ಥೀಮ್‌, ಮೆಡ್ವಡೇವ್‌ ಕ್ವಾ.ಫೈನಲ್‌ ಗೇಮ್‌


Team Udayavani, Sep 8, 2020, 11:05 PM IST

ಥೀಮ್‌, ಮೆಡ್ವಡೇವ್‌ ಕ್ವಾ.ಫೈನಲ್‌ ಗೇಮ್‌

ನ್ಯೂಯಾರ್ಕ್‌: ನೊವಾಕ್‌ ಜೊಕೋವಿಕ್‌ ನಿರ್ಗಮನದ ಬಳಿಕ ಯುಎಸ್‌ ಓಪನ್‌ ಕೂಟದ ನೆಚ್ಚಿನ ಆಟಗಾರನಾಗಿ ಗೋಚರಿಸಿರುವ ಆಸ್ಟ್ರಿಯಾದ ಡೊಮೊನಿಕ್‌ ಥೀಮ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇವರ ಮುಂದಿನ ಎದುರಾಳಿ ಆಸ್ಟ್ರೇಲಿಯದ ಯುವ ಆಟಗಾರ ಅಲೆಕ್ಸ್‌ ಡಿ ಮಿನೌರ್‌.

“ಆರ್ಥರ್‌ ಆ್ಯಶ್‌ ಸ್ಟೇಡಿಯಂ’ನಲ್ಲಿ ನಡೆದ 16ರ ಸುತ್ತಿನ ಮುಖಾಮುಖೀಯಲ್ಲಿ ಡೊಮಿನಿಕ್‌ ಥೀಮ್‌ ಕೆನಡಾದ ಫೆಲಿಕ್ಸ್‌ ಯುಗರ್‌ ಅಲಿಯಾಸಿಮ್‌ ಸವಾಲನ್ನು 7-6 (7-4), 6-1, 6-1ರಿಂದ ಹತ್ತಿಕ್ಕಿದರು. ಅಲಿಯಾಸಿಮ್‌ ದ್ವಿತೀಯ ಸುತ್ತಿನಲ್ಲಿ ಆ್ಯಂಡಿ ಮರ್ರೆ ಅವರನ್ನು ಮಣಿಸಿ ಸುದ್ದಿಯಾಗಿದ್ದರು.
ಇನ್ನೊಂದು ಪಂದ್ಯದಲ್ಲಿ ಅಲೆಕ್ಸ್‌ ಡಿ ಮಿನೌರ್‌ 7-6 (8-6), 6-3, 6-2ರಿಂದ ಕೆನಡಾದ ವ್ಯಾಸೆಕ್‌ ಪಾಸ್ಪಿಸಿಲ್‌ ಅವರನ್ನು ಹಿಮ್ಮೆಟ್ಟಿಸಿದರು.

ಬುಧವಾರ ರಾತ್ರಿಯ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಇಬ್ಬರು ರಶ್ಯನ್ನರು ಎದುರಾಗಲಿದ್ದಾರೆ. 3ನೇ ಶ್ರೇಯಾಂಕದ ಡ್ಯಾನಿಲ್‌ ಮೆಡ್ವೆಡೇವ್‌ ಮತ್ತು ಆ್ಯಂಡ್ರೆ ರುಬ್ಲೆವ್‌ ನಡುವಿನ ಕದನ ಇದಾಗಿದೆ. ಮೆಡ್ವೆಡೇವ್‌ ಆತಿಥೇಯ ನಾಡಿನ ಫ್ರಾನ್ಸೆಸ್‌ ಥಿಯಾಫೂ ಅವರನ್ನು 6-4, 6-1, 6-0 ಅಂತರದಿಂದ ಸುಲಭದಲ್ಲಿ ಮಣಿಸಿದರು. ರುಬ್ಲೆವ್‌ 4 ಸೆಟ್‌ಗಳ ಹೋರಾಟದ ಬಳಿಕ ಇಟೆಲಿಯ ಮ್ಯಾಟಿಯೊ ಬೆರೆಟಿನಿ ವಿರುದ್ಧ 4-6, 6-3, 6-3, 6-3 ಅಂತರದ ಮೇಲುಗೈ ಸಾಧಿಸಿದರು.

ಬೋಪಣ್ಣ ಜೋಡಿ ನಿರ್ಗಮನ
ಯುಎಸ್‌ ಓಪನ್‌ ಪುರುಷರ ಡಬಲ್ಸ್‌ ಪಂದ್ಯಾವಳಿಯಿಂದ ಭಾರತದ ರೋಹನ್‌ ಬೋಪಣ್ಣ-ಕೆನಡಾದ ಡೆನ್ನಿಸ್‌ ಶಪೊವಲೋವ್‌ ಜೋಡಿ ಹೊರಬಿದ್ದಿದೆ. ಇದರೊಂದಿಗೆ ಅಮೆರಿಕನ್‌ ಕೂಟದಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ಸೋಮವಾರ ರಾತ್ರಿ ನಡೆದ ಜಿದ್ದಾಜಿದ್ದಿ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯಲ್ಲಿ ಜೀನ್‌ ಜೂಲಿಯನ್‌ ರೋಜರ್‌ (ನೆದರ್ಲೆಂಡ್ಸ್‌)- ಹೊರಿಯ ಟೆಕು (ರೊಮೇನಿಯಾ) ಸೇರಿಕೊಂಡು ಇಂಡೋ-ಕೆನಡಿಯನ್‌ ಜೋಡಿಯನ್ನು 7-6, 7-5 ಅಂತರದಿಂದ ಮಣಿಸಿದರು.

ಟಾಪ್ ನ್ಯೂಸ್

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಬಸವರಾಜ ಬೊಮ್ಮಾಯಿ

ನಮಗೆ ಜೆಡಿಎಸ್ ಮುಗಿಸುವ ಅಗತ್ಯವಿಲ್ಲ, ದೇವೇಗೌಡರ ಹೇಳಿಕೆ ಸರಿಯಲ್ಲ: ಸಿಎಂ ಬೊಮ್ಮಾಯಿ

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರ್ ಹತ್ಯೆಗೈದ ಪೊಲೀಸರು

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

meghana gaonkar

ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

MUST WATCH

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

ಹೊಸ ಸೇರ್ಪಡೆ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

Untitled-3

ದೌರ್ಜನ್ಯ ತಡೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ವಿಶೇಷ ಅಂಚೆ ಲಕೋಟೆ ಚೀಟಿ ಬಿಡುಗಡೆ

ವಿಶೇಷ ಅಂಚೆ ಲಕೋಟೆ, ಚೀಟಿ ಬಿಡುಗಡೆ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

ಬಸವರಾಜ ಬೊಮ್ಮಾಯಿ

ನಮಗೆ ಜೆಡಿಎಸ್ ಮುಗಿಸುವ ಅಗತ್ಯವಿಲ್ಲ, ದೇವೇಗೌಡರ ಹೇಳಿಕೆ ಸರಿಯಲ್ಲ: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.