ಚಿಕಿತ್ಸೆಗಾಗಿ ದಿಲ್ಲಿ ಆಸ್ಪತ್ರೆಗೆ ಬಾಕ್ಸರ್ ಡಿಂಗ್ಕೊ ಸಿಂಗ್ ಏರ್‌ಲಿಫ್ಟ್
Team Udayavani, Apr 27, 2020, 10:27 AM IST
ಇಂಪಾಲ್: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಗ್ಕೊ ಸಿಂಗ್ ಅವರನ್ನು ಶನಿವಾರ ಕ್ಯಾನ್ಸರ್ ಚಿಕಿತ್ಸೆಗಾಗಿ ಸ್ಪೈಸ್‌ಜೆಟ್ ಏರ್ ಆ್ಯಂಬುಲೆನ್ಸ್ ಮೂಲಕದಿಲ್ಲಿಗೆ ಕರೆ ತರಲಾಯಿತು.
ಡಿಂಗ್ಕೊ ಸಿಂಗ್ ಚಿಕಿತ್ಸೆಗಾಗಿ ಸಂಪೂರ್ಣ ಉಚಿತವಾಗಿ ಏರ್ ಆ್ಯಂಬುಲೆನ್ಸ್ ಸೇವೆ ನೀಡಲಾಯಿತು. ಈ ವೇಳೆ ಪತ್ನಿ ಗಂಗೊಮ್ ಬಭಾಯಿ ದೇವಿ ಕೂಡ ಹಾಜರಿದ್ದರು. ಈ ಬಗ್ಗೆ ಮಾತನಾಡಿದ ಸ್ಪೈಸ್ ಜೆಟ್ ಮುಖ್ಯಸ್ಥ ಹಾಗೂ ನಿರ್ವಹಣಾ ನಿರ್ದೇಶಕ, ಹಾಲಿ ಭಾರತ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ಅಜಯ್ ಸಿಂಗ್, “ಡಿಂಗ್ಕೊ ಸಿಂಗ್ ನಮ್ಮ ಚಾಂಪಿಯನ್ ಬಾಕ್ಸರ್, ಅನಾರೋಗ್ಯದಿಂದಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೆ ಇಂಪಾಲ್‌ನಲ್ಲಿ ಸಂಕಷ್ಟದಲ್ಲಿದ್ದ ಅವರನ್ನು ದಿಲ್ಲಿಗೆ ಕರೆ ತಂದಿದ್ದೇವೆ. ಸದ್ಯ ಚಿಕಿತ್ಸೆ ನಡೆಯುತ್ತಿದೆ ಎಂದರು.
ಪಿತ್ತ ಜನಕಾಂಗದ ಕ್ಯಾನ್ಸರ್ ಗೆ ತುತ್ತಾಗಿರುವ ಅವರು ಕೆಲವು ದಿನಗಳಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದರು.