ಅರ್ಜುನ ಪೂಜಾರ, ಅಜಿಂಕ್ಯ ರಹಾನೆ ಅಜೇಯ ಶತಕ ವೈಭವ


Team Udayavani, Aug 4, 2017, 7:25 AM IST

vaibhava.jpg

ಕೊಲಂಬೊ: ಪಂದ್ಯದ ನಡುವಲ್ಲೇ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಸಿಹಿ ಸುದ್ದಿ ಆಲಿಸಿದ ಚೇತೇಶ್ವರ್‌ ಪೂಜಾರ ತಮ್ಮ 50ನೇ ಟೆಸ್ಟ್‌ ಪಂದ್ಯವನ್ನು ಅಜೇಯ ಶತಕದೊಂದಿಗೆ ಸ್ಮರಣೀಯಗೊಳಿಸಿದ್ದಾರೆ. ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಕೂಡ ಶತಕ ಸಂಭ್ರಮದೊಂದಿಗೆ ಕ್ರೀಸ್‌ ಆಕ್ರಮಿಸಿಕೊಂಡಿದ್ದಾರೆ. ಇವರಿಬ್ಬರ ದ್ವಿಶತಕದ ಜತೆಯಾಟದೊಂದಿಗೆ ಭಾರತ 3ಕ್ಕೆ 344 ರನ್‌ ಪೇರಿಸಿ ಮೊದಲ ದಿನವೇ ಶ್ರೀಲಂಕಾ ಎದುರಿನ ಕೊಲಂಬೊ ಟೆಸ್ಟ್‌ ಪಂದ್ಯ ದಲ್ಲಿ ಪ್ರಭುತ್ವ ಸಾಧಿಸಿದೆ.

ಚೇತೇಶ್ವರ್‌ ಪೂಜಾರ 128 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು ಪ್ರಸಕ್ತ ಸರಣಿಯಲ್ಲಿ ಪೂಜಾರ ಹೊಡೆದ ಸತತ 2ನೇ ಶತಕವಾದರೆ, ಲಂಕಾ ನೆಲದಲ್ಲಿ ಬಾರಿಸಿದ ಹ್ಯಾಟ್ರಿಕ್‌ ಸೆಂಚುರಿ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು 153 ರನ್‌ ಪೇರಿಸಿದ್ದರು. ಇದಕ್ಕೂ ಮುನ್ನ 2015ರ ಪ್ರವಾಸದ ವೇಳೆ ಕೊಲಂಬೋದಲ್ಲೆ ಆಡಲಾದ ಕೊನೆಯ ಟೆಸ್ಟ್‌ನಲ್ಲಿ ಅಜೇಯ 145 ರನ್‌ ಹೊಡೆದು ಮಿಂಚಿದ್ದರು. ಒಟ್ಟಾರೆಯಾಗಿ ಇದು ಪೂಜಾರ ಅವರ 13ನೇ ಶತಕ. ಈ ಮೆರೆದಾಟದ ವೇಳೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ ಪೂರೈಸಿದರು.

ಕಳೆದ ಋತುವಿನಲ್ಲಿ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಅಜಿಂಕ್ಯ ರಹಾನೆ ದಿನದಾಟದ ಕೊನೆಯಲ್ಲಿ ಸೆಂಚುರಿ ಸಂಭ್ರಮದಲ್ಲಿ ಮಿಂದೆದ್ದರು. ಅಜಿಂಕ್ಯ ಕೊಡುಗೆ ಅಜೇಯ 103 ರನ್‌. ಇದು ಅವರ 9ನೇ ಶತಕ. ಕಳೆದ ಅಕ್ಟೋಬರ್‌ನಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಇಂದೋರ್‌ನಲ್ಲಿ 188 ರನ್‌ ಪೇರಿಸಿದ ಬಳಿಕ ಹೊಡೆದ ಮೊದಲ ಶತಕ. ಶ್ರೀಲಂಕಾ ವಿರುದ್ಧ ಎರಡನೆಯದು.

ಪೂಜಾರ-ರಹಾನೆ ಭರ್ತಿ 51.1 ಓವರ್‌ಗಳನ್ನು ನಿಭಾಯಿಸಿದ್ದು, ಮುರಿಯದ 4ನೇ ವಿಕೆಟಿಗೆ 211 ರನ್‌ ಒಟ್ಟುಗೂಡಿಸಿದ್ದಾರೆ. ಪೂಜಾರ 225 ಎಸೆತ ಎದುರಿಸಿದ್ದು, 10 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಕೂಡ ಎತ್ತಿದ್ದಾರೆ. ರಹಾನೆ ಎದುರಿಸಿದ್ದು 168 ಎಸೆತ. ಇದರಲ್ಲಿ ಒಂದು ಡಜನ್‌ ಬೌಂಡರಿ ಸೇರಿದೆ.

ರಾಹುಲ್‌ ಸತತ 6ನೇ ಫಿಫ್ಟಿ
ಆರಂಭಕಾರ ಕೆ.ಎಲ್‌. ರಾಹುಲ್‌ ಭಾರತದ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್‌. ಸಂಪೂರ್ಣ ಚೇತರಿಸಿಕೊಂಡು ಆಡಲಿಳಿದ ರಾಹುಲ್‌ 57 ರನ್‌ ಹೊಡೆದು ರನೌಟಾದರು. ಇದು ರಾಹುಲ್‌ ಅವರ ಸತತ 6ನೇ ಅರ್ಧ ಶತಕ ಎಂಬುದೊಂದು ಸಾಧನೆ. 82 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ರಾಹುಲ್‌-ಶಿಖರ್‌ ಧವನ್‌ ಮೊದಲ ವಿಕೆಟಿಗೆ 10.1 ಓವರ್‌ಗಳಲ್ಲಿ 56 ರನ್‌ ಪೇರಿಸಿದರು. ಧವನ್‌ ಗಳಿಕೆ 35 ರನ್‌ (37 ಎಸೆತ, 5 ಬೌಂಡರಿ, 1 ಸಿಕ್ಸರ್‌). ನಾಯಕ ವಿರಾಟ್‌ ಕೊಹ್ಲಿ ಕೇವಲ 13 ರನ್‌ ಮಾಡಿ ನಿರ್ಗಮಿಸಿದರು. 133ಕ್ಕೆ 3ನೇ ವಿಕೆಟ್‌ ಬಿದ್ದಾಗ ಲಂಕೆಗೆ ಮೇಲುಗೈ ಸಾಧಿಸುವ ಅವಕಾಶವೊಂದು ಎದುರಾಗಿತ್ತು. ಆದರೆ ಪೂಜಾರ-ರಹಾನೆ ಇದಕ್ಕೆ ದೊಡ್ಡ ತಡೆಯಾಗಿ ನಿಂತಿದ್ದಾರೆ. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಗಾಲೆಯ ಆಟವನ್ನೇ ಪುನರಾವರ್ತಿಸಿದ್ದು, ಮತ್ತೂಮ್ಮೆ ಬೃಹತ್‌ ಮೊತ್ತ ಪೇರಿಸಿದರೆ ಲಂಕೆಗೆ ಸರಣಿ ಸೋಲಿನ ಕಂಟಕ ಎದುರಾಗುವುದರಲ್ಲಿ ಅನುಮಾನವಿಲ್ಲ.

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.