ಇನ್ನೊಂದು ಸೂಪರ್‌ ಓವರ್‌ ಅಳವಡಿಸಬೇಕಿತ್ತು: ಸಚಿನ್‌

Team Udayavani, Jul 18, 2019, 5:13 AM IST

ಮುಂಬಯಿ: ವಿಶ್ವಕಪ್‌ ಫೈನಲ್‌ನಲ್ಲಿ ಬೌಂಡರಿ ಲೆಕ್ಕಾಚಾರದ ಮೇಲೆ ಪಂದ್ಯದ ಪಲಿತಾಂಶ ನಿರ್ಧರಿಸಿ ರುವುದು ಸರಿಯಲ್ಲ ಎಂದು ಅನೇಕ ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇದೀಗ ಸಚಿನ್‌ ತೆಂಡುಲ್ಕರ್‌ ಕೂಡ ಈ ವಿಚಾರ ದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಸೂಪರ್‌ ಓವರ್‌ನಲ್ಲಿಯೂ ಪಂದ್ಯ ಟೈ ಆದಾಗ ಇನ್ನೊಂದು ಸೂಪರ್‌ ಓವರ್‌ ನಿಗದಿ ಮಾಡಬೇಕಿತ್ತು. ಫ‌ುಟ್‌ ಬಾಲ್‌ನಲ್ಲಿ ಎಕ್ಸ್‌ಟ್ರಾ ಸಮಯ ನೀಡಲಾಗುತ್ತದೆ. ಅದರಲ್ಲೂ ಪಂದ್ಯ ನಿರ್ಧಾರವಾಗದೆ ಇದ್ದಾಗ ಪೆನಾಲ್ಟಿ ಶೂಟೌಟ್‌ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಕ್ರಿಕೆಟ್‌ನಲ್ಲಿಯೂ ಸೂಪರ್‌ ಓವರ್‌ನಲ್ಲಿ ಪಂದ್ಯ ಟೈ ಆದರೆ ಮತ್ತೂಂದು ಸೂಪರ್‌ ಓವರ್‌ ನೀಡಬೇಕು, ಅಥವಾ ಇತ್ತಂಡಗಳನ್ನು ಜಯಶಾಲಿ ಎಂದು ಘೋಸಿಸಬೇಕು’ ಎಂದು ಸಚಿನ್‌ ಸಲಹೆ ನೀಡಿದ್ದಾರೆ.

“ಹೌದು, ನ್ಯೂಜಿಲ್ಯಾಂಡಿಗೆ ಕಪ್‌ ಎತ್ತಲು ಸಾಧ್ಯವಾಗಲಿಲ್ಲ. ನನ್ನ ದೃಷ್ಟಿಯಲ್ಲಿ ಕಿವೀಸ್‌ ಕೂಡ ವಿಶ್ವಚಾಂಪಿಯನ್‌. ಇತ್ತಂಡಗಳ ಫೈನಲ್‌ ಹೋರಟ ಬಹಳ ರೋಚಕವಾಗಿತ್ತು. ವಿಶ್ವಕಪ್‌ ಇತಿಹಾಸದಲ್ಲಿ ಇಷ್ಟು ಜಿದ್ದಾಜಿದ್ದಿ ಪಂದ್ಯವನ್ನು ನಾನೆಂದೂ ಕಂಡಿರಲಿಲ್ಲ’ ಎಂದು ಸಚಿನ್‌ ಅಭಿಪ್ರಾಯಪಟ್ಟರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ