ಟಿ20 ವಿಶ್ವಕಪ್: ಒಂದೇ ಒಂದು ಜಯದಿಂದ ಭಾರತ,ಪಾಕ್, ಕಿವೀಸ್ ಗೆ ಎಚ್ಚರಿಕೆ ರವಾನಿಸಿದ ಅಫ್ಘಾನ್!


Team Udayavani, Oct 26, 2021, 12:36 PM IST

ಟಿ20 ವಿಶ್ವಕಪ್: ಒಂದೇ ಜಯದಿಂದ ಭಾರತ, ಪಾಕ್, ಕಿವೀಸ್ ಗೆ ಎಚ್ಚರಿಕೆ ರವಾನಿಸಿದ ಅಫ್ಘಾನ್!

ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ ನ ಸೋಮವಾರದ ಪಂದ್ಯದಲ್ಲಿ ಅಫ್ಗಾನಿಸ್ಥಾನ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನಬಿ ಹುಡುಗರು 130 ರನ್ ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ‘ಬಿ’ ಗ್ರೂಪ್ ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ನೆಗೆದಿದೆ.

ಮೊದಲು ಬ್ಯಾಟ್‌ ಮಾಡಿದ್ದ ಆಫ್ಘನ್ನರು 4 ವಿಕೆಟಿಗೆ 190 ರನ್‌ ಪೇರಿಸಿ, ಸ್ಕಾಟ್‌ ಲೆಂಡ್‌ಗೆ ದೊಡ್ಡ ಮೊತ್ತವನ್ನೇ ಗುರಿಯಾಗಿ ನೀಡಿದ್ದರು. ಈ ಮೊತ್ತ ಬೆನ್ನತ್ತಿದ ಸ್ಕಾಟ್ಲೆಂಡ್ 10.2 ಓವರ್‌ ಗಳಲ್ಲಿ 60 ರನ್‌ಗೆ ಆಲೌಟ್‌ ಆಯಿತು.

ಹಜ್ರತುಲ್ಲ ಜಜಾಯ್‌ (44) ಮತ್ತು ಕೀಪರ್‌ ಮೊಹಮ್ಮದ್‌ ಶಾಜಾದ್‌ (22) ಅಫ್ಘಾನಿಸ್ತಾನಕ್ಕೆ ಬಿರುಸಿನ ಆರಂಭವಿತ್ತರು. ಜಜಾಯ್‌ ಸಿಡಿಸಿದ್ದು 3 ಸಿಕ್ಸರ್‌ ಹಾಗೂ 3 ಬೌಂಡರಿ. ಆಫ್ಗನ್‌ ನ ಈ ಓಟದಲ್ಲಿ ತೃತೀಯ ವಿಕೆಟಿಗೆ ಜತೆಗೂಡಿದ ರಹಮತುಲ್ಲ ಗುರ್ಬಜ್‌ ಮತ್ತು ನಜೀಬುಲ್ಲ ಜದ್ರಾನ್‌ ಅವರ ಪಾತ್ರ ಮಹತ್ವದ್ದಾಗಿತ್ತು. ಬಿರುಸಿನ ಆಟಕ್ಕೆ ಇಳಿದು 52 ಎಸೆತಗಳಿಂದ 87 ರನ್‌ ಪೇರಿಸಿದರು. ಗುರ್ಬಜ್‌ 4 ಸಿಕ್ಸರ್‌, ಒಂದು ಬೌಂಡರಿ ಬಾರಿಸಿ 37 ಎಸೆತಗಳಿಂದ 46 ರನ್‌ ಚಚ್ಚಿದರು. ಅಂತಿಮ ಎಸೆತದಲ್ಲಿ ಔಟಾದ ಜದ್ರಾನ್‌ 34 ಎಸೆತ ಎದುರಿಸಿ ಸರ್ವಾಧಿಕ 59 ರನ್‌ ಹೊಡೆದರು.

ಇದನ್ನೂ ಓದಿ:ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ತಂಡ ಸ್ಪಿನ್ ಜಾಲಕ್ಕೆ ಬಿದ್ದು ಒದ್ದಾಡಿತು. ಮುಜಿಬ್ ಉರ್ ರೆಹಮಾನ್‌ 5 ವಿಕೆಟ್‌, ರಶೀದ್‌ 4 ವಿಕೆಟ್‌ ಪಡೆದು ಸ್ಕಾಟ್ಲೆಂಡ್ ತಂಡದ ಬ್ಯಾಟಿಂಗ್‌ ಬೆನ್ನೆಲೆಬು ಮುರಿದರು. ಸ್ಕಾಟ್ಲೆಂಡ್ ನ‌ ಮುನ್ಸೆ ಮಾತ್ರ 25 ರನ್‌ ಗಳಿಸಿದರು.

ಭಾರತ, ಪಾಕ್, ಕಿವೀಸ್ ಸಂಕಷ್ಟ: 130 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ ಅಫ್ಘಾನ್ ತಂಡ ಒಂದೇ ಪಂದ್ಯದಿಂದ +6.500 ರನ್ ರೇಟ್ ಪಡೆಯಿತು. ಭಾರತ ವಿರುದ್ಧ ಗೆದ್ದಿದ್ದ ಪಾಕ್ ಪಡೆದಿದ್ದು +0.973 ರನ್ ರೇಟ್ ಮಾತ್ರ. ಒಂದು ವೇಳೆ ಅಫ್ಘಾನ್ ತಂಡ ತನ್ನ ಮುಂದಿನ ಕೆಲ ಪಂದ್ಯಗಳನ್ನು ಗೆದ್ದರೆ ಉತ್ತಮ ರನ್ ರೇಟ್ ಸಹಾಯದಿಂದ ಸೆಮಿ ಫೈನಲ್ ಪ್ರವೇಶಿಸಬಹುದು. ಆಗ ಪ್ರಮುಖ ತಂಡಗಳಾದ ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್ ತಂಡಗಳಲ್ಲಿ ಯಾವುದಾದರೂ ತಂಡ ನಿರಾಶೆ ಅನುಭವಿಸಬೇಕಾಗುತ್ತದೆ. ಅಂದಹಾಗೆ ಅಫ್ಘಾನಿಸ್ಥಾನದ ಮುಂದಿನ ಎದುರಾಳಿ ನಮೀಬಿಯಾ!

ಟಾಪ್ ನ್ಯೂಸ್

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

4rambhat

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

3congress

ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕ

Reno Quid

ರೆನೋ ಕ್ವಿಡ್‌ ಮಾಲೀಕರಿಗಾಗಿ ರೆನೋ ಕ್ವಿಡ್‌ ಮೈಲೇಜ್‌ ರ‍್ಯಾಲಿ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

virat

ಮೂರು ಮಾದರಿಯಲ್ಲಿ 50 ಕ್ಕೂ ಹೆಚ್ಚು ಜಯ: ವಿರಾಟ್ ಕೊಹ್ಲಿ ನೂತನ ದಾಖಲೆ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

7country

ದೇಶದ ದಿಕ್ಕು ಬದಲಿಸಿದ್ದು ಅಂಬೇಡ್ಕರ್

6ambedkar

ಅಂಬೇಡ್ಕರ್‌ ಕಷ್ಟ-ನೋವು ಕಣ್ಣೀರಿನದ್ದು

5bjp

ಮತದಾರರ ಬೇಟೆಗೆ ಕೈ-ಕಮಲದ ಅಬ್ಬರ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

high court

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.