ಈಡನ್‌ ಗಾರ್ಡನ್ಸ್‌ ಟೆಸ್ಟ್‌ ಪಂದ್ಯಕ್ಕೆ ಅಮಿತ್‌ ಶಾ ಅತಿಥಿ

Team Udayavani, Nov 15, 2019, 5:58 AM IST

ಕೋಲ್ಕತಾ: ಕೋಲ್ಕತಾದಲ್ಲಿ ನಡೆಯಲಿರುವ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಬಹಳಷ್ಟು ಮಂದಿ ಅತಿಥಿಗಳು ಸಾಕ್ಷಿಯಾಗಲಿದ್ದು, ಈ ಸಾಲಿಗೆ ಈಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಸೇರಿದ್ದಾರೆ.

ನ. 22ರ ಮೊದಲ ದಿನದಾಟದ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಅಮಿತ್‌ ಶಾ ಕೂಡ ಸ್ಟೇಡಿಯಂನಲ್ಲಿ ಉಪಸ್ಥಿತರಿರುತ್ತಾರೆ ಎಂದು ಬಂಗಾಲ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಸಂಜೆ ವೇಳೆ ಒಂದು ಗಂಟೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕ್ರೀಡಾತಾರೆಗಳಾದ ಅಭಿನವ್‌ ಬಿಂದ್ರಾ ಮತ್ತು ಮೇರಿ ಮೋಮ್‌ ಅವರನ್ನು ಸಮ್ಮಾನಿಸಲಾಗುವುದು ಎಂದು ಕ್ಯಾಬ್‌ ಕಾರ್ಯದರ್ಶಿ ಅವಿಶೇಕ್‌ ದಾಲ್ಮಿಯಾ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮಹೇಂದ್ರ ಸಿಂಗ್‌ ಧೋನಿ ಆಗಮಿಸುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಾಲಿ¾ಯಾ, “ಧೋನಿಗೂ ಆಮಂತ್ರಣ ನೀಡಿದ್ದೇವೆ. ಅವರು ವೀಕ್ಷಕ ವಿವರಣೆ ನೀಡುವ ಬಗ್ಗೆ ಸುದ್ದಿಯಾಗಿದೆ. ಆದರೆ ಇದನ್ನು ಪ್ರಸಾರಕರೇ ಖಾತ್ರಿಪಡಿಸಬೇಕು’ ಎಂದರು.

ಮಾಜಿ ಕ್ರಿಕೆಟ್‌ ತಾರೆಗಳೊಂದಿಗೆ ಚಾಟ್‌ ಶೋ
ಇದು ಭಾರತದಲ್ಲಿ ನಡೆಯಲಿರುವ ಹಾಗೂ ಭಾರತ, ಬಾಂಗ್ಲಾದೇಶ ತಂಡಗಳೆರಡೂ ಆಡಲಿರುವ ಮೊದಲ ಹಗಲು-ರಾತ್ರಿ ಟೆಸ್ಟ್‌ ಪಂದ್ಯವಾದ್ದರಿಂದ ಇದನ್ನು ಅವಿಸ್ಮರಣೀಯಗೊಳಿಸುವುದು ಬಿಸಿಸಿಐ ಮತ್ತು ಬಂಗಾಲ ಕ್ರಿಕೆಟ್‌ ಮಂಡಳಿಯ ಉದ್ದೇಶ. ಹೀಗಾಗಿ ಮೊದಲ ದಿನದಾಟದ ಬಿಡುವಿನ ವೇಳೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಯಾದಿ ಹೀಗಿದೆ…

– ಅರೆಸೇನಾಪಡೆಯವರು ಪಿಂಕ್‌ ಬಾಲ್‌ಗ‌ಳೊಂದಿಗೆ ಗ್ಯಾಲರಿ ಇಳಿದು ಬರುವುದರೊಂದಿಗೆ ಈ ಪಂದ್ಯಕ್ಕೆ ಅಧಿಕೃತ ಚಾಲನೆ ನೀಡುವುದು.

– ಈಡನ್‌ ಸಂಪ್ರದಾಯದಂತೆ ಗಂಟೆ ಹೊಡೆದು ಪಂದ್ಯವನ್ನು ಉದ್ಘಾಟಿಸುವುದು. ಈ ಅವಕಾಶ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಪಾಲಾಗಿದೆ. ಬಳಿಕ ಎರಡೂ ದೇಶಗಳ ರಾಷ್ಟ್ರಗೀತೆ ಹಾಡುವುದು.

– ಭೋಜನ ವಿರಾಮದ ವೇಳೆ ಮಾಜಿ ಕ್ರಿಕೆಟ್‌ ತಾರೆಗಳಾದ ತೆಂಡುಲ್ಕರ್‌, ದ್ರಾವಿಡ್‌, ಕುಂಬ್ಳೆ, ಲಕ್ಷ್ಮಣ್‌ ಮತ್ತು ಗಂಗೂಲಿ ಜತೆ ಚಾಟ್‌ ಶೋ.

– ಕ್ರೀಡಾಂಗಣದ ಹೊರವಲಯದಲ್ಲಿ ಎಚ್‌ಐವಿ ಬಾಧಿತ ಮಕ್ಕಳಿಂದ ಕ್ರಿಕೆಟ್‌ ಪಂದ್ಯ.

– ಸ್ತನ ಕ್ಯಾನ್ಸರ್‌ ಪೀಡಿತರಿಗೆ ಕ್ರಿಕೆಟಿಗರು ಹೂವಿನ ಗುಚ್ಛ ನೀಡಿ ಜಾಗೃತಿ ಮೂಡಿಸುವುದು.

– ಸಂಜೆ ಅಭಿನವ್‌ ಬಿಂದ್ರಾ, ಮೇರಿ ಕೋಮ್‌ ಮೊದಲಾದ ದೇಶದ ಕ್ರೀಡಾ ತಾರೆಗಳಿಗೆ ಸಮ್ಮಾನ.

– ಭಾರತ-ಬಾಂಗ್ಲಾದೇಶ ನಡುವಿನ ಪ್ರಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಂಡ ಕ್ರಿಕೆಟಿಗರಿಗೆ ಸ್ಮರಣಿಕೆ ನೀಡಿ ಗೌರವಿಸುವುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ