ಮುಖ್ಯ ಡ್ರಾಕ್ಕೇರುವ ನಿರೀಕ್ಷೆಯಲ್ಲಿ ಅಂಕಿತಾ ರೈನಾ
Team Udayavani, Jan 13, 2021, 7:15 AM IST
ಮೆಲ್ಬರ್ನ್: ಭಾರತದ ಅಗ್ರ ಕ್ರಮಾಂಕದ ವನಿತಾ ಆಟಗಾರ್ತಿ ಅಂಕಿತಾ ರೈನಾ ಅವರು ಆಸ್ಟ್ರೇಲಿಯನ್ ಓಪನ್ ಅರ್ಹತಾ ಕೂಟದಲ್ಲಿ ಇನ್ನೊಂದು ಪಂದ್ಯ ಗೆದ್ದರೆ ಕೂಟದ ಮುಖ್ಯ ಡ್ರಾಕ್ಕೇರಲ್ಲಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ರಾಮಕುಮಾರ್ ರಾಮನಾಥನ್ ಅರ್ಹತಾ ಕೂಟದಲ್ಲಿ ಸೋತು ಹೊರಬಿದ್ದಿದ್ದಾರೆ.
ದುಬಾೖಯಲ್ಲಿ ನಡೆಯುತ್ತಿರುವ ಅರ್ಹತಾ ಕೂಟದ ಪಂದ್ಯದಲ್ಲಿ ಅಂಕಿತಾ ಅವರು ವಿಶ್ವದ 118ನೇ ರ್‍ಯಾಂಕಿನ ಕ್ಯಾತರಿನಾ ಝವಟ್‌ಸ್ಕಾ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಮುಖ್ಯ ಡ್ರಾಕ್ಕೇರುವ ನಿರೀಕ್ಷೆ ಮೂಡಿಸಿದ್ದಾರೆ. 6-2, 2-6, 6-3 ಸೆಟ್‌ಗಳಿಂದ ಗೆಲ್ಲಲು ಅವರಿಗೆ ಎರಡು ತಾಸು ಮತ್ತು 20 ನಿಮಿಷ ಬೇಕಾಗಿತ್ತು.
ಗ್ರ್ಯಾನ್ ಸ್ಲಾಮ್ ಕೂಟದ ಮುಖ್ಯ ಡ್ರಾಕ್ಕೇರಲು ಇದು ಅಂಕಿತಾ ಅವರ ಆರನೇ ಪ್ರಯತ್ನವಾಗಿದೆ. ಒಂದು ವೇಳೆ ಇನ್ನೊಂದು ಅರ್ಹತಾ ಪಂದ್ಯದಲ್ಲಿ ಅವರು ಗೆದ್ದರೆ ಇತಿಹಾಸ ನಿರ್ಮಿಸಲಿದ್ದಾರೆ. ಈ ಹಿಂದೆ ಕೇವಲ ನಿರುಪಮಾ ವೈದ್ಯ ನಾಥನ್ ಮತ್ತು ಸಾನಿಯಾ ಮಿರ್ಜಾ ಮಾತ್ರ ಗ್ರ್ಯಾನ್ ಸ್ಲಾಮ್ ಕೂಟದ ಮುಖ್ಯ ಡ್ರಾಕ್ಕೇರಿದ್ದರು. ನಿರುಪಮಾ 1998ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ದ್ವಿತೀಯ ಸುತ್ತು ತಲುಪಿದ್ದರೆ ಸಾನಿಯಾ 2012ರಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444