ಯೂತ್ ಒಲಿಂಪಿಕ್ಸ್ಗೆ ಅರ್ಚನಾ
Team Udayavani, Jun 10, 2018, 9:52 AM IST
ರಾರೊ ಟೊಂಗಾ (ಕುಕ್ ಐಲ್ಯಾಂಡ್ಸ್): ಬೆಂಗಳೂರಿನ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಗಿರೀಶ್ ಕಾಮತ್ ಅವರು ಆ. 6ರಿಂದ 18ರ ವರೆಗೆ ಆರ್ಜೆಂಟೀನಾದಲ್ಲಿ ನಡೆಯಲಿರುವ 2018ರ ಯೂತ್ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.
ಇಲ್ಲಿ ನಡೆಯುತ್ತಿರುವ 2018ರ ಯೂತ್ ಒಲಿಂಪಿಕ್ಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಾವಳಿಯ ಮಹತ್ವದ ಪಂದ್ಯದಲ್ಲಿ ಮಲೇಶ್ಯದ ಚಾಂಗ್ ಅಲೈಸ್ ಲೀ ಸಿಯಾನ್ ಅವರನ್ನು 11- 5, 9- 11, 11 -8, 11 -9, 11-8 ಅಂತರದಲ್ಲಿ ಮಣಿಸಿದ ಅರ್ಚನಾ ಕಾಮತ್, ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶ ತಮ್ಮದಾಗಿಸಿಕೊಂಡರು.
ಯೂತ್ ಒಲಿಂಪಿಕ್ಸ್ಗಾಗಿಯೇ ನಡೆದಿದ್ದ ಎರಡು ಅರ್ಹತಾ ಸುತ್ತುಗಳ ಪಂದ್ಯಾವಳಿಯಲ್ಲಿ ಅರ್ಚನಾ ವಿಫಲರಾಗಿದ್ದರು. ಟ್ಯುನೀಶಿಯಾದ ರೇಡ್ಸ್ನಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಯಶಸ್ಸು ಕಾಣದ ಅವರು, ಅನಂತರ ಬ್ಯಾಂಕಾಕ್ನಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಸೆಮಿಫೈನಲ್ವರೆಗೆ ಪಯಣಿಸಿದ್ದರು. ಆದರೆ ಫೈನಲ್ ಪ್ರವೇಶಿಸಲು ವಿಫಲರಾಗಿದ್ದರು. ಹೀಗಾಗಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಳ್ಳಲು ಮಲೇಶ್ಯದ ಅರ್ಹತಾ ಟೂರ್ನಿಯೇ ಅವರ ಪಾಲಿಗೆ ಅಂತಿಮ ಅವಕಾಶವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ