ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಮಿತ್ ಪಂಗಲ್
Team Udayavani, Feb 15, 2019, 5:43 AM IST
ಹೊಸದಿಲ್ಲಿ: ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ “ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್’ನ ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಸತತ ಎರಡನೇ ಚಿನ್ನದ ಕಣ್ಣೀಟ್ಟಿರುವ ಅಮಿತ್ (49 ಕೆಜಿ) ರವಿವಾರ ನಡೆಯಲಿರುವ ಪಂದ್ಯದಲ್ಲಿ ಉಕ್ರೇನಿನ ನಜಾರ್ ಕುರೊಟಿಯನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಜಯಿಸಿದರೆ ಯೂರೋಪಿಯನ್ ಕೂಟದಲ್ಲಿ ಸತತ 2ನೇ ಪದಕ ಅಮಿತ್ ಪಾಲಾಗುವುದು ಖಚಿತ.
ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ನಮನ್ ತನ್ವಾರ್ಗೂ (91 ಕೆಜಿ) ಬೈ ದೊರಕಿದ್ದು, ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆಯುವ ಪಂದ್ಯದಲ್ಲಿ ಅವರು ಪೋಲೆಂಡ್ನ ಮೈಕಲ್ ಸೊಕೊಝ್ಸ್ಕಿ ವಿರುದ್ಧ ಆಡಲಿದ್ದಾರೆ. ನೀರಜ್ (60 ಕೆಜಿ) ಕೂಡ ಪ್ರಿ-ಕ್ವಾರ್ಟರ್ ಫೈನಲ್ಗೆ ಕಾಲಿಟ್ಟಿದ್ದಾರೆ.
ಇಂದು ಮಹತ್ವದ ಮುಖಾಮುಖೀ
ಶುಕ್ರವಾರದ ಪಂದ್ಯದಲ್ಲಿ ವಿಜೇತ ಗೌರವ್ ಬಿಧುರಿ (56 ಕೆಜಿ), ಬಲ್ಗೇರಿಯಾದ ಆಟಗಾರ ಇಮಾನ್ಯುಯೆಲ್ ಬೊಗೇವ್ ಅವರನ್ನು ಎದುರಿಸಲಿದ್ದಾರೆ. 52 ಕೆಜಿ ವಿಭಾಗದ ಆರಂಭಿಕ ಬೌಟ್ನಲ್ಲಿ ಗೌರವ್ ಸೋಲಂಕಿ ಅಮೆರಿಕದ ಅಬ್ರಹಾಂ ಪೆರೆಝ್ ವಿರುದ್ಧ ಸೆಣೆಸಲಿದ್ದಾರೆ. 60 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ಅಂಕುಶ್ ದಹಿಯಾ ಅಜರ್ಬೈಜಾನ್ನ ಸರ್ಖನ್ ಅಲೀವ್ ಹಾಗೂ ಮನ್ದೀಪ್ ಜಂಗ್ರಾ ಉಕ್ರೇನಿನ ವಿಕ್ಟರ್ ಪೆಟ್ರೋವ್ ವಿರುದ್ಧ ಆಡಲಿದ್ದಾರೆ.
ಮೀನಾ ಕುಮಾರಿಗೆ ನೇರ ಪ್ರವೇಶ
ವನಿತಾ ವಿಭಾಗದಲ್ಲಿ ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಮೀನಾ ಕುಮಾರಿ ದೇವಿ (54 ಕೆಜಿ) ಅವರಿಗೆ ಕ್ವಾರ್ಟರ್ ಫೈನಲ್ಗೆ ನೇರಪ್ರವೇಶ ದೊರಕಿದೆ. ಸೋನಿಯಾ ಲಾಥರ್ (57 ಕೆಜಿ) ಮೊದಲ ಸುತ್ತಿನಲ್ಲಿ ಸರ್ಬಿಯಾದ ಜೆಲೆನಾ ಝೆಕಿಕ್ ಅವರ ವಿರುದ್ಧ ಆಡಿದರೆ, 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪಿಂಕಿ ರಾಣಿ ಫಿನಿಪಿನೊ ಐರಿಶ್ ಮ್ಯಾಗ್ನೊ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು