ಐಪಿಎಲ್‌: ಡೆಲ್ಲಿ ಸೇರುವರೇ ರಹಾನೆ?

Team Udayavani, Nov 15, 2019, 1:26 AM IST

ಹೊಸದಿಲ್ಲಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮುಂಬರುವ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಇದಿನ್ನೂ ಅಧಿಕೃತವಾಗಿಲ್ಲ.

ರಹಾನೆ ಐಪಿಎಲ್‌ನಲ್ಲಿ ಒಟ್ಟು 140 ಪಂದ್ಯಗಳನ್ನಾಡಿದ್ದು, 3,820 ರನ್‌ ಗಳಿಸಿದ್ದಾರೆ. ಸದ್ಯ ಡೆಲ್ಲಿ ತಂಡವು ಶಿಖರ್‌ ಧವನ್‌, ಪೃಥ್ವಿ ಶಾ, ಶ್ರೇಯಸ್‌ ಐಯ್ಯರ್‌ ಅವರಂತಹ ಪ್ರಮುಖ ಆಟಗಾರರನ್ನು ಒಳಗೊಂಡಿದೆ. ಒಂದು ವೇಳೆ ರಹಾನೆ ಸೇರಿದ್ದೇ ಆದರೆ ಅದು ಮತ್ತಷ್ಟು ಬಲಿಷ್ಠಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಪಂಜಾಬ್‌ ತಂಡದಲ್ಲಿದ್ದ ಆಲ್‌ರೌಂಡರ್‌ ಆರ್‌. ಅಶ್ವಿ‌ನ್‌ ಇದೀಗ ಡೆಲ್ಲಿ ತಂಡವನ್ನು ಸೇರಿಕೊಂಡಾಗಿದೆ. ವಿವಿಧ ತಂಡಗಳು ಉಳಿಕೆ ಆಟಗಾರರ ಪಟ್ಟಿ ಪ್ರಕಟಿಸಲು ಶುಕ್ರವಾರ ಕೊನೆಯ ದಿನವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ