ಗೂಗಲ್ನಲ್ಲಿ ಐಪಿಎಲ್ ನೇರ ಪ್ರಸಾರ?
Team Udayavani, May 13, 2022, 6:30 AM IST
ಹೊಸದಿಲ್ಲಿ: ವೀಕ್ಷಕರ ಲೆಕ್ಕಾಚಾರದಲ್ಲಿ ವಿಶ್ವದ 3ನೇ ಅತೀ ದೊಡ್ಡ ಕ್ರೀಡಾಕೂಟವೆಂಬುದು ಐಪಿಎಲ್ ಹೆಗ್ಗಳಿಕೆ. ನೇರ ಪ್ರಸಾರದಲ್ಲಿ ಇದು ಬಹುತೇಕ ವಿಶ್ವವ್ಯಾಪಿ. 2021ರ ಸೀಸನ್ನಲ್ಲಿ 60 ಕೋಟಿ ಮಂದಿ ಐಪಿಎಲ್ ವೀಕ್ಷಿಸಿದ್ದರು ಎನ್ನುತ್ತಿದೆ ಅಂಕಿಅಂಶ. ಇದರ ವ್ಯಾಪ್ತಿ ಇನ್ನಷ್ಟು ಹೆಚ್ಚಲಿದೆಯೇ, ಗೂಗಲ್ ಮೂಲಕವೂ ಐಪಿಎಲ್ ಪಂದ್ಯಗಳು ನೇರ ಪ್ರಸಾರ ಕಾಣಲಿವೆಯೇ? ಇದು ಮುಂದಿನ ವರ್ಷದ ಕುತೂಹಲ!
ಮುಂದಿನ ವರ್ಷ ಬಿಸಿಸಿಐ 2023ರಿಂದ 2027ರ ಅವಧಿಯ ಐಪಿಎಲ್ ಪ್ರಸಾರ ಹಕ್ಕುಗಳ ಬಿಡ್ಡಿಂಗ್ ನಡೆಸಲಿದೆ. ಅಮೆಜಾನ್ ಮತ್ತು ಡಿಸ್ನಿ ಕಂಪೆನಿಗಳು ಪ್ರಸಾರ ಹಕ್ಕು ಖರೀದಿಸಲು ಆಸಕ್ತಿ ವಹಿಸಿವೆ. ಇವುಗಳ ಸಾಲಲ್ಲಿ ಗೂಗಲ್ ಕೂಡ ಸೇರಿಕೊಂಡಿರುವುದು ನೂತನ ಬೆಳವಣಿಗೆ. ಹೀಗಾಗಿ ಬಿಡ್ಡಿಂಗ್ನಲ್ಲಿ ತೀವ್ರ ಪೈಪೋಟಿ ಕಂಡುಬರುವುದು ಖಂಡಿತ.
ಅಮೆರಿಕದ ಖ್ಯಾತ ಆಲ್ಫಾ ಬೆಟ್ ಇಂಕ್ ಕಂಪೆನಿ, ದಕ್ಷಿಣ ಆಫ್ರಿಕಾದ ಸೂಪರ್ ನ್ಪೋರ್ಟ್ಸ್ ಬಿಸಿಸಿಐನಿಂದ ಬಿಡ್ಡಿಂಗ್ ದಾಖಲೆಗಳನ್ನು ಖರೀದಿಸಿವೆ. ಇದೀಗ ಗೂಗಲ್ ಕೂಡ ಮುಂದಾಗಿರುವುದು ಐಪಿಎಲ್ ಲೋಕಪ್ರಿಯತೆಗೆ ಸಾಕ್ಷಿ. ಸ್ಟ್ರೀಮಿಂಗ್ ವೆಬ್ಸೈಟ್ ಯೂ ಟ್ಯೂಬ್ ಹೊಂದಿರುವುದು ಗೂಗಲ್ ಪಾಲಿಗೊಂದು ಪ್ಲಸ್ ಪಾಯಿಂಟ್. ಹೀಗಾಗಿ ಅದು ಗೂಗಲ್ನಲ್ಲಿ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆಯೇ ಎಂಬುದೊಂದು ಕುತೂಹಲ.
ಒಂದು ಲೆಕ್ಕಾಚಾರದ ಪ್ರಕಾರ ಮುಂದಿನ ವರ್ಷದ ಹರಾಜಿನ ಮೂಲಕ ಬಿಸಿಸಿಐ 32 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಗಳಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ