ಅಗರ್ವಾಲ್‌-ರಾಹುಲ್‌ ಕರ್ನಾಟಕ ಜೋಡಿಯ ದಾಖಲೆ

Team Udayavani, Jan 4, 2019, 12:50 AM IST

ಸಿಡ್ನಿ: ಸಿಡ್ನಿಯಲ್ಲಿ ಭಾರತದ ಇನ್ನಿಂಗ್ಸ್‌ ಆರಂಭಿಸಿದ ಮಾಯಾಂಕ್‌ ಅಗರ್ವಾಲ್‌-ಕೆ.ಎಲ್‌. ರಾಹುಲ್‌ ವಿಶೇಷ ಕಾರಣಕ್ಕಾಗಿ ಸುದ್ದಿಯಾದರು. ಇವರಿಬ್ಬರೂ ಭಾರತದ ಟೆಸ್ಟ್‌ ಇತಿಹಾಸದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕದ ಮೊದಲ ಜೋಡಿ ಎನಿಸಿದ್ದಾರೆ!

ಈವರೆಗೆ 26 ಆಟಗಾರರನ್ನು ಭಾರತದ ಟೆಸ್ಟ್‌ ಕ್ರಿಕೆಟಿಗೆ ಕೊಡುಗೆಯಾಗಿ ನೀಡಿದ ಹಿರಿಮೆ ಕರ್ನಾಟಕದ್ದು. ಇವರಲ್ಲಿ ಬಹುತೇಕ ಮಂದಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದರೆ, ಉಳಿದವರು ವಿಕೆಟ್‌ ಕೀಪರ್‌ ಹಾಗೂ ಬೌಲರ್‌ಗಳು. ಜಿ.ಆರ್‌. ವಿಶ್ವನಾಥ್‌, ಬೃಜೇಶ್‌ ಪಟೇಲ್‌, ಬುಧಿ ಕುಂದರನ್‌, ರಾಹುಲ್‌ ದ್ರಾವಿಡ್‌, ಸಯ್ಯದ್‌ ಕಿರ್ಮಾನಿ, ಬಿ.ಎಸ್‌. ಚಂದ್ರಶೇಖರ್‌, ಇ.ಎ.ಎಸ್‌. ಪ್ರಸನ್ನ, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಇವರಲ್ಲಿ ಪ್ರಮುಖರು.

ಇವರಲ್ಲಿ ಮೂಲತಃ ದಕ್ಷಿಣ ಕನ್ನಡದ ಮೂಲ್ಕಿಯವರಾದ, ವಿಕೆಟ್‌ ಕೀಪರ್‌ ಕಂ ಓಪನರ್‌ ಬುಧಿ ಕುಂದರನ್‌ 18 ಟೆಸ್ಟ್‌ಗಳ 34 ಇನ್ನಿಂಗ್ಸ್‌ಗಳಲ್ಲಿ ಭಾರತದ ಇನ್ನಿಂಗ್ಸ್‌ ಆರಂಭಿಸಿದ್ದರು. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ದ್ರಾವಿಡ್‌ ಕೂಡ ಓಪನರ್‌ ಆಗಿ ಕಣಕ್ಕಿಳಿದಿದ್ದಿದೆ. ಕುಂದರನ್‌ ಬಳಿಕ ಸ್ಪೆಷಲಿಸ್ಟ್‌ ಓಪನರ್‌ ಆಗಿ ಕಾಣಿಸಿಕೊಂಡ ರಾಜ್ಯದ ಕ್ರಿಕೆಟಿಗನೆಂದರೆ ಕೆ.ಎಲ್‌. ರಾಹುಲ್‌. ಈಗ ಅಗರ್ವಾಲ್‌ ಸರದಿ.

ಕಿರಿಯರ ವಿಶ್ವಕಪ್‌ ಜೋಡಿ
ರಾಹುಲ್‌-ಅಗರ್ವಾಲ್‌ ಅಂಡರ್‌-13 ಹಂತದಿಂದಲೂ ಜತೆಯಾಗಿ ಇನ್ನಿಂಗ್ಸ್‌ ಆರಂಭಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇಬ್ಬರೂ ರಣಜಿ ಟ್ರೋಫಿಯಲ್ಲಿ ತ್ರಿಶತಕ ಹೊಡೆದಿದ್ದಾರೆ. ಅಂಡರ್‌-19 ವಿಶ್ವಕಪ್‌ನಲ್ಲೂ ಇವರು ಭಾರತದ ಆರಂಭಿಕರಾಗಿ ಕಾಣಿಸಿಕೊಂಡಿದ್ದರು.

ಹೀಗೆ ಕಿರಿಯರ ವಿಶ್ವಕಪ್‌ ಹಾಗೂ ಟೆಸ್ಟ್‌ನಲ್ಲಿ ಓಪನಿಂಗ್‌ ಬಂದ ಭಾರತದ ಮೊದಲ ಹಾಗೂ ವಿಶ್ವದ 5ನೇ ಜೋಡಿಯೆಂಬ ಹಿರಿಮೆ ಅಗರ್ವಾಲ್‌-ರಾಹುಲ್‌ ಅವರದು. ಉಳಿದ ಜೋಡಿಗಳೆಂದರೆ ವೆಸ್ಟ್‌ ಇಂಡೀಸಿನ ಡ್ಯಾರನ್‌ ಗಂಗ-ಕ್ರಿಸ್‌ ಗೇಲ್‌, ಅಡ್ರಿಯನ್‌ ಭರತ್‌-ಕೈರನ್‌ ಪೊವೆಲ್‌, ಪಾಕಿಸ್ಥಾನದ ಇಮ್ರಾನ್‌ ನಜೀರ್‌-ತೌಫೀಕ್‌ ಉಮರ್‌ ಮತ್ತು ದಕ್ಷಿಣ ಆಫ್ರಿಕಾದ ಜಾಕ್‌ ರುಡಾಲ್ಫ್-ಗ್ರೇಮ್‌ ಸ್ಮಿತ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ