ಏಕದಿನ ಸರಣಿ ಗೆದ್ದ ಅಫ್ಘಾನಿಸ್ಥಾನ

Team Udayavani, Mar 25, 2017, 10:38 AM IST

AFGH.jpg

ಗ್ರೇಟರ್‌ ನೋಯ್ಡಾ: ರಹಮತ್‌ ಶಾ ಅವರ ಅಜೇಯ ಶತಕದಿಂದಾಗಿ ಅಯರ್‌ಲ್ಯಾಂಡ್‌ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಅಫ್ಘಾನಿಸ್ಥಾನ ತಂಡವು ಐದು ಪಂದ್ಯಗಳ ಸರಣಿಯನ್ನು 3-2 ಅಂತರಿಂದ ಗೆದ್ದುಕೊಂಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಅಯರ್‌ಲ್ಯಾಂಡ್‌ ತಂಡವು ರಶೀದ್‌ ಖಾನ್‌ ದಾಳಿಗೆ ಕುಸಿದು 48.1 ಓವರ್‌ಗಳಲ್ಲಿ 229 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ರಹಮತ್‌ ಶಾ ಅವರ ಆಕರ್ಷಕ ಅಜೇಯ ಶತಕದಿಂದಾಗಿ ಅಘಾ^ನಿಸ್ಥಾನ ತಂಡವು 48.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. 

ರಹಮತ್‌ ಶಾ ಶತಕ
ಮೊದಲೆರಡು ವಿಕೆಟನ್ನು ಕಳೆದುಕೊಂಡ ಬಳಿಕ ರಹಮತ್‌ ಶಾ ಮತ್ತು ನಾಯಕ ಅಸYರ್‌ ಸ್ಟಾನಿಜಾಯ್‌ ಮೂರನೇ ವಿಕೆಟಿಗೆ 73 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಸ್ಟಾನಿಜಾಯ್‌ ಔಟಾದ ಬಳಿಕ ರಹಮತ್‌ ಅವರನ್ನು ಸೇರಿಕೊಂಡ ಸಮೀಯುಲ್ಲ ಶೆನ್ವಾರಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು. ಮುರಿಯದ ನಾಲ್ಕನೇ ವಿಕೆಟಿಗೆ 133 ರನ್ನುಗಳ ಜತೆಯಾಟ ನಡೆಸಿ ತಂಡಕ್ಕೆ ಸರಣಿ ಗೆಲುವು ತಂದುಕೊಟ್ಟರು. ಈ ನಡುವೆ ಆಕರ್ಷಕ ಶತಕ ದಾಖಲಿಸಿದ ರಹಮತ್‌ ಶಾ 108 ರನ್‌ ಗಳಿಸಿ ಔಟಾಗದೆ ಉಳಿದರು. 128 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಶೆನ್ವಾರಿ 62 ರನ್‌ ಗಳಿಸಿದರು.

ಶತಕ ಸಿಡಿಸಿದ ರಹಮತ್‌ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಅಯರ್‌ಲ್ಯಾಂಡಿನ ಪಾಲ್‌ ಸ್ಟರ್ಲಿಂಗ್‌ ಸರಣಿಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತಗೊಂಡರು.

ಸಂಕ್ಷಿಪ್ತ ಸ್ಕೋರು: ಅಯರ್‌ಲ್ಯಾಂಡ್‌ 48.1 ಓವರ್‌ಗಳಲ್ಲಿ 229 (ಎಡ್‌ ಜಾಯ್ಸ 42, ಪಾಲ್‌ ಸ್ಟರ್ಲಿಂಗ್‌ 51, ವಿಲಿಯಮ್‌ ಪೋರ್ಟರ್‌ಫೀಲ್ಡ್‌ 34, ನಿಯಾಲ್‌ ಓ’ಬ್ರಿàನ್‌ 34, ಜಾರ್ಜ್‌ ಡಾಕ್ರೆಲ್‌ 21, ಫ‌ರೀದ್‌ ಅಹ್ಮದ್‌ 65ಕ್ಕೆ 3, ದೌಲತ್‌ ಜದ್ರಾನ್‌ 33ಕ್ಕೆ 2, ರಶೀದ್‌ ಖಾನ್‌ 29ಕ್ಕೆ 4); ಅಫ್ಘಾನಿಸ್ಥಾನ 48.4 ಓವರ್‌ಗಳಲ್ಲಿ 3 ವಿಕೆಟಿಗೆ 231 (ರಹಮತ್‌ ಶಾ 108 ಔಟಾಗದೆ, ಅಸYರ್‌ ಸ್ಟಾನಿಜಾಯ್‌ 39, ಸಮೀಯುಲ್ಲ ಶೆನ್ವಾರಿ 62 ಔಟಾಗದೆ).
 
ಟಾಪ್ ನ್ಯೂಸ್

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢ

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಡೆನ್ನಿಸ್‌ ಶಪೊವಲೋವ್‌ಗೆ ಶಾಕ್‌

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಡೆನ್ನಿಸ್‌ ಶಪೊವಲೋವ್‌ಗೆ ಶಾಕ್‌

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

ಏಷ್ಯಾ ಕಪ್‌ ಹಾಕಿ: ಜಪಾನ್‌ ವಿರುದ್ಧ ಭಾರತಕ್ಕೆ ಆಘಾತ

ಭಾರತೀಯ ಫುಟ್ ಬಾಲ್‌ ತಂಡಕ್ಕೆ ಮರಳಿದ ಸುನೀಲ್‌ ಚೆಟ್ರಿ

ಭಾರತೀಯ ಫುಟ್ ಬಾಲ್‌ ತಂಡಕ್ಕೆ ಮರಳಿದ ಸುನೀಲ್‌ ಚೆಟ್ರಿ

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

ವನಿತಾ ಟಿ20 ಚಾಲೆಂಜ್‌: ವೆಲಾಸಿಟಿಗೆ 7 ವಿಕೆಟ್‌ ವಿಕ್ಟರಿ

MUST WATCH

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

ಹೊಸ ಸೇರ್ಪಡೆ

hump

ಹಂಪ್‌ಗಳಲ್ಲಿ ಬಣ್ಣವಿಲ್ಲದೆ ಅಪಾಯದ ಸ್ಥಿತಿ

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.