ಕೊಹ್ಲಿ, ಅನುಷ್ಕಾ ಮಧುಚಂದ್ರ ಫೋಟೋ ವೈರಲ್
Team Udayavani, Dec 16, 2017, 7:40 AM IST
ನವದೆಹಲಿ: ಪ್ರೇಮಿಗಳಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಡಿ.11 ರಂದು ಇಟಲಿಯಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇದೀಗ ಇವರು ಇನ್ಸ್ಟಾಗ್ರಾಮ್ನಲ್ಲಿ ಮಧುಚಂದ್ರದ ಫೋಟೋ ಅಪ್ಲೋಡ್ ಮಾಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶುಕ್ರವಾರ ಫೋಟೋ ಅಪ್ಲೋಡ್ ಮಾಡಿದ ಕೆಲವೇ ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಲೈಕ್ಗಳು ಬಂದಿವೆ. ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟಿಗರು, ಸ್ನೇಹಿತರು ಮತ್ತು ಕುಟುಂಬದವರಿಗಾಗಿ ದೆಹಲಿಯಲ್ಲಿ ಡಿ.21 ರಂದು ಮತ್ತು ಮುಂಬೈನಲ್ಲಿ ಡಿ.26 ರಂದು ಆರತಕ್ಷತೆ ನಡೆಯಲಿದೆ.