ರಣಜಿ: ತಂಡಕ್ಕೆ ಮರಳಿದ ಎಸ್. ಅರವಿಂದ್
Team Udayavani, Dec 2, 2017, 6:45 AM IST
ಬೆಂಗಳೂರು: ನಾಗ್ಪುರದಲ್ಲಿ ಮುಂಬಯಿ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಎರಡು ಪಂದ್ಯಗಳಿಂದ ಹೊರಗಿದ್ದ ವೇಗಿ ಎಸ್. ಅರವಿಂದ್ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ.
ರಾಜ್ಯ ತಂಡವನ್ನು ಅನುಭವಿ ವಿನಯ್ ಕುಮಾರ್ ಮುನ್ನಡೆಸಲಿದ್ದಾರೆ. ಟೆಸ್ಟ್ ತಂಡಲ್ಲಿರುವುದರಿಂದ ರಾಜ್ಯ ತಂಡಕ್ಕೆ ಕೆ.ಎಲ್. ರಾಹುಲ್ ಸೇವೆ ಲಭ್ಯವಾಗುವುದಿಲ್ಲ. ಉಳಿದಂತೆ ರೈಲ್ವೇಸ್ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಭರ್ಜರಿ ಫಾರ್ಮ್ನಲ್ಲಿರುವ ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಆರ್. ಸಮರ್ಥ್, ಮನೀಷ್ ಪಾಂಡೆ, ಕೆ. ಗೌತಮ್ ತಂಡದಲ್ಲಿರುವ ತಾರಾ ಆಟಗಾರರು.
ಕರ್ನಾಟಕ-ಮುಂಬಯಿ ಪಂದ್ಯ ಡಿ. 7ರಿಂದ 11ರ ವರೆಗೆ ನಡೆಯಲಿದೆ.