ರನ್ ಗಳಿಸಲು ಅರ್ಜುನ್ ವಿಫಲ
Team Udayavani, Jul 20, 2018, 6:10 AM IST
ಕೊಲಂಬೊ: ಅಂಡರ್-19 ವಿಭಾಗದಲ್ಲಿ ಮೊದಲ ಅಂತಾ ರಾಷ್ಟ್ರೀಯ ಪಂದ್ಯವಾಡುತ್ತಿರುವ ಅರ್ಜುನ್ ತೆಂಡುಲ್ಕರ್ ವಿಕೆಟ್ ಖಾತೆ ತೆರೆದರೂ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಯೂತ್ ಟೆಸ್ಟ್ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಜೂನಿಯರ್ ತೆಂಡುಲ್ಕರ್ 11 ಎಸೆತ ಎದುರಿಸಿದರೂ ರನ್ ಗಳಿಸದೆ ಶಶಿಕ ದುಲ್ಶನ್ಗೆ ವಿಕೆಟ್ ಒಪ್ಪಿಸಿದರು.
ಆತಿಥೇಯ ಶ್ರೀಲಂಕಾದ 244ಕ್ಕೆ ಜವಾಬಾಗಿ ಭರ್ಜರಿ ಉತ್ತರ ನೀಡಿರುವ ಭಾರತ ಮೊದಲ ಸರದಿಯಲ್ಲಿ 589 ರನ್ ಪೇರಿಸಿದೆ. 345 ರನ್ನುಗಳ ಭಾರೀ ಹಿನ್ನಡೆಯ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ 3ನೇ ದಿನ ದಾಟದ ಅಂತ್ಯಕ್ಕೆ 3 ವಿಕೆಟಿಗೆ 177 ರನ್ ಗಳಿಸಿದೆ. ಆರಂಭಕಾರ ನಿಶಾನ್ ಮದುಷ್ಕ 104 ರನ್ ಬಾರಿಸಿ ಗಮನ ಸೆಳೆದರು. ಭಾರತದ ಪರ ಆಯುಷ್ ಬದೋನಿ ಅಜೇಯ 185 ಹಾಗೂ ಓಪನರ್ ಅಥರ್ವ ತಾಯೆx 113 ರನ್ ಹೊಡೆದರು.
ಮೊದಲ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಉರುಳಿಸಿದ ಅರ್ಜುನ್ ತೆಂಡು ಲ್ಕರ್ (11-2-33-1), ದ್ವಿತೀಯ ಇನ್ನಿಂಗ್ಸ್ನಲ್ಲಿ ಈವರೆಗೆ ಯಶಸ್ಸು ಗಳಿಸಿಲ್ಲ. ಮೂರೂ ವಿಕೆಟ್ ಮೋಹಿತ್ ಜಂಗ್ರಾ ಪಾಲಾಗಿದೆ.