‘ಒಂದು ವಾರ ಸೆಗಣಿಯಲ್ಲಿರು’ ಎಂದು ಪಾಕ್ ನಟಿಗೆ ತಿರುಗೇಟು ನೀಡಿದ ಅಮಿತ್ ಮಿಶ್ರಾ
Team Udayavani, Sep 8, 2022, 5:48 PM IST
ದುಬೈ: ಟೀಂ ಇಂಡಿಯಾ ಮಾಜಿ ಆಟಗಾರ ಅಮಿತ್ ಮಿಶ್ರಾ ಅವರು ಸದ್ಯ ತಮ್ಮ ಟ್ವೀಟ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ ಕಾಲೆಳೆಯಲು ಯತ್ನಿಸಿದ ಪಾಕಿಸ್ಥಾನದ ನಟಿಗೆ ಅಮಿತ್ ಮಿಶ್ರಾ ತಿರುಗೇಟು ನೀಡಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಎಷ್ಯಾಕಪ್ ಸೂಪರ್ ಫೋರ್ ಹಂತದಲ್ಲಿ ಭಾರತ ತಂಡ ಲಂಕಾ ವಿರುದ್ಧ ಸೋತ ಬಳಿಕ ಫೈನಲ್ ತಲುಪಬೇಕಾದರೆ ಬುಧವಾರದ ಪಂದ್ಯದಲ್ಲಿ ಪಾಕ್ ವಿರುದ್ಧ ಅಫ್ಘಾನ್ ಗೆಲ್ಲಬೇಕಿತ್ತು. ಈ ಕುರಿತಾಗಿ ಟ್ವೀಟ್ ಮಾಡಿದ್ದ ಅಮಿತ್ ಮಿಶ್ರಾ, ಒಂದು ವೇಳೆ ಇಂದು ಅಫ್ಘಾನಿಸ್ಥಾನ ಗೆದ್ದರೆ ಒಂದು ವಾರ ಪೂರ್ತಿ, ಅಫ್ಘಾನಿ ಚಾಪ್ ತಿನ್ನುತ್ತೇನೆ ಎಂದಿದ್ದರು.
ಆದರೆ ರೋಮಾಂಚಕ ಪಂದ್ಯದಲ್ಲಿ ಪಾಕಿಸ್ಥಾನ ತಂಡವು ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಅಮಿತ್ ಮಿಶ್ರಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ಥಾನಿ ನಟಿ ಸೆಹರ್ ಶಿನ್ವಾರಿ “ಬಡವ ಮಿಶ್ರಾ, ಇನ್ನೊಂದು ವಾರ ಸೆಗಣಿಯಲ್ಲಿ ಕಾಲ ಕಳೆಯಬೇಕು” ಎಂದು ವ್ಯಂಗ್ಯವಾಡಿದ್ದರು.
ಪಾಕ್ ನಟಿಯ ಟ್ವೀಟ್ ಗೆ ತಿರುಗೇಟು ನೀಡಿದ ಅಮಿತ್ ಮಿಶ್ರಾ, “ ಇಲ್ಲ, ನನಗೆ ಪಾಕಿಸ್ಥಾನಕ್ಕೆ ಬರುವ ಯಾವುದೇ ಯೋಜನೆಯಿಲ್ಲ.” ಎಂದಿದ್ದಾರೆ.
ಗುರುವಾರ ಭಾರತ ತಂಡ ಏಷ್ಯಾಕಪ್ ಕೂಟದ ಕೊನೆಯ ಪಂದ್ಯವನ್ನು ಆಡಲಿದೆ. ದುಬೈ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.
No, I have no plans of coming to Pakistan. ? https://t.co/HbFWeZSjij
— Amit Mishra (@MishiAmit) September 8, 2022