ವಿಶ್ವ ಬಾಕ್ಸಿಂಗ್‌ ಟೂರ್ನಿ:ಪಂಘಲ್‌ಗೆ 2ನೇ ಶ್ರೇಯಾಂಕ

Team Udayavani, Sep 9, 2019, 5:10 AM IST

ಎಕಟೆರಿನ್‌ಬರ್ಗ್‌ (ರಶ್ಯ): ಏಶ್ಯನ್‌ ಚಾಂಪಿಯನ್‌ ಅಮಿತ್‌ ಪಂಘಲ್‌ (52 ಕೆಜಿ) ಅವರಿಗೆ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಶ್ರೇಯಾಂಕ ಲಭಿಸಿದೆ. ಅಷ್ಟೇ ಅಲ್ಲ, ಕೂಟದ ಮೊದಲೇ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಬೈ ಪಡೆದಿದ್ದಾರೆ. ಈ ಪಂದ್ಯಾವಳಿ ಸೋಮವಾರದಿಂದ ರಶ್ಯದಲ್ಲಿ ಆರಂಭವಾಗಲಿದೆ.

ಪಂಘಲ್‌ ಜತೆಗೆ ಕವಿಂದರ್‌ ಸಿಂಗ್‌ ಬಿಷ್ಟ್ (57 ಕೆಜಿ, 5ನೇ ಶ್ರೇಯಾಂಕ), ಆಶಿಷ್‌ ಕುಮಾರ್‌ (75 ಕೆಜಿ, 7ನೇ ಶ್ರೇಯಾಂಕ) ಮತ್ತು ಸಂಜೀತ್‌ (91 ಕೆಜಿ) ಕೂಡ ಬೈ ಪಡೆದು ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ. ಆಶಿಷ್‌ ಮತ್ತು ಸಂಜೀತ್‌ ವಿಶ್ವ ಬಾಕ್ಸಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲು.

2017ರ ಹ್ಯಾಂಬರ್ಗ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್‌ ಪಂಘಲ್‌ ಮತ್ತು ಕವಿಂದರ್‌ ಸಿಂಗ್‌ ಬಿಷ್ಟ್ ಕ್ವಾರ್ಟರ್‌ ಫೈನಲ್‌ನಲ್ಲಿ ಹೋರಾಟ ಮುಗಿಸಿದ್ದರು.

ಭಾರತ ಮಂಗಳವಾರ ತನ್ನ ಸ್ಪರ್ಧೆಯನ್ನು ಆರಂಭಿಸಲಿದೆ. ಬೃಜೇಶ್‌ ಯಾದವ್‌ (81 ಕೆಜಿ) ಪೋಲೆಂಡ್‌ನ‌ ಮಾಲೆಯುಸ್‌ ಗೋಯಿನ್‌ಸ್ಕಿ ವಿರುದ್ಧ ಮೊದಲ ಸುತ್ತಿನ ಪಂದ್ಯವಾಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ