ಸುರಕ್ಷಿತವಾಗಿ ಪಾಕಿಸ್ಥಾನ ತಲುಪಿದ ಅಫ್ಘಾನ್ ವನಿತಾ ಫುಟ್ಬಾಲಿಗರು
Team Udayavani, Sep 15, 2021, 9:47 PM IST
ಇಸ್ಲಾಮಾಬಾದ್: ಅಫ್ಘಾನಿಸ್ಥಾನದ 32 ಮಹಿಳಾ ಫುಟ್ಬಾಲಿಗರು ಸುರಕ್ಷಿತವಾಗಿ ಪಾಕಿಸ್ಥಾನ ತಲುಪಿದ್ದಾರೆ. ಮಹಿಳಾ ಕ್ರೀಡೆಗೆ ತಾಲಿಬಾನಿಗಳು ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಆಟಗಾರ್ತಿಯರಿಗೆ ಪಾಕಿಸ್ಥಾನ ಮಾನವೀಯ ಆಧಾರದಲ್ಲಿ ವೀಸಾ ನೀಡಿದೆ. ಬ್ರಿಟನ್ ಮೂಲದ ಎನ್ಜಿಒ ಈ ಆಟಗಾರ್ತಿಯರ ಸಂರಕ್ಷಣೆಗೆ ಬಹಳವಾಗಿ ಶ್ರಮಿಸಿದೆ.
ಪಾಕಿಸ್ಥಾನ ತಲುಪಿರುವ ಮಹಿಳಾ ಫುಟ್ಬಾಲಿಗರ ಪೈಕಿ ಬಹುತೇಕರು ಕಿರಿಯರು. ಅವರು ಕತಾರ್ಗೆ ಹೋಗಬೇಕಿತ್ತು. 2022ರಲ್ಲಿ ಕತಾರ್ನಲ್ಲಿ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಅಲ್ಲಿನ ತಾಣವೊಂದರಲ್ಲಿ ಅಫ್ಘಾನ್ ನಿರಾಶ್ರಿತರನ್ನು ಉಳಿಸಲಾಗಿದೆ. ಕತಾರ್ಗೆ ತೆರಳಲು ನಿರ್ಧರಿಸಿರುವಾಗಲೇ ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿ ಬಾಂಬ್ ಸ್ಫೋಟವಾಗಿದೆ. ಈ ಘಟನೆಯ ಅನಂತರ ಮಹಿಳಾ ಫುಟ್ಬಾಲಿಗರು ಅತಂತ್ರರಾಗಿದ್ದರು.
ಪಾಕಿಸ್ಥಾನ ತಲುಪುವ ಮುನ್ನ ಅವರೆಲ್ಲ ಗುಪ್ತಸ್ಥಳವೊಂದರಲ್ಲಿದ್ದರು. ಆದರೆ ಅವರು ಹೇಗೆ, ಯಾವ ಮಾರ್ಗದಲ್ಲಿ ಪಾಕಿಸ್ಥಾನದ ತಲುಪಿದರು ಎನ್ನುವುದೆಲ್ಲ ಬಹಳ ರಹಸ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನ್ ಫುಟ್ಬಾಲ್ ಒಕ್ಕೂಟ ಕೂಡ ಪಾಲ್ಗೊಂಡಿದ್ದು, ಪಾಕ್ ಸರಕಾರ ಕೂಡ ನೆರವು ನೀಡಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು