ಅಮಿತ್‌ ಪಂಘಲ್‌ ವಿಶ್ವದ ನಂ.1 ಬಾಕ್ಸರ್‌

Team Udayavani, Feb 14, 2020, 7:15 AM IST

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಘಲ್‌ (52 ಕೆಜಿ ವಿಭಾಗ) ನೂತನ “ಐಒಸಿ ಬಾಕ್ಸಿಂಗ್‌ ಟಾಸ್ಕ್ ಫೋರ್ಸ್‌’ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಬಾಕ್ಸರ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದೊಂದು ದಶಕದ ಅವಧಿಯಲ್ಲಿ ಭಾರತದ ಬಾಕ್ಸರ್‌ ಓರ್ವ ಅಗ್ರಸ್ಥಾನಕ್ಕೆ ನೆಗೆದದ್ದು ಇದೇ ಮೊದಲು.

2009ರಲ್ಲಿ ಒಲಿಂಪಿಕ್‌ ಕಂಚಿನ ಪದಕ ವಿಜೇತ ವಿಜೇಂದರ್‌ ಸಿಂಗ್‌ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು (72 ಕೆಜಿ ವಿಭಾಗ).

24ರ ಹರೆಯದ ಅಮಿತ್‌ ಪಂಘಲ್‌ ಒಟ್ಟು 420 ಅಂಕ ಹೊಂದಿದ್ದಾರೆ ಎಂದು ಇಂಟರ್‌ನ್ಯಾಶನಲ್‌ ಒಲಿಂಪಿಕ್‌ ಕಮಿಟಿಯ (ಐಒಸಿ) ಬಾಕ್ಸಿಂಗ್‌ ಟಾಸ್ಕ್ ಫೋರ್ಸ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಅಮಿತ್‌ ಪಂಘಲ್‌ 2018ರ ಕಾಮನ್‌ವೆಲ್ತ್‌ ಮತ್ತು ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಶ್ಯನ್‌ ಒಲಿಂಪಿಕ್‌ ಕ್ವಾಲಿಫೈಯರ್ ಸ್ಪರ್ಧೆ ಮುಂದಿನ ತಿಂಗಳು ಅಮ್ಮಾನ್‌ ಮತ್ತು ಜೋರ್ಡಾನ್‌ನಲ್ಲಿ ನಡೆಯಲಿದೆ.

ಮೇರಿ 5ನೇ ರ್‍ಯಾಂಕಿಂಗ್‌
ವನಿತಾ ರ್‍ಯಾಂಕಿಂಗ್‌ನಲ್ಲಿ 6 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ (51 ಕೆಜಿ) 225 ಅಂಕಗಳೊಂದಿಗೆ 5ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ. ಇವರ ನಿಕಟ ಸ್ಪರ್ಧಿ ನಿಖತ್‌ ಜರೀನ್‌ 22ನೇ ಸ್ಥಾನಿಯಾಗಿದ್ದಾರೆ (75 ಅಂಕ). 69 ಕೆಜಿ ವಿಭಾಗದ ಲೊವಿÉನಾ ಬೊರ್ಗೊಹೈನ್‌ 3ನೇ ಸ್ಥಾನಿಯಾಗಿರುವುದು ಭಾರತದ ವನಿತಾ ವಿಭಾಗದ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿದೆ.

ನನ್ನ ಪಾಲಿಗೆ ಇದೊಂದು ಮಹಾನ್‌ ಗೌರವ. ವಿಶ್ವದ ಅಗ್ರಸ್ಥಾನ ಎನ್ನುವುದು ಯಾವತ್ತೂ ಹೊಸ ಸ್ಫೂರ್ತಿ ತುಂಬುತ್ತದೆ. ಮುಂದಿನ ಮೊದಲ ಅರ್ಹತಾ ಸ್ಪರ್ಧೆಯಲ್ಲೇ ಟೋಕಿಯೊ ಒಲಿಂಪಿಕ್‌ ಟಿಕೆಟ್‌ ಪಡೆಯುವ ಗುರಿ ನನ್ನದು.

– ಅಮಿತ್‌ ಪಂಘಲ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಪೀಡಿತ ವುಹಾನ್‌ನಲ್ಲಿರುವ 100ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕರೆತರುವ ಭಾರತದ ಪ್ರಯತ್ನಕ್ಕೆ ಚೀನದ ವಿಳಂಬ ಧೋರಣೆ...

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • ತಂದೆಗೆ ಮಗನೇ ಸರ್ವಸ್ವ, ಮಗನಿಗೆ ಅಪ್ಪನೇ ಪ್ರಪಂಚ. ತಾಯಿ ಇಲ್ಲದಿದ್ದರೂ, ಆ ಕೊರಗು ಬಾರದಂತೆ, ಚಿಕ್ಕಂದಿನಿಂದಲೇ ಮಗನ ಬೇಕು-ಬೇಡಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ,...

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...