ಆಡಲು ಇಷ್ಟವಿಲ್ಲ ಎಂದರೂ ಬಿಡಲಿಲ್ಲ, ವಿಚಿತ್ರ ಫ್ರಾಂಚೈಸಿ ಇದು: ರಸ್ಸೆಲ್ ಬೇಸರ
Team Udayavani, May 1, 2020, 3:55 PM IST
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ನ ಆಲ್ ರೌಂಡರ್, ಟಿ 20 ಪಂದ್ಯಗಳಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸುವ ಆಟಗಾರ ಆಂದ್ರೆ ರಸ್ಸೆಲ್ ಟಿ20 ಫ್ರಾಂಚೈಸಿಯೊಂದರ ವಿರುದ್ಧ ಅಸಮಧಾನ ಹೊಸಹಾಕಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಾನು ಪ್ರತಿನಿಧಿಸುವ ಜಮೈಕಾ ತಲಾವಾಸ್ ತಂಡದ ವಿರುದ್ಧ ರಸ್ಸೆಲ್ ಕಿಡಿಕಾರಿದ್ದಾರೆ. ನಾನು ಇದುವರೆಗೂ ಆಡಿದ ವಿಚಿತ್ರ ತಂಡವೆಂದರೆ ಅದು ಜಮೈಕಾ ತಲಾವಾಸ್. ನನಗೆ ತಂಡದಲ್ಲಿ ಉಳಿಯಲು ಇಷ್ಟವಿಲ್ಲ ಎಂದರೂ ಅವರು ನನ್ನನ್ನು ಉಳಿಸಿಕೊಂಡಿದ್ದಾರೆ. ಇದು ಆ ತಂಡದೊಂದಿಗೆ ನನ್ನ ಕೊನೆಯ ಆವೃತ್ತಿ ಎಂದು ರಸ್ಸೆಲ್ ಹೇಳಿಕೊಂಡಿದ್ದಾರೆ.
ಪ್ರತಿ ಫ್ರಾಂಚೈಸಿ ಆಟಗಾರರ ಹರಾಜಿಗೂ ಮುನ್ನ ತಂಡದಲ್ಲಿ ಉಳಿದುಕೊಂಡ ದೇಶೀಯ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕು. ಆದರೆ, ತಾವು ತಂಡದಲ್ಲಿ ಉಳಿಯಲು ಇಷ್ಟವಿಲ್ಲ ಎಂದು ಮೊದಲೇ ಹೇಳಿದ್ದರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಜಮೈಕಾ ತಲಾವಾಸ್ ಫ್ರಾಂಚೈಸಿ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ’ ಎಂದು ರಸ್ಸೆಲ್ ಕಿಡಿಕಾರಿದ್ದಾರೆ.
‘ನಾನು ಈವರೆಗೆ ಟಿ-20 ಕ್ರಿಕೆಟ್ನಲ್ಲಿ 13 ಟ್ರೋಫಿಗಳನ್ನು ಗೆದ್ದಿದ್ದೇನೆ. ಪಂದ್ಯವನ್ನು ಸೋಲಿಸಲು ನನಗೆ ಇಷ್ಟವಿಲ್ಲ. ತಂಡವೊಂದು ಗೆಲ್ಲುವುದಕ್ಕೋಸ್ಕರ ಆಡುವ ಆಟಗಾರ ನಾನು. ಜಮೈಕಾ ತಲಾವಾಸ್ ವರ್ತನೆಯೇ ಸರಿಯಿಲ್ಲ. ಆಟಗಾರರ ಪಟ್ಟಿ ಬಿಡುಗಡೆ ಮಾಡುವ ಮೊದಲು ನಾನು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೆ. ಆದರೆ, ಅವರಿಂದ ಯಾವುದೇ ಮರು ಉತ್ತರ ಬರಲಿಲ್ಲ’ ಎಂಬುದು ರಸ್ಸೆಲ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ