- Monday 16 Dec 2019
ದೀಪ್ತಿ ಶರ್ಮ, ಶಫಾಲಿ ವರ್ಮ ಆರ್ಭಟ : ವಿಂಡೀಸ್ ವಿರುದ್ಧ ಮತ್ತೂಂದು ವಿಕ್ರಮ
Team Udayavani, Nov 12, 2019, 5:28 AM IST
ಗ್ರಾಸ್ ಐಲೆಟ್ (ಸೇಂಟ್ ಲೂಸಿಯಾ): ಆಫ್ ಸ್ಪಿನ್ನರ್ ದೀಪ್ತಿ ಶರ್ಮ ಅವರ ಘಾತಕ ಬೌಲಿಂಗ್ ಮತ್ತು ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅವರ ಮತ್ತೂಂದು ಅಮೋಘ ಇನ್ನಿಂಗ್ಸ್ ನೆರವಿನಿಂದ ವೆಸ್ಟ್ ಇಂಡೀಸ್ ಎದುರಿನ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದು 5 ಪಂದ್ಯಗಳ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಒಲಿದ ಸತತ 2ನೇ ಗೆಲುವು.
ರವಿವಾರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಗಳಿಸಿದ್ದು 7 ವಿಕೆಟಿಗೆ ಕೇವಲ 103 ರನ್. ದೀಪ್ತಿ ಶರ್ಮ 10 ರನ್ನಿಗೆ 4 ವಿಕೆಟ್ ಉಡಾಯಿಸಿ ಕೆರಿಬಿಯನ್ನರನ್ನು ಕಾಡಿದರು. ಇದು ದೀಪ್ತಿ ಶರ್ಮ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಅಮೋಘ ಚೇಸಿಂಗ್ ನಡೆಸಿದ ಭಾರತ ಕೇವಲ 10.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 104 ರನ್ ಬಾರಿಸಿತು.
ಶಫಾಲಿ ಸತತ 2ನೇ ಅರ್ಧ ಶತಕ
ಇಲ್ಲೇ ನಡೆದ ಮೊದಲ ಪಂದ್ಯದಲ್ಲಿ 73 ರನ್ ಬಾರಿಸಿ ಮಿಂಚಿದ್ದ 15ರ ಹರೆಯದ ಶಫಾಲಿ ವರ್ಮ, ದ್ವಿತೀಯ ಮುಖಾಮುಖೀಯಲ್ಲೂ ಅರ್ಧ ಶತಕ ದಾಖಲಿಸಿದರು. ಶಫಾಲಿ ಗಳಿಕೆ 35 ಎಸೆತಗಳಿಂದ ಅಜೇಯ 69 ರನ್. ಇದರಲ್ಲಿ 10 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು.
ಮತ್ತೋರ್ವ ಓಪನರ್ ಸ್ಮತಿ ಮಂಧನಾ ಔಟಾಗದೆ 30 ರನ್ ಮಾಡಿದರು. 28 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಸೇರಿತ್ತು. ವಿಂಡೀಸ್ ಒಂದೂ ವಿಕೆಟ್ ಉರುಳಿಸಲಾಗದೆ ಹತಾಶೆಗೊಳಗಾಯಿತು.
ಭಾರತದ ಬೌಲಿಂಗ್ ದಾಳಿಗೆ ಕೆರಿಬಿಯನ್ನರ ಬಳಿ ಯಾವ ಹಂತದಲ್ಲೂ ಉತ್ತರವಿರಲಿಲ್ಲ. ಅನಿಸಾ ಮೊಹಮ್ಮದ್ ಪಡೆ ನಿರಂತರವಾಗಿ ವಿಕೆಟ್ ಉರುಳಿಸಿಕೊಳ್ಳುತ್ತ ಹೋಯಿತು. ಮಧ್ಯಮ ಸರದಿಯ ಶಡೀಮ್ ನೇಶನ್ 32 ಮತ್ತು ಓಪನರ್ ಹ್ಯಾಲಿ ಮ್ಯಾಥ್ಯೂಸ್ 23 ರನ್ ಮಾಡಿ ಒಂದಿಷ್ಟು ಹೋರಾಟ ತೋರಿದರು.
ಸರಣಿಯ 3ನೇ ಪಂದ್ಯ ನ. 14ರಂದು ಗಯಾನಾದ “ಪ್ರೊವಿಡೆನ್ಸ್ ಸ್ಟೇಡಿಯಂ’ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-20 ಓವರ್‌ಗಳಲ್ಲಿ 7 ವಿಕೆಟಿಗೆ 103 (ನೇಶನ್ 32, ಹ್ಯಾಲಿ 23, ನತಾಶಾ 17, ದೀಪ್ತಿ 10ಕ್ಕೆ 4, ಶಿಖಾ 18ಕ್ಕೆ 1, ರಾಧಾ 20ಕ್ಕೆ 1, ಪೂಜಾ 23ಕ್ಕೆ 1). ಭಾರತ-10.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 104 (ಶಫಾಲಿ ಔಟಾಗದೆ 69, ಮಂಧನಾ ಔಟಾಗದೆ 30). ಪಂದ್ಯಶ್ರೇಷ್ಠ: ದೀಪ್ತಿ ಶರ್ಮ.
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್ .ರಾಹುಲ್ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ...
-
ಪರ್ತ್: ಇಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ 296 ರನ್ನುಗಳ ಭಾರೀ ಅಂತರದಿಂದ ನ್ಯೂಜಿಲ್ಯಾಂಡನ್ನು ಮಣಿಸಿದೆ. ಇದರೊಂದಿಗೆ ಆಡಿದ...
-
ಟೋಕಿಯೊ: ಇನ್ನು 7 ತಿಂಗಳಲ್ಲಿ ಜರಗಲಿರುವ 2020ರ ಟೋಕಿಯೊ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದ, 60 ಸಾವಿರ ಆಸನ ಸಾಮರ್ಥ್ಯದ ನ್ಯೂ ನ್ಯಾಶನಲ್ ಒಲಿಂಪಿಕ್ ಕ್ರೀಡಾಂಗಣವನ್ನು...
-
ಕೋಲ್ಕತಾ, ಡಿ. 15: ರವಿವಾರ ನಡೆದ 100,000 ಡಾಲರ್ ಬಹು ಮಾನದ "ಟಾಟಾ ಸ್ಟೀಲ್ ಕೋಲ್ಕತಾ 25ಕೆ ಮ್ಯಾರಥಾನ್' ಸ್ಪರ್ಧೆ ಯಲ್ಲಿ ಕೀನ್ಯದ ಲಿಯೋನಾರ್ಡ್ ಬಾರ್ಸೊಟನ್ ಮತ್ತು...
-
ಗ್ವಾಂಗ್ಜೂ: ವಿಶ್ವದ ನಂಬರ್ ವನ್ ಶಟ್ಲರ್ ಜಪಾನಿನ ಕೆಂಟೊ ಮೊಮೊಟ "ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್' ಬ್ಯಾಡ್ಮಿಂಟನ್ ಕೂಟದ ಪುರುಷರ ಸಿಂಗಲ್ಸ್...
ಹೊಸ ಸೇರ್ಪಡೆ
-
ಗದಗ: ಜಿಲ್ಲಾಸ್ಪತ್ರೆ ಕಟ್ಟಡ ಹಿಂಭಾಗದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತು ವೈದ್ಯಕೀಯ, ಪೊಲೀಸ್ ನೆರವು, ಚಿಕಿತ್ಸೆ, ಕಾನೂನು ನೆರವು ಹಾಗೂ ಸಮಾಲೋಚನೆ...
-
ಬೆಂಗಳೂರು: ಎಸ್ ಸಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮದಡಿ ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಶ್ರೀ...
-
ಬೀದರ: ಬರವಣೆಗೆ ಒಂದು ಮನೋವೈಜ್ಞಾನಿಕ ಕ್ರಮ. ನಮ್ಮೊಳಗಿನ ನೇತ್ಯಾತ್ಮಕ ವಿಚಾರಧಾರೆ ಮತ್ತು ಒತ್ತಡ ಕಡಿಮೆ ಮಾಡಬಲ್ಲ ಸಾಧನವೆಂದರೆ ಅದು ಬರವಣಿಗೆ. ತಂತ್ರಜ್ಞಾನ...
-
ಹುಬ್ಬಳ್ಳಿ: ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಹೂಡಿಕೆ ಆಕರ್ಷಣೆ ನಿಟ್ಟಿನಲ್ಲಿ ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿ ಡಿಸೆಂಬರ್...
-
ಶರತ್ ಭದ್ರಾವತಿ ಶಿವಮೊಗ್ಗ: ಒಂದು ಕಡೆ ಹೊಸ ಬಡಾವಣೆ ಮಾಡಲು ರಿಯಲ್ ಎಸ್ಟೇಟ್ ಉದ್ದಿಮೆದಾರರು ಮುಂದಾಗುತ್ತಿಲ್ಲ. ಇನ್ನೊಂದು ಕಡೆ ಬಡವರು, ಮಧ್ಯಮ ವರ್ಗದ ಜನರಿಗೆ...