರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಐಪಿಎಲ್ನ ಪ್ರಮುಖ ತಂಡವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದರು. ಹೀಗಾಗಿ ಇವರ ಸ್ಥಾನ ತೆರವಾಗಿತ್ತು. ಕಪೂರ್ ಭಾರತದ ಪರ 4 ಟೆಸ್ಟ್, 17 ಏಕದಿನ, 128 ಪ್ರಥಮ ದರ್ಜೆ ಹಾಗೂ 93 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. 1996ರಲ್ಲಿ ಇವರು ವಿಶ್ವಕಪ್ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದರು ಎನ್ನುವುದು ವಿಶೇಷ.