ಲಂಕಾ ‘ಎ’ ವಿರುದ್ಧ ಟೆಸ್ಟ್ ಸರಣಿ: ಅಭಿಮನ್ಯು ಈಶ್ವರನ್ ದ್ವಿಶತಕ
Team Udayavani, May 26, 2019, 3:30 PM IST
ಬೆಳಗಾವಿ: ಪ್ರವಾಸಿ ಶ್ರೀ ಲಂಕಾ ‘ಎ ‘ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 622 ರನ್ ಗಳಿಗೆ ಡಿಕ್ಲೈರ್ ಮಾಡಿಕೊಂಡಿದೆ.
ಇಲ್ಲಿನ ಆಟೋ ನಗರದ ಕೆಎಸ್ಸಿಎ ಮೈದಾನದಲ್ಲಿ ಆತಿಥೇಯ ತಂಡ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ದ್ವಿಶತಕ ಬಾರಿಸಿ ಮಿಂಚಿದರು. 233 ರನ್ ಗಳಿಸಿದ ಅಭಿಮನ್ಯು ಈಶ್ವರನ್ ಧನಂಜಯಗೆ ವಿಕೆಟ್ ಒಪ್ಪಿಸಿದರು.
ಅನಮೋಲ್ ಪ್ರೀತ್ ಸಿಂಗ್ ಅಜೇಯ ಶತಕ (116) ಭಾರತ ತಂಡದ ರನ್ ಹೆಚ್ಚಳಕ್ಕೆ ಸಹಕಾರಿಯಾಯಿತು. ಸಿದ್ದೇಶ್ ಲಾಡ್ ಅರ್ಧಶತಕ ಗಳಿಸಿ ಮಿಂಚಿದರು.
ನಿನ್ನೆಯ ದಿನದಾಟದ ಅಂತ್ಯಕ್ಕೆ ಭಾರತ ಎ ತಂಡ ಒಂದು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತ್ತು.