ಅನಾಸ್ ರಾಷ್ಟ್ರೀಯ ದಾಖಲೆ
Team Udayavani, Jul 23, 2018, 11:48 AM IST
ಪ್ರೇಗ್ (ಚೆಕ್ ಗಣರಾಜ್ಯ): ಕೇರಳದ ಖ್ಯಾತ ಓಟಗಾರ ಮೊಹಮ್ಮದ್ ಅನಾಸ್ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿದ್ದಾರೆ. ಇಲ್ಲಿ ನಡೆದ ಆ್ಯತ್ಲೆಟಿಕ್ಸ್ ಕೂಟದ 400 ಮೀ. ಓಟದಲ್ಲಿ ಅವರು ಚಿನ್ನ ಗೆದ್ದರು. ಈ ವೇಳೆ ಅವರು 45.24 ಸೆಕೆಂಡ್ನಲ್ಲಿ ಗುರಿ ಮುಟ್ಟಿದರು. ಇದಕ್ಕೂ ಮುನ್ನ ಅವರು 45.31 ಸೆಕೆಂಡ್ನಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಮೊಹಮ್ಮದ್ ಅನಾಸ್ ಈ ವರ್ಷ ಗೋಲ್ಡ್ಕೋಸ್ಟ್ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 4ನೇ ಸ್ಥಾನಿಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದರು. 2016ರಲ್ಲೂ ಗಮ ನಾರ್ಹ ಪ್ರದರ್ಶನ ನೀಡಿದ್ದರು. ಮಿಲಾ ಸಿಂಗ್ ಮತ್ತು ಕೆ.ಎಂ. ಬಿನು ಅನಂತರ 400 ಮೀ.ನಲ್ಲಿ ಒಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ಭಾರತೀಯನೆಂಬ ಹೆಗ್ಗಳಿಕೆ ಮೊಹಮ್ಮದ್ ಅನಾಸ್ ಅವರದಾಗಿತ್ತು. ಅನಾಸ್ ಕಳೆದ ರಿಯೋ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ